ಮೋಹನ ದಾಸ್‌ ಪೈಗೆ 'ಶಕುನಿ' ಎಂದು ಬೈದಿದ್ದು ಸರಿಯಿದೆ: ನಾರಾಯಣಗೌಡ ಸಮರ್ಥನೆ

Kannadaprabha News   | Kannada Prabha
Published : Nov 05, 2026, 05:47 AM IST
TA Narayanagowda on Mohan das pai

ಸಾರಾಂಶ

ಉದ್ಯಮಿ ಮೋಹನ್‌ದಾಸ್‌ ಪೈ ಅವರನ್ನು 'ಶಕುನಿ' ಎಂದು ಕರೆದಿರುವುದನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರ ಉದ್ಯೋಗ ಮೀಸಲಾತಿ ಮತ್ತು ದ್ವಿಭಾಷಾ ನೀತಿಗೆ ಪೈ ಅಡ್ಡಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು (ನ.5): ಉದ್ಯಮಿ ಮೋಹನ್‌ದಾಸ್‌ ಪೈ ಅವರಿಗೆ ‘ಶಕುನಿ’ ಎಂಬ ಪದ ಬಳಕೆ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸಮರ್ಥಿಸಿಕೊಂಡಿದ್ದಾರೆ. ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳವಾರ ಪೈ ಅವರಿಗೆ ಶಕುನಿ ಎಂದಿದ್ದೆ. ಆ ಬಗ್ಗೆ ಹಲವರು ಚರ್ಚೆ ಮಾಡುತ್ತಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೆ ಬದಲಾವಣೆ ಇಲ್ಲ. ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಅವರು ಮಾಡಿರುವುದು ಶಕುನಿ ಕೆಲಸಗಳನ್ನೇ ಎಂದಿದ್ದಾರೆ.

ಕನ್ನಡಿಗರ ವಿರುದ್ಧವಿರದ್ಧವಿರುವ ಉದ್ಯಮಿಗಳ ಉದ್ದೇಶ ನಾವು ಸರಿಯಾಗಿ ಗ್ರಹಿಸಬೇಕು

ಕರ್ನಾಟಕದ ಉದ್ಯಮ ಮತ್ತು ಉದ್ಯಮಿಗಳ ವಿಷಯದಲ್ಲಿ ನನಗೆ ಯಾವುದೇ ಅಸಹನೆ, ದ್ವೇಷ, ಪೂರ್ವಾಗ್ರಹ ಇಲ್ಲ. ಆದರೆ ಪದೇ ಪದೇ ಕನ್ನಡಿಗರ ಆಶೋತ್ತರಗಳ ವಿರುದ್ಧ ಮಾತನಾಡುವ ಕೆಲವು ಬೆರಳೆಣಿಕೆಯ ಉದ್ಯಮಿಗಳ ಉದ್ದೇಶ ಏನು ಎಂಬುದನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಅಂಥವರಿಗೆ ಸರಿಯಾದ ಸಮಯದಲ್ಲಿ ತಕ್ಕ ಉತ್ತರವನ್ನು ನೀಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ದ್ವಿಭಾಷಾ ನೀತಿ ಜಾರಿಯಾಗಲ್ಲ ಎಂದಿದ್ದ ಪೈ

ಉದ್ಯಮಿ ಮೋಹನ್ ದಾಸ್ ಪೈ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ ಆಗಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದೆವು. ಸ್ವತಃ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿದ್ದೇನೆ ಎಂದು ಹೇಳಿದಾಗ ಇದೇ ಪೈ ಟೀಕಿಸಿದರು. ಪಠ್ಯ ಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿದ್ದರು. ಇಂತಹ ವಿರೋಧಗಳಿಂದಲೇ ಸ್ವತಃ ಮುಖ್ಯಮಂತ್ರಿಗಳೇ ದ್ವಿಭಾಷೆ ಕಲಿಕೆಯ ಪರವಾಗಿದ್ದರೂ ಈ ನೀತಿ ಜಾರಿಗೆ ಬರಲಿಲ್ಲ ಎಂದು ಆರೋಪಿಸಿದ್ದಾರೆ.

ಕನ್ನಡಿಗರ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ಅಡ್ಡಿಯಾಗಿದ್ದು ಯಾರು?

ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲು ಹೊರಟಾಗ ಮತ್ತೆ ಅದಕ್ಕೆ ಅಡ್ಡಿಯಾಗಿದ್ದು ಇದೇ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಮೊದಲಾದ ಬೆರಳೆಣಿಕೆಯ ಉದ್ಯಮಿಗಳು. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದ್ದ ಕಾಯ್ದೆ ಜಾರಿಯಾಗಲು ಈ ಬ್ಲಾಕ್ ಮೇಲ್ ಗ್ಯಾಂಗ್ ಬಿಡಲಿಲ್ಲ. ಸರ್ಕಾರವನ್ನು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರಾ ಎಂಬ ಅನುಮಾನ ನನಗೆ ಮೂಡಿದೆ ಎಂದು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Today Live: Ramayana - ರಾಮಾಯಣ ಸಿನಿಮಾ 4DX ನಲ್ಲಿ ನೋಡಬಹುದಾ? ಬೆಂಗಳೂರಿನಲ್ಲಿ ಥಿಯೇಟರ್‌ಗಳು ಎಲ್ಲಿವೆ? ಟಿಕೆಟ್ ಬೆಲೆ ಎಷ್ಟು?
Ration card e-KYC: ನವೆಂಬರ್ 10 ಕೊನೆ ದಿನ, 41 ಲಕ್ಷಕ್ಕೂ ಹೆಚ್ಚು ಪಡಿತರ ಬಾಕಿ! ಇ-ಕೆವೈಸಿ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ