* ಕರ್ನಾಟಕದ ಕೊರೋನಾ ಅಪ್ಡೇಟ್ಸ್
* ಕರ್ನಾಟಕದಲ್ಲಿ ಹೊಸದಾಗಿ 239 ಕೊರೋನಾ ಕೇಸ್
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ
ಬೆಂಗಳೂರು, (ನ.07): ಕರ್ನಾಟಕದಲ್ಲಿ ಇಂದು (ನ. 7) ಹೊಸದಾಗಿ 239 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿನಿಂದ 5 ಜನರು ಬಲಿಯಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,89,952 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,43,809 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಕೊರೋನಾದಿಂದ 38,112 ಜನ ಸಾವನ್ನಪ್ಪಿದ್ದಾರೆ.
undefined
ಫೈಜರ್ನಿಂದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ
ರಾಜ್ಯದಲ್ಲಿ 8,002 ಕೊರೊನಾ ಸಕ್ರಿಯ ಪ್ರಕಟರಣಗಳಿವೆ. ಕೊರೋನಾ ಪಾಸಿವಿಟಿ ದರ ಶೇ. 0.21 ಇದ್ರೆ ಸಾವಿನ ಪ್ರಮಾಣ ಶೇ. 2.09 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಭಾನುವಾರ) ಒಂದೇ ದಿನ 151 ಜನರಿಗೆ ಕೊರೋನಾ ದೃಢಪಟ್ಟಿದ್ದು, ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.
ಈ ಮೂಲಕ ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,52,831ಕ್ಕೆ ಏರಿಕೆಯಾಗಿದೆ. ಈ ಪೈಕಿ 12,30,170 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೋನಾದಿಂದ ಈವರೆಗೆ 16,295 ಜನರಿ ಸಾವನಪ್ಪಿದ್ದಾರೆ. ಇನ್ನು ನಗರದಲ್ಲಿ 6,365 ಸಕ್ರಿಯ ಪ್ರಕರಣಗಳಿವೆ.
ಎಲ್ಲಿ ಎಷ್ಟು ಸಾವು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೂಡ ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ.
ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 151, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 3, ಚಿತ್ರದುರ್ಗ 0, ದಕ್ಷಿಣ ಕನ್ನಡ 11, ದಾವಣಗೆರೆ 1, ಧಾರವಾಡ 6, ಗದಗ 0, ಹಾಸನ 12, ಹಾವೇರಿ 0, ಕಲಬುರಗಿ 0, ಕೊಡಗು 4, ಕೋಲಾರ 2, ಕೊಪ್ಪಳ 0, ಮಂಡ್ಯ 5, ಮೈಸೂರು 17, ರಾಯಚೂರು 0, ರಾಮನಗರ 0, ಶಿವಮೊಗ್ಗ 2, ತುಮಕೂರು 4, ಉಡುಪಿ 5, ಉತ್ತರ ಕನ್ನಡ 12, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಕೊರೋನಾಗೆ (Corona) ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ ಲಸಿಕಾ ಸಂಸ್ಥೆ ಫೈಜರ್ (Pfizer) ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದ್ದು, ಅದು ಶೇ. 89 ರಷ್ಟು ಪ್ರಯೋಜನಕಾರಿ.
ಫೈಜರ್ ಮಾತ್ರೆ (Pill) ಲಸಿಕೆಯಂತೆ ಅತ್ಯಂತ ಪ್ರಯೋಜನವನ್ನು ಹೊಂದಿದ್ದು, ಕೊರೋನಾ ವಿರುದ್ಧ ಶೇ. 89ರಷ್ಟು ಪರಿಣಾಮಕಾರಿಯಾಗಿ ಹೋರಾಡಿ ರೋಗ ನಿರೋಧಕ (Immunity Power) ಶಕ್ತಿ ಹೆಚ್ಚಳ ಮಾಡುತ್ತದೆ. ಆಸ್ಪತ್ರೆಗೆ ಸೇರುವ ಪ್ರಮಾಣವನ್ನು ತಡೆಯುತ್ತದೆ. ಇದರಿಂದ ಸಾವಿನ ದುರಮತ ಗಣನೀಯ ಪ್ರಮಾಣದಲ್ಲಿ ತಡೆಯಬಹುದಾಗಿದೆ ಎಂದು ಹೇಳಿದೆ.
ಫೈಜರ್ನಿಂದ ಕೋವಿಡ್ ಮಾತ್ರೆ ಅಭಿವೃದ್ಧಿ
ಮಾತ್ರೆಯಿಂದ ಕೊರೋನಾ (Corona) ರೋಗಿಗಳ ಚಿಕಿತ್ಸೆಯೂ ಸಹ ಸುಲಭವಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ (MedicalTest) ಪಾಸ್ ಆಗಿದೆ ಎಂದು ಸಂಸ್ಥೆ ತಿಳಿಸಿದೆ,
ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ಫೈಜರ್ ಸಂಸ್ಥೆ ನಿರ್ಧಾರ ಮಾಡಿದ್ದು, ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಕ್ಯೂಲೇಟರ್‌ಗೆ ಸಲ್ಲಿಸಲಾಗಿದೆ. ಎಂದು ಮಾಹಿತ ನೀಡಿದೆ.
ರೋಗಿಗಳನ್ನು ಉಪಚಾರ ಮಾಡುವಾಗ ದಿನಕ್ಕೆ ಮೂರು ಮಾತ್ರೆಗಳಂತೆ ನಿಡಲಾಗುತ್ತದೆ. ಪಾಕ್ಸ್‌ಲೊವಿಡ್ ಎಂದು ಬ್ರ್ಯಾಂಡ್ಗೆ ಹೆಸರಿಡಲಾಗಿದೆ. ಇನ್ನು ಮಾತ್ರೆಗಳ ಅಭಿವೃದ್ಧಿ ಬಳಿಕ ಮಾರುಕಟ್ಟೆಯಲ್ಲಿ ಕಂಪನಿಯ ಶೇರುಗಳ ಬೆಲೆಯಲ್ಲಿಯೂ ಏರಿಕೆ ಕಂಡು ಬಂದಿದೆ.