ಮಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ: ನಿಷೇಧಿತ ಪಿಎಫ್ಐ ನೆಟ್ವರ್ಕ್ ತಲಾಶ್!

Published : Aug 13, 2023, 07:24 PM ISTUpdated : Aug 13, 2023, 07:25 PM IST
ಮಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ: ನಿಷೇಧಿತ ಪಿಎಫ್ಐ ನೆಟ್ವರ್ಕ್ ತಲಾಶ್!

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆ ಸೇರಿ ದೇಶದ 14 ಕಡೆಗಳಲ್ಲಿ ಭಾನುವಾರವಾದ ಇಂದು ಎನ್.ಐ.ಎ ದಾಳಿ ನಡೆಸಿದ್ದು, ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ  NIA ಕಾರ್ಯಾಚರಣೆ ನಡೆಸಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.13): ದಕ್ಷಿಣ ಕನ್ನಡ ಜಿಲ್ಲೆ ಸೇರಿ ದೇಶದ 14 ಕಡೆಗಳಲ್ಲಿ ಭಾನುವಾರವಾದ ಇಂದು ಎನ್.ಐ.ಎ ದಾಳಿ ನಡೆಸಿದ್ದು, ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ  NIA ಕಾರ್ಯಾಚರಣೆ ನಡೆಸಿದೆ.

ಉಳ್ಳಾಲದ ಕಿನ್ಯಾ, ಒಳಚ್ಚಿಲ್ ಪದವು ಮತ್ತು ಪಾಣೆಮಂಗಳೂರಿನ ಮೆಲ್ಕಾರ್ ನಲ್ಲಿ ಎನ್ ಐ ಎ ದಾಳಿ ನಡೆದಿದೆ. ಮೆಲ್ಕಾರ್ ನ ಇಬ್ರಾಹಿಂ ಎಂಬವರ ಮನೆಯಲ್ಲಿ NIA ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿರುವ ಇಬ್ರಾಹಿಂ, ಪಿಎಫ್ಐ ನಿಷೇಧದ ಬಳಿಕ ತಲೆ ಮರೆಸಿಕೊಂಡಿದ್ದ. ಇಬ್ರಾಹಿಂ ಮನೆಯಲ್ಲಿ ಪರಿಶೀಲಿಸಿ ಕೆಲ ದಾಖಲೆಗಳನ್ನು NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ಸಂದರ್ಭದಲ್ಲಿ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಹಿಂದೆ ನಿಷೇಧಿತ PFI ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಪತ್ತೆ ಮಾಡಿದ್ದ NIAಗೆ ಬಂಧಿತರ ವಿಚಾರಣೆ ಸಂದರ್ಭದಲ್ಲಿ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್(PFI Funding Network) ಗೆ ಇಬ್ರಾಹಿಂ ಲಿಂಕ್ ಇರೋದು ಗೊತ್ತಾಗಿತ್ತು. ಭಾರತದಲ್ಲಿ ಭಯೋತ್ಪಾದನೆ(Terrorism in india)ಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆಯಾಗಿದೆ. ಮಂಗಳೂರು ಹೊರವಲಯದ ಒಳಚ್ಚಿಲ್ ಪದವು ಮತ್ತು ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ದಾಳಿ ನಡೆಸಲಾಗಿದೆ‌. ವಳಚ್ಚಿಲ್ನ ಮುಸ್ತಾಕ್ ಎಂಬವರ ಮನೆ ಮೇಲೆ ಎನ್ಐಎ ದಾಳಿ(NIA Raid today) ನಡೆದಿದ್ದು,ಬಂಟ್ವಾಳದ ಮೆಲ್ಕಾರ್ ನ ಇಬ್ರಾಹಿಂ ನಂದಾವರ(Ibrahim Nandavara) ಎಂಬವರ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ.

ದೇಶದ ಐದು ರಾಜ್ಯಗಳಲ್ಲಿ ಎನ್ಐಎ ದಾಳಿ!

ಎನ್ಐಎ ಇಂದು 5 ರಾಜ್ಯಗಳ 14 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳ ಕಣ್ಣೂರು, ಮಲಪ್ಪುರಂ, ದಕ್ಷಿಣ ಕನ್ನಡ, ನಾಸಿಕ್, ಕೊಲ್ಲಾಪುರ, ಮುರ್ಷಿದಾಬಾದ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಒಟ್ಟು 14 ಸ್ಥಳಗಳು ದಾಳಿಯ ಭಾಗವಾಗಿತ್ತು. ದಾಳಿಯ ಸಮಯದಲ್ಲಿ ಹಲವಾರು ದೋಷಾರೋಪಣೆಯ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ರಾಷ್ಟ್ರ ಅನ್ನು ಸ್ಥಾಪಿಸಲು ಸಶಸ್ತ್ರ ಕೇಡರ್ ಮತ್ತು PFI ಸೈನ್ಯವನ್ನು ಹೆಚ್ಚಿಸಿ ಭಯೋತ್ಪಾದನೆ, ಹಿಂಸೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಯುವಕರನ್ನು ಸೆಳೆಯಲು ಪಿಎಫ್‌ಐ ಪಿತೂರಿ ನಡೆಸಿತ್ತು. ಆಯುಧಗಳು, ಕಬ್ಬಿಣದ ಸರಳುಗಳು, ಕತ್ತಿಗಳು ಮತ್ತು ಚಾಕುಗಳ ಬಳಕೆಯಲ್ಲಿ ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡಲು ದೇಶದ ವಿವಿಧ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿತ್ತು ಎನ್ನಲಾಗಿದೆ.  ಇದಕ್ಕೆ ಕೆಲ ಮಧ್ಯಮ ಮಟ್ಟದ ಪಿಎಫ್ಐ ಏಜೆಂಟ್‌ಗಳು ಮಾಸ್ಟರ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು NIA ಶಂಕಿಸಿದೆ. ಗುಪ್ತಚರ ಮತ್ತು ತನಿಖಾ ವಿಶ್ಲೇಷಣೆ ಮತ್ತು ಒಳನೋಟಗಳ ಆಧಾರದ ಮೇಲೆ ಈ ಕಾರ್ಯಕರ್ತರು ಮತ್ತು ಕಾರ್ಯಕರ್ತರನ್ನು ಗುರುತಿಸಲು ಮತ್ತು ಬಂಧಿಸಲು ಕಳೆದ ಹಲವು ತಿಂಗಳುಗಳಿಂದ ವಿವಿಧ ರಾಜ್ಯಗಳಲ್ಲಿ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ. PFI ವಿರುದ್ಧ ದೆಹಲಿ ಎನ್ಐಎ 2022ರ ಎಪ್ರಿಲ್ ನಲ್ಲಿ ಪ್ರಕರಣ ದಾಖಲಿಸಿತ್ತು. ಆ ಬಳಿಕ ದೇಶಾದ್ಯಂತ ಕಾರ್ಯಾಚರಣೆಗಳ ನಂತರ ಹಲವು ಪಿಎಫ್ಐ ನಾಯಕರ ಬಂಧನವಾಗಿತ್ತು. NIA ಆರೋಪಿಗಳ ವಿರುದ್ಧ ತೀವ್ರ ತನಿಖೆಗಳನ್ನು ನಡೆಸಿ ಮಾರ್ಚ್ 2023ರಲ್ಲಿ 19 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಬಳಿಕ ಏಪ್ರಿಲ್ 2023 ರಲ್ಲಿ ಶಸ್ತ್ರಾಸ್ತ್ರ ತರಬೇತಿಯ ಹಿನ್ನೆಲೆ PFI ರಾಷ್ಟ್ರೀಯ ಸಂಯೋಜಕನ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಋತುಚಕ್ರ ರಜೆ’ಗೆ ತಡೆ ನೀಡಿ ಹಿಂಪಡೆದ ಹೈಕೋರ್ಟ್‌
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ