ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಮುಂದಿನ 24 ಗಂಟೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಲಕ್ಷಣ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ. 23ರಿಂದ 25ರವರೆಗೆ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಿಗೆ ಬೇರೆ ಬೇರೆ ದಿನಗಳಲ್ಲಿ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು/ಕಲಬುರಗಿ(ಸೆ.22): ಉತ್ತರ ಒಳನಾಡು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ ನಾಲೈದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಮುಂದಿನ 24 ಗಂಟೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಲಕ್ಷಣ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ. 23ರಿಂದ 25ರವರೆಗೆ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಿಗೆ ಬೇರೆ ಬೇರೆ ದಿನಗಳಲ್ಲಿ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ಆಕಾಶದಿಂದ ಬರಲಿದೆ ಭಾರೀ ಆಪತ್ತು: ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ
ಕಲಬುರಗಿಯಲ್ಲಿ ಸತತ 2 ಗಂಟೆ ಉತ್ತರಿ ಮಳೆ ಅಬ್ಬರ
ಕಲಬುರಗಿ: ಕಳೆದಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಕಲಬುರಗಿಯಲ್ಲಿ ಮತ್ತೆ ಶನಿವಾರ ಅಬ್ಬರಿಸಿದ್ದಾನೆ. ಉತ್ತರಿ ಮಳೆ ಅಬ್ಬರಕ್ಕೆ ತೊಗರಿ, ಹತ್ತಿ ಹೊಲ ಗದ್ದೆಗಳು ಕೆರೆಯಂತಾಗಿವೆ. ಶನಿವಾರ ಮಧ್ಯಹ್ನ 1 ಗಂಟೆಯಿಂದ ಜೇವರ್ಗಿ, ಕಲಬುರಗಿ, ಸೇಡಂ, ಆಳಂದ, ಶಹಾಬಾದ್ ತಾಲೂಕಿನಾದ್ಯಂತ ಬಿರುಸಿನ ಮಳೆ ಸುರಿದಿದೆ.
ಸರಡಗಿ, ಶಹಾಬಾದ್ ಕ್ರಾಸ್, ಫಿರೋಜಾಬಾದ್, ಫರತಾಬಾದ್, ನದಿ ಸಿನ್ನೂರ್, ಕಡಗಂಚಿ, ಆಳಂದ, ತಡಕಲ್, ಚಿಂಚನ್‌ಸೂರ್, ಶಹಾಬಾದ್, ಖಜೂರಿ, ಸೇಡಂ ತಾಲೂಕಿನ ಕೆಲವು ಗ್ರಾಮಗಳು, ನಂದೂರ್ ಕೆ ಕಡಣಿ, ಅಫಜಲ್ಪೂ ತಾಲೂಕಿನ ಗೊಬ್ಬೂರ್ ಬಿ ನೀಲೂರ್ ಸೇರಿದಂತೆ ಹಲವೆಡೆ ಬಿರುಸಿನಿಂದ ಮಳೆಯಾಗಿದೆ.
ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಧರೆಗುರುಳಿವೆ 3,077 ವಿದ್ಯುತ್ ಕಂಬಗಳು: 4.83 ಕೋಟಿ ರೂಪಾಯಿ ನಷ್ಟ
ಮಧ್ಯಾಹ್ನ ಬಿಡುವಲ್ಲದಂತೆ ಸತತ 2 ಗಂಟೆಗೂ ಅಧಿಕ ಅವಧಿ ಮಳೆ ಸುರಿದಿದೆ. ಇದರಿಂದಾಗಿ ಕಲಬುರಗಿ ಹಾಗೂ ಜೇವರ್ಗಿ ರಸ್ತೆಯಲ್ಲಿ ಮಂಜು ಕವಿದಿತ್ತು. ಫರತಾಬಾದ್, ಫಿರೋಜಾಬಾದ್ ಸೀಮಾಂತರದಲ್ಲಿ ತೊಗರಿ ಹಾಗೂ ಹತ್ತಿ ಫಸಲಿದ್ದ ಹೊಲಗದ್ದೆಗಳು ಕರೆಯಂತಾಗಿವೆ. 2 ಅಡಿಗೂ ಅಧಿಕ ಮಳೆ ನೀರು ಈ ಹೊಲಗದ್ದೆಗಳಲ್ಲಿ ಶೇಖರಗೊಂಡ ನೋಟಗಳು ಕಂಡಿವೆ. ಇದಲ್ಲದೆ ಇಲ್ಲಿ ರೈತರು ತಾವು ಬಿತ್ತಿತದ್ದ ಎಳ್ಳು ರಾಶಿ ಮಾಡಲಾಗದೆ ಪರಿತರಿಸುತ್ತಿದ್ದಾರೆ. ಅನೇಕರು ಎಳ್ಳಿನ ಸೂಡು ಕಟ್ಟಟ್ಟು ಇನ್ನೇನು ರಾಶಿಗೆ ಮುಂದಾಗೋಣ ಎಂಬಂತಿರುವಾಗಲೇ ಮಳೆ ಸುರಿದಿದೆ. ಹೀಗಾಗಿ ಅನೇಕರ ಎಳ್ಳು ಫಸಲು ಹಾನಿಯಾಗಿದೆ.
ಶನಿವಾರದಿಂದ ಉತ್ತರಿ ಮಳೆಯ ಅಬ್ಬರ ಶುರುವಾಗಿದ್ದು ಇದು ಇನ್ನೂ 5 ದಿನ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ಇದೀಗ ರೈತರು ಹೊಲಗದ್ದೆ ಹಸನು ಮಾಡಿಟ್ಟುಕೊಂಡಿದ್ದು ಉತ್ತರಿ ಮಳೆಗೇ ಕಾದು ಕುಳಿತಿದ್ದರು. ಇದೀಗ ರೈತರು ಜೋಳ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.