ರಾಷ್ಟ್ರಧ್ವಜದ ಮೇಲೆ ಗುಂಬಜ್, ಮುಸ್ಲಿಂ ಧರ್ಮದ ಘೋಷಣೆ ಬರೆದು ಅವಮಾನ: ಆರೋಪಿ ಬಂಧನ

By Ravi Janekal  |  First Published Sep 30, 2023, 3:32 PM IST

ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಶಿರಸಿ ಮೂಲದ ಆರೋಪಿಯನ್ನು ಬಂಧಿಸಿದ ಪೊಲೀಸರು. ಶಿರಸಿಯ ರಾಮನಬೈಲ್ ನಿವಾಸಿ ಉಮರ್ ಫಾರೂಕ್ (38) ಬಂಧಿತ‌ ಆರೋಪಿ.


ಉತ್ತರ ಕನ್ನಡ, ಕಾರವಾರ (ಸೆ.30): ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಶಿರಸಿ ಮೂಲದ ಆರೋಪಿಯನ್ನು ಬಂಧಿಸಿದ ಪೊಲೀಸರು.

ಶಿರಸಿಯ ರಾಮನಬೈಲ್ ನಿವಾಸಿ ಉಮರ್ ಫಾರೂಕ್ (38) ಬಂಧಿತ‌ ಆರೋಪಿ.

Tap to resize

Latest Videos

undefined

ಈದ್ ಮಿಲಾದ್ ಹಬ್ಬದಂದು ರಾಷ್ಟ್ರ ಧ್ವಜಕ್ಕೆ ಅವಮಾನ. ರಾಷ್ಟ್ರಧ್ವಜದ ಮೇಲೆ ಗುಂಬಜ್ ಹಾಗೂ ಮುಸ್ಲಿಂ ಧರ್ಮದ ಘೋಷಣೆ ಬರೆದ ಚಿತ್ರ ಅಂಟಿಸಿದ್ದ ಭೂಪ. ಅಶೋಕ ಚಕ್ರವಿರುವ ಸ್ಥಳದಲ್ಲಿ ಗುಂಬಜ್ ಹಾಗೂ ಘೋಷಣೆ ಬರೆದು ಆ ಧ್ವಜವನ್ನು ತನ್ನ ಮನೆಯ ಬಳಿ ಒಂದು ಕಂಬಕ್ಕೆ ಕಟ್ಟಿದ್ದ ವಿಕೃತಿ ಮೆರೆದಿದ್ದ ಭೂಪ.

ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರಧ್ವಜಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಪೊಲೀಸರು.

click me!