ಮುಂಬರುವ ದಿನಗಳಲ್ಲಿ ಉಭಯ ಮಠಗಳು ಸೌಹಾರ್ದದಿಂದ ಒಗ್ಗಟ್ಟಾಗುವ ಸಮಯ ಕೂಡಿ ಬಂದಿದೆ ಎಂದು ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳು ಹೇಳಿದರು.
ಗಂಗಾವತಿ(ಕೊಪ್ಪಳ) (ಡಿ.11) : ಮುಂಬರುವ ದಿನಗಳಲ್ಲಿ ಉಭಯ ಮಠಗಳು ಸೌಹಾರ್ದದಿಂದ ಒಗ್ಗಟ್ಟಾಗುವ ಸಮಯ ಕೂಡಿ ಬಂದಿದೆ ಎಂದು ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳು ಹೇಳಿದರು. ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಭಾನುವಾರ ಶ್ರೀ ಪದ್ಮನಾಭತೀರ್ಥ ಶ್ರೀಪಾದರ 700ನೇ ವರ್ಷದ ಪೂರ್ವಾರಾಧನೆ ಕಾರ್ಯಕ್ರಮ ನೆರವೇರಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು.
ನವವೃಂದಾವನದ ವಿವಾದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ ಎಂದ ಅವರು, ಇದು ದೀರ್ಘಾವಧಿಯ ವಿವಾದವಾಗಿದೆ. ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ವಿವಾದ ಬಗೆಹರಿಸಿಕೊಳ್ಳಲು ನಾವು ಮೊದಲಿಗರಾಗಿದ್ದೇವೆ ಎಂದರು.
undefined
ಅಯೋಧ್ಯೆ ರಾಮ ಮಂದಿರ ದೇಗುಲ ಲೈಟಿಂಗ್ ಹೊಣೆ ಕನ್ನಡಿಗ ರಾಜೇಶ್ ಶೆಟ್ಟಿಗೆ!
ನವವೃಂದಾವನದಲ್ಲಿ ಮೂಲ ಸೌಲಭ್ಯಕ್ಕೆ ರಾಯರ ಮಠದಿಂದ ಕ್ರಮ ಕೈಗೊಳ್ಳಲಾಗಿದೆ. ನವವೃಂದಾವನ ಈಗ ಸರ್ಕಾರದ ಸುಪರ್ದಿಯಲ್ಲಿರುವುದರಿಂದ ನ್ಯಾಯಾಲಯದ ಆದೇಶ ಪಾಲನೆ ಮಾಡಲಾಗುವುದು. ಸರ್ಕಾರದ ಅನುಮತಿ ಪಡೆದು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಉಭಯ ಮಠಗಳು ಸೌಹಾರ್ಧತೆಯಿಂದ ಒಗ್ಗಟ್ಟಾಗುವ ಸಮಯ ಬಂದಿದೆ: ಸುಬುಧೇಂದ್ರ ಶ್ರೀ
ಕರ್ನಾಟಕದ ಉಚಿತ ಬಸ್ ಮಂತ್ರಾಲಯಕ್ಕೂ ಬರಲಿ :
ಕರ್ನಾಟಕ ಸರ್ಕಾರ ಸಾರಿಗೆ ಬಸ್‌ಗಳನ್ನು ಮಂತ್ರಾಲಯದವರಿಗೂ ಉಚಿತವಾಗಿ ಬಿಡಬೇಕು. ಕರ್ನಾಟಕ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು. ಅಯೋಧ್ಯೆಗೆ ಆಹ್ವಾನ ಬಂದಿದೆ: ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ಸಮಯ ನೋಡಿ ಅಯೋಧ್ಯೆಗೆ ತೆರಳುತ್ತೇನೆ ಎಂದರು. ಸನಾತನ ಧರ್ಮದ ಬಗ್ಗೆ ಯಾರು ಮಾತನಾಡಬಾರದು. ಸನಾತನ ಧರ್ಮದ ಬಗ್ಗೆ ಮಾತನಾಡಿದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಸನಾತನ ಧರ್ಮದ ಬಗ್ಗೆ ವಿಧರ್ಮೀಯರು ಹಾಗೂ ಸ್ವಧರ್ಮೀಯರು ಮಾತನಾಡಬಾರದು. ಸನಾತನ ಹಿಂದು ಧರ್ಮ ರಕ್ಷಿಸಬೇಕಾಗಿದೆ. ಕೆಲವರು ಧರ್ಮ ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.