
ನವದೆಹಲಿ(ಮೇ.14): ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸ್‌ನಿಂದ ಪ್ರೇರಣೆಗೊಂಡು ಬೆಂಗಳೂರಿನಲ್ಲಿ ಉಗ್ರ ಸಂಘಟನೆ ಕಟ್ಟಿದ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೊಗ್ಗ ಮೂಲದ ಯುವಕನ ಕುರಿತು ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 3 ಲಕ್ಷ ರು. ಬಹುಮಾನ ಘೋಷಣೆ ಮಾಡಿದೆ.
ಶಿವಮೊಗ್ಗದ ಅಬ್ದುಲ್ ಮಥೀನ್ (26) ಎಂಬಾತನ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯಡಿ ಎನ್‌ಎಐ ಪ್ರಕರಣ ದಾಖಲಿಸಿದೆ. ಆತ ತಲೆಮರೆಸಿಕೊಂಡಿರುವುದರಿಂದ ಬಂಧನ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆತನ ಬಂಧನಕ್ಕೆ ಕಾರಣವಾಗುವಂತಹ ಸುಳಿವು ನೀಡಿದವರಿಗೆ 3 ಲಕ್ಷ ರು. ನೀಡುವುದಾಗಿ ಬುಧವಾರ ಪ್ರಕಟಿಸಿದೆ.
ದಾವೂದ್ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್ ಉಗ್ರ ಸಂಚು!
ಯಾರು ಈತ?:
ಮೆಹಬೂಬ್ ಪಾಷಾ, ಖಾಜಾ ಮೊಯಿದ್ದೀನ್ ಹಾಗೂ ಆತನ ಸಹಚರರು ತಮಿಳುನಾಡಿನ ಹಿಂದು ಸಂಘಟನೆಯ ನಾಯಕರೊಬ್ಬರನ್ನು ಹತ್ಯೆ ಮಾಡಿದ್ದರು. ಇದೇ ತಂಡ ಐಸಿಸ್‌ನಿಂದ ಪ್ರೇರಣೆ ಪಡೆದು ಅಲ್- ಹಿಂದ್ ಐಸಿಸ್ ಸಂಘಟನೆಯನ್ನು ಬೆಂಗಳೂರಿನಲ್ಲಿ ಕಟ್ಟಿತ್ತು. 2019ರಲ್ಲಿ ಬೆಂಗಳೂರಿನ ಗುರಪ್ಪನಪಾಳ್ಯದ ತನ್ನ ನಿವಾಸದಲ್ಲಿ ಪಾಷಾ ಹಲವಾರು ಸಭೆಗಳನ್ನು ನಡೆಸಿದ್ದ. ಯುವಕರನ್ನು ನೇಮಕ ಮಾಡಿಕೊಂಡು, ಮೂಲಭೂತವಾದಿಗಳನ್ನಾಗಿಸಿ, ಭಯೋತ್ಪಾದಕ ಚಟುವಟಿಕೆ ನಡೆಸುವುದು ಹಾಗೂ ಆಷ್ಘಾನಿಸ್ತಾನ/ಸಿರಿಯಾದಲ್ಲಿನ ಐಸಿಸ್‌ಗೆ ಸೇರಿಸುವುದು ಈ ಗ್ಯಾಂಗ್‌ನ ಉದ್ದೇಶ ಆಗಿತ್ತು.
ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!
ಈ ಪ್ರಕರಣ ಸಂಬಂಧ ಪಾಷಾ, ಸಲೀಮ್ ಖಾನ್, ಮೊಹಮ್ಮದ್ ಝೈದ್ ಎಂಬುವರು ಸೇರಿ 12 ಮಂದಿಯ ಬಂಧನವಾಗಿತ್ತು. ಸಲೀಂ ಹಾಗೂ ಝೈದ್ ಮೂಲಕ ಪಾಷಾ ಸಂಪರ್ಕಕ್ಕೆ ಮಥೀನ್ ಬಂದಿದ್ದ. ಆನ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ