ಕಾಫಿನಾಡಲ್ಲಿ ರಾಷ್ಟ್ರಮಟ್ಟದ ಕಾರು ಚಾಲನಾ ಸ್ಪರ್ಧೆ: ಮನೋರಂಜನೆ ಜೊತೆಗೆ ಸಕತ್ ಕಿಕ್!

By Ravi Janekal  |  First Published Aug 27, 2023, 9:14 PM IST

 ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಇಂದು ನಡೆದ ಕಾರು ಚಾಲನಾ ಸ್ಪರ್ಧೆ   ಮನೋರಂಜನೆ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಡ್ತು. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದಂಗೂ ಜನ ಹುಚ್ಚೆದ್ದು ಕುಣಿಯುತ್ತಿದ್ರು, ಕೇಕೆ ಹಾಕಿ, ಕುಣಿದು ಕುಪ್ಪಳಿಸಿದ್ರೆ, ಅಂತರಾಷ್ಟ್ರೀಯ ಡ್ರೈವರ್‌ಗಳ ಜೊತೆ ಸ್ಥಳಿಯ ಪ್ರತಿಭೆಗಳು ನಾನಾ-ನೀನಾ ಅಂತ ತೊಡೆ ತಟ್ಟಿದ್ರು. 



ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು  

ಚಿಕ್ಕಮಗಳೂರು (ಆ.27) : ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಇಂದು ನಡೆದ ಕಾರು ಚಾಲನಾ ಸ್ಪರ್ಧೆ   ಮನೋರಂಜನೆ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಡ್ತು. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದಂಗೂ ಜನ ಹುಚ್ಚೆದ್ದು ಕುಣಿಯುತ್ತಿದ್ರು, ಕೇಕೆ ಹಾಕಿ, ಕುಣಿದು ಕುಪ್ಪಳಿಸಿದ್ರೆ, ಅಂತರಾಷ್ಟ್ರೀಯ ಡ್ರೈವರ್‌ಗಳ ಜೊತೆ ಸ್ಥಳಿಯ ಪ್ರತಿಭೆಗಳು ನಾನಾ-ನೀನಾ ಅಂತ ತೊಡೆ ತಟ್ಟಿದ್ರು. 

Latest Videos

undefined

ಅಂತರಾಷ್ಟ್ರೀಯ ಡ್ರೈವರ್‌ಗಳ ಜೊತೆ ಸ್ಥಳಿಯ ಪ್ರತಿಭೆಗಳಿಂದ ಪೈಪೋಟಿ : 

ಚಿಕ್ಕಮಗಳೂರಿನ ಅಬ್ಲೈಸ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ನಗರದ ಮಾಗಡಿ ಗ್ರಾಮದಲ್ಲಿ ಡರ್ಟ್ ಕಾರ್ ರಾಲಿ  ಆಯೋಜಿಸಿ ಜನರಿಗೆ ಭಾನುವಾರದ ಭರ್ಜರಿ ಮಜಾ ನೀಡಿತ್ತು. ರಾಲಿಯಲ್ಲಿ 150ಕ್ಕೂ ಹೆಚ್ಚು ಕಾಂಪಿಟೇಟರ್ಸ್ ಪಾಲ್ಗೊಂಡಿದ್ದರು. ಒಟ್ಟು 17 ವಿಧದ ಆಲ್ಟೋ ಯಿಂದ  ಕಾರುಗಳು ಪಾಲ್ಗೊಂಡಿದ್ದವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ದವು. ಕೆಲವು ಕಾರ್ ಕ್ರೇಜ್ ಪ್ರಿಯರು ಆಲ್ಟೋ ಹಾಗೂ 800 ಕಾರನ್ನೂ ಮಾಡಿಫೈ ಮಾಡಿಕೊಂಡು ಬಂದು  ಡ್ರೈವ್ ಮಾಡಿ ಎಂಜಾಯ್ ಮಾಡಿದ್ರು. ಅಂತರಾಷ್ಟ್ರೀಯ ರೈಡರ್ ಗಳು ಜೊತೆಗೆ ಸ್ಥಳಿಯ ಪ್ರತಿಭೆಗಳಿಂದ ಪೈಪೋಟಿ ನೀಡಿದರು. 

ಟ್ರಾಕ್ ನಲ್ಲಿ ಧೂಳೆಬ್ಬಿಸ್ತಾ ಸಾಗಿದ ಕಾರ್ ಗಳು : 
 
ನೋಡುಗರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು. ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹಾಸನ, ಮೂಡಿಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸ್ಫರ್ಧಾಳುಗಳು ಭಾಗವಹಿಸಿದ್ದರು. ಇವರ ಜೊತೆ ಚೆನ್ನೈ, ಕೇರಳ, ತಮಿಳುನಾಡಿನಿಂದಲೂ ಸ್ಪರ್ಧಾಳುಗಳು ಆಗಮಿಸಿದ್ದರು. ಹೊರ ಜಿಲ್ಲೆ-ರಾಜ್ಯದ ಸ್ಪರ್ಧಾಳುಗಳುಗಳಿಗೆ ಸ್ಥಳಿಯ ಪ್ರತಿಭೆಗಳು ತೊಡೆ ತಟ್ಟಿದ್ದು ವಿಶೇಷವಾಗಿತ್ತು. ಇನ್ನು ಇದೇ ಮೊದಲ ಬಾರಿಗೆ ರಾಲಿಯಲ್ಲಿ ಪಾಲ್ಗೊಂಡು ಸ್ಥಳಿಯ ಪ್ರತಿಭೆಗಳು ಆರಂಭದಲ್ಲಿ ಭಯವಾಗಿತ್ತು. ಈಗ ರೈಡ್ ಮಾಡಿದ ಮೇಲೆ ಭಯವಿಲ್ಲ. ಮುಂದಿನ ದಿನಗಳಲ್ಲಿ ಮತ್ತೇ Rallyಯನ್ನ ಕಂಟಿನ್ಯೂ ಮಾಡುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಾರೆ, ಪ್ರೇಕ್ಷಕರ ರಂಜನೆಗೆಂದೇ ಆಯೋಜಿಸಿದ್ದ ರ್ಯಾಲಿಯಲ್ಲಿ ರಾಷ್ಟ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದ್ರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನ ನೋಡಿ ಜನ ಫಿದಾ ಆಗಿದ್ದಾರೆ. ಕಾಫಿ ಡೇ ಪ್ರಯೋಜಕತ್ವದಲ್ಲಿ ನಡೆಯುತ್ತಿದ್ದ ಐಎನ್‌ಆರ್ ಸಿ ಕಾರ್ ರ್ಯಾಲಿ(INRC Car rally) ನಿಂತ ಮೇಲೆ ಕಾಫಿನಾಡ ಡ್ರೈವಿಂಗ್ ಕ್ರೇಜ್ ರೈಡರ್ಗಳು ನೊಂದುಕೊಂಡಿದ್ದರು. ಇದೀಗ, ಅಬ್ಲೈಜ್ ಮೋಟರ್ ಸ್ಪೋಟ್ರ್ಸ್ ಕ್ಲಬ್ ಆಯೋಜನೆಯಿಂದ ಹೊರರಾಜ್ಯದ ಸ್ಪರ್ಧಾಗಳುಗಳಿಗೆ ಸ್ಥಳಿಯ ಪ್ರತಿಭೆಗಳ ಜೊತೆ ಟಕ್ಕರ್ ಕೊಡುತ್ತಾ ರೈಡಿಂಗ್ ಎಂಜಾಯ್ ಮಾಡಿದರು.

click me!