ಬೆಂಗಳೂರು: ಮಾ.3 ರಿಂದ ಪಲ್ಸ್ ಪೊಲಿಯೋ ಅಭಿಯಾನ, ನಗರದ 11.12 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

By Ravi Janekal  |  First Published Mar 2, 2024, 5:19 AM IST

ಬಿಬಿಎಂಪಿಯಿಂದ ಮಾ.3ರಿಂದ 6ರ ವರೆಗೆ ರಾಷ್ಟ್ರೀಯ ಪಲ್ಸ್‌ ಪೊಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ 11.12 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಯೋಜಿಸಿದೆ.


ಬೆಂಗಳೂರು (ಮಾ.2): ಬಿಬಿಎಂಪಿಯಿಂದ ಮಾ.3ರಿಂದ 6ರ ವರೆಗೆ ರಾಷ್ಟ್ರೀಯ ಪಲ್ಸ್‌ ಪೊಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ 11.12 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಯೋಜಿಸಿದೆ.

ಬಿಬಿಎಂಪಿ(BBMP)ಯ 145 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 228 ನಮ್ಮ ಕ್ಲಿನಿಕ್‌ಗಳಲ್ಲಿ, ಔಷಧಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಹಾಗೂ ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಮಾಲ್‌ಗಳು, ಖಾಸಗಿ ನರ್ಸಿಂಗ್ ಹೋಮ್‌ ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ ಇನ್ನು ಮುಂತಾದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಬೂತ್‌ ರಚಿಸಲಾಗಿದೆ.

Tap to resize

Latest Videos

ನಗರದ 5 ವರ್ಷದೊಳಗಿನ 11.12 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಯೋಜಿಸಲಾಗಿದೆ. ಅದಕ್ಕಾಗಿ 3,403 ಬೂತ್‌, 545 ಸ್ಥಿರ ಹಾಗೂ 380 ಸಂಚಾರಿ ತಂಡ ರಚಿಸಲಾಗಿದೆ. 15,354 ಲಸಿಕಾ ಕಾರ್ಯಕರ್ತರು ಹಾಗೂ 758 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

click me!