
ಬೆಂಗಳೂರು, (ಜುಲೈ.13): ನಾಳೆ ಅಂದ್ರೆ ಜುಲೈ 14 (ಮಂಗಳವಾರ) ರಾತ್ರಿ 8ರಿಂದ ಒಂದು ವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸಂಪೂರ್ಣವಾಗಿ ಸ್ತಬ್ಧವಾಗಲಿವೆ.
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಎರಡು ಜಿಲ್ಲೆಗಳಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಒಂದು ವಾರದ ಲಾಕ್ ಡೌನ್ ಮಾಡುವುದಾಗಿ ಘೋಷಣೆಯಾಗಿದೆ.
ಲಾಕ್‌ಡೌನ್ ಬಗ್ಗೆ ಬಿಎಸ್‌ವೈ ಸ್ಪಷ್ಟನೆ: ಎಲ್ಲಾ ಗೊಂದಲಗಳಿಗೆ ತೆರೆ
ಲಾಕ್‌ಡೌನ್ ಸಂದರ್ಭದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಇಂದು (ಸೋಮವಾರ) ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಅದು ಈ ಕೆಳಗಿನಂತಿದೆ ನೋಡಿ.
ಏನಿರುತ್ತೆ...?
* ಹಣ್ಣು, ಹಾಲು ಮತ್ತು ದಿನಸಿ ಅಂಗಡಿ ಓಪನ್ ಇರುತ್ತವೆ.
* ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬಹುದು.
* ಮೊಟ್ಟೆ, ಮೀನು, ಮಾಂಸ ಮಾರಾಟಕ್ಕೆ ನಿಷೇಧ ಇಲ್ಲ.
* ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಇರುವುದಿಲ್ಲ.
* ಹೋಟೆಲ್, ರೆಸ್ಟೋರೆಂಟ್ ಪಾರ್ಸೆಲ್ ಸೇವೆ ಮುಂದುವರಿಕೆ
* ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
* ಆರೋಗ್ಯ, ವೈದ್ಯಕೀಯ ಶಿಕ್ಷಣ, ಗೃಹ ರಕ್ಷಣ ದಳ, ಪೊಲೀಸ್, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ಇತರೆ ತುರ್ತು ಸೇವೆಗಳು ಲಭ್ಯವಿರುತ್ತವೆ.
* ಮೆಡಿಕಲ್ ಶಾಪ್ ಇರುತ್ತವೆ.
* ಎಲ್ಲಾ ಆರೋಗ್ಯ ಸೇವೇಗಳು ಎಂದಿನಂತೆ ಸಿಗಲಿವೆ.
* ರಾಜ್ಯ ಖಜಾನೆಗಳು ಕಾರ್ಯನಿರ್ವಹಣೆ
* ಔಷಧ ಕಾರ್ಖಾನೆಗಳಿಗೆ ವಿನಾಯಿತಿ
* ತುರ್ತು ಸಂದರ್ಭದಲ್ಲಿ ಮಾತ್ರ ಪ್ರಯಾಣಿಕರ ವಾಹನಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಯಾಣಕ್ಕೆ ಅವಕಾಶ
* ಅನುಮತಿ ಪಡೆದ ಕಾರ್ಯಚಟುವಟಿಕೆಗಳಿಗಾಗಿ /ಕಚೇರಿಗೆ ಹೋಗಿ ಬರಲು ಅರ್ಹ ಗುರುತಿನ ಚೀಟಿ ಕಡ್ಡಾಯ
* ಇ ಕಾರ್ಮರ್ಸ್ ಮೂಲಕ ಆಹಾರ, ಔಷಧ, ವೈದ್ಯಕೀಯ ಸಲಕರಣೆಗಳ ಸರಬರಾಜು ಮಾಡಬಹುದು
* ವಿಶೇಷ ಆರ್ಥಿಕ ವಲಯಗಳು ಮತ್ತು ಕೈಗಾರಿಕಾ ಟೌನ್ ಗಳಲ್ಲಿನ ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು
* ಪ್ಯಾಕಿಂಗ್ ಸಾಮಗ್ರಿಗಳ ಉತ್ಪಾದನೆ ಮಾಡವಹುದು
ಏನಿರಲ್ಲ...?
* ಮೆಟ್ರೋ ರೈಲು ಸೇವೆ ಇರುವುದಿಲ್ಲ.
* ಟ್ಯಾಕ್ಸಿ, ಆಟೋ, ಕ್ಯಾಬ್ ಇರುವುದಿಲ್ಲ.
* ಶಾಲೆ-ಕಾಲೇಜುಗಳು, ಕೋಚಿಂಗ್ ಸೆಂಟರ್‌ಗಳು ಈಗಾಗಲೇ ಮುಚಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ.
* ಲಾಡ್ಜ್ ಸೇರಿದಂತೆ ಅತಿಥ್ಯ ಸೇವೇಗಳಿಗೆ ನಿರ್ಬಂಧ
* ದೇವಾಲಯ, ಚರ್ಚ್, ಮಸೀದಿ ಬಂದ್ ಮಾಡಲಾಗುವುದು
* ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಕಚೇರಿಗಳು ಸ್ವಾತಯತ್ತ ಸಂಸ್ಥೆ ಹಾಗೂ ನಿಗಮಗಳು ಸಹ ಬಂದ್
* ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಶೇಕಡಾ 50 % ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಾಹಿಸಬೇಕು..
* ಮಾಲ್, ಚಿತ್ರಮಂದಿರ ಬಂದ್
* ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ಕ್ರೀಡಾ, ಸಮಾರಂಭ ಗಳು ರದ್ದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ