ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಜೀವಂತ! ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ!

By Kannadaprabha NewsFirst Published Dec 16, 2023, 7:22 AM IST
Highlights

ಬಲಿ ಕೊಟ್ಟ ಕೋಣದ ಮಾಂಸವನ್ನು ದಲಿತರು ತಿನ್ನಬೇಕು. ಇಲ್ಲದಿದ್ರೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂಬ ಆರೋಪ ಮಾಡಿರುವ ದಲಿತ ಸಮುದಾಯ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲೊಂದು ಅನಿಷ್ಟ ಪದ್ಧತಿ. ಈ ಬಗ್ಗೆ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಡಿಸಿ, ಎಸ್ಪಿಗೆ ದೂರು ನೀಡಿದ್ದಾರೆ

- ಆನಂದ ಎಂ ಸೌದಿ

ಯಾದಗಿರಿ (ಡಿ.16): ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾದಲ್ಲಿ ಡಿ.18ರಿಂದ ಎರಡು ದಿನಗಳ ಕಾಲ ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ಜಾತ್ರೆಗಳು ನಡೆಯ ಲಿದ್ದು, ಈ ವೇಳೆ ದೇವರ ಹೆಸರಲ್ಲಿ ನೂರಾರು ಕೋಣ ಗಳು ಹಾಗೂ ಸಾವಿರಾರು ಕುರಿಗಳನ್ನು ಬಲಿ ಕೊಡುವ ಅನಿಷ್ಠ ಪದ್ಧತಿ ಬೆಳೆದುಕೊಂಡು ಬಂದಿದೆ. ಜಾತ್ರೆಯಲ್ಲಿ ಬಲಿಕೊಟ್ಟ ಕೋಣ-ಕುರಿಗಳ ಮಾಂಸವನ್ನು ದಲಿತರು ತಿನ್ನಬೇಕು. ಮಾಂಸ ಸೇವನೆ, ದೇವರ ಬಲಿ ವಿರೋಧಿ ಸಿದರೆ ಅವರಿಗೆ ಬಹಿಷ್ಕಾರದ ಭೀತಿ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಮಧ್ಯೆ, ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿಬಣ)ಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿಯವರು ಯಾದಗಿರಿ ಜಿಲ್ಲಾಧಿ ಕಾರಿ, ಜಿಲ್ಲಾ ಪಂಚಾಯಿತಿ ಸಿಇಓ, ಎಸ್ಪಿ ಹಾಗೂ ಸುರಪುರದ ಆರಕ್ಷಕ ಉಪಾಧೀಕ್ಷಕರಿಗೆ ಪತ್ರ ಬರೆದಿದ್ದು, ದೇವಿಕೇರಾದಲ್ಲಿ ಡಿ.18ರಿಂದ ಎರಡು ದಿನಗಳ ಕಾಲ ನಡೆಯುವ ಮರೆಮ್ಮ, ಪಾಲ್ಕಮ್ಮೆ ಹಾಗೂ ದೇವಮ್ಮ ಜಾತ್ರೆ ವೇಳೆ ದೇವರ ಹೆಸರಲ್ಲಿ ನೂರಾರು ಕೋಣಗಳು ಹಾಗೂ ಸಾವಿರಾರು ಕುರಿಗಳನ್ನು ಬಲಿ ಕೊಡಲು ಸಿದ್ಧತೆಗಳು ನಡೆದಿವೆ. ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಡಿಸೆಂಬರ್‌ನಿಂದ ಫೆಬ್ರವರಿ ಅಂತ್ಯ ದವರೆಗೆ ದೇವರ ಹೆಸರಲ್ಲಿ ಸಾವಿರಾರು ಕೋಣಗಳು ಹಾಗೂ ಲಕ್ಷಾಂತರ ಕುರಿಗಳನ್ನು ಬಲಿ ಕೊಡುವ ಮೂಢ ಸಂಪ್ರದಾಯ ಅವ್ಯಾಹತವಾಗಿ ನಡೆದಿದ್ದು, ಇದನ್ನು ತಡೆಗಟ್ಟಬೇಕು. ಜಾತ್ರೆ ವೇಳೆ ಪ್ರಾಣಿಬಲಿ ಹಾಗೂ ಹಳೆಯ ದ್ವೇಷಗಳ ಹಿನ್ನೆಲೆಯಲ್ಲಿ ಸಮುದಾಯಗಳ ಮಧ್ಯೆ ಗಲಭೆ ನಡೆಯುವ, ಜೀವಹಾನಿಯ ಆತಂಕ ಕೂಡ ಇದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಇನ್ನೂ ಜೀವಂತ ಇದೆ ಅನಿಷ್ಟ ಪದ್ಧತಿ

ದೇವರ ಹೆಸರಲ್ಲಿ ಪ್ರಾಣಿ ಬಲಿ ಬಗ್ಗೆ ಡಂಗೂರ

ಈ ಮಧ್ಯೆ, ದೇವಿಕೇರಾ ಜಾತ್ರೆಯಲ್ಲಿ ಬಲಿ ಕೊಟ್ಟ ಕೋಣ-ಕುರಿಗಳ ಮಾಂಸ ತಿನ್ನದಿದ್ದರೆ ಬಹಿಷ್ಕಾರದ ಭೀತಿ ಎದುರಾಗಿದೆ ಎಂದು ದಲಿತ ಸಮುದಾಯದಲ್ಲಿ ಆರೋಪಗಳು ಕೇಳಿ ಬಂದಿವೆ. ಜಾತ್ರೆಯಲ್ಲಿ ದೇವರ ಹೆಸರಲ್ಲಿ ಬಲಿ ನೀಡುವ, ಜಾತ್ರೆಗಾಗಿ ಪ್ರತಿ ಮನೆಯಿಂದ ಸಾವಿರ ರು. ಚಂದಾ ಎತ್ತುವ ವಿಚಾರ ಗೌಪ್ಯ ವಾಗಿ ಇರಬೇಕು. ಬೇರೆ ಯಾರಿಗೂ ತಿಳಿಯದಂತೆ ಎಚ್ಚರ ವಹಿಸಬೇಕು ಎಂಬುದಾಗಿ ಕಳೆದ ವಾರವೇ ಡಂಗೂರ ಸಾರಿ ಎಚ್ಚರಿಸಲಾಗಿದೆ. 

ಯಾದಗಿರಿ: ದಲಿತರಿಗೆ ಬಹಿಷ್ಕಾರ, DC-SP ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ

ಪ್ರಾಣಿ ಬಲಿ ಹಾಗೂ ಇದೇ ಸಮುದಾಯದವರು ಪ್ರಾಣಿ ಬಲಿಯ ಮಾಂಸ ಸೇವಿಸುವುದು ಮೊದಲಿನಿಂದಲೂ ಬಂದ ಸಂಪ್ರದಾಯ. ಈ ಸಂಪ್ರದಾಯ ವಿರೋಧಿಸಿದರೆ ಅವರಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಲಾಗುವುದು ಎಂಬುದಾಗಿ ಮೌಖಿಕವಾಗಿ ಎಚ್ಚರಿಸಲಾಗಿದೆ. ಪ್ರಾಣಿ ಬಲಿ ಹಾಗೂ ಮಾಂಸ ಸೇವನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ತಮ್ಮ ಸಮುದಾಯದವರ ವಿರುದ್ದ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು 'ಕನ್ನಡಪ್ರಭ'ಕ್ಕೆ ಹೆಸರೇಳಲಿಚ್ಛಿಸದ ದಲಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

click me!