Nandini Milk Price Hike: ನಂದಿನಿ ಹಾಲಿನ ದರ 3 ರೂ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್

By Gowthami KFirst Published Jul 21, 2023, 8:54 PM IST
Highlights

ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಲು ಒಕ್ಕೂಟಗಳ ಮತ್ತು ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ   ಪದಾಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯಲ್ಲಿ  ಸರಕಾರ ಹಸಿರು ನಿಶಾನೆ ತೋರಿದೆ.

ಬೆಂಗಳೂರು (ಜು.21): ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 1ರಿಂದ ಲೀಟರ್ ಗೆ 3 ರೂ. ಏರಿಕೆ ಜಾರಿಯಾಗಲಿದೆ. ಹಾಲು ಒಕ್ಕೂಟಗಳ ಮತ್ತು ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ (KMF)  ಪದಾಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು,  ಪಶುಸಂಗೋಪನೆ ಸಚಿವ ವೆಂಕಟೇಶ್, ಸಹಕಾರ ಸಚಿವ ರಾಜಣ್ಣ, KMF ಅಧ್ಯಕ್ಷ ಭೀಮಾ ನಾಯಕ್, ಹೆಚ್‌ಡಿ ರೇವಣ್ಣ  ಸೇರಿ ಹಲವು ನಾಯಕರು  ಸಭೆಯಲ್ಲಿ ಭಾಗವಹಿಸಿದ್ದರು. 

ಜುಲೈ 23ರಿಂದ ಕುಂದಾಪ್ರ ಕನ್ನಡ ಹಬ್ಬ, ಬೆಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ

ಈ ಹಿಂದೆ  KMF 5 ರೂಪಾಯಿ ಹೆಚ್ಚಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.  ಹಾಲು ಒಕ್ಕೂಟ ನಷ್ಟ ಸರಿದೂಗಿಸಲು ಹಾಲಿನ ದರ 5 ರೂ ಹೆಚ್ಚಳಕ್ಕೆ KMF ಬೇಡಿಕೆ ಇಟ್ಟಿತ್ತು. ಇದೀಗ 3 ರೂ ಏರಿಕೆ ಮಾಡಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್ ಗೆ 3 ದರ ಹೆಚ್ಚಳ ಮಾಡಲಾಗಿದೆ ಎಂದು ಎಚ್‌ ಡಿ ರೇವಣ್ಣ ತಿಳಿಸಿದ್ದಾರೆ.

ಅನುಕೂಲವಾಗುವಂತೆ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದೇವು. ಅತಿ ಕಡಿಮೆ ಬೆಲೆ ಹಾಲು ಮಾರಾಟ ನಮ್ಮ ರಾಜ್ಯದಲ್ಲಿ ಆಗುತ್ತೆ. ಎಲ್ಲಾ ಅಧ್ಯಕ್ಷರ, ಕೆಎಂಎಫ್ ಪದಾಧಿಕಾರಿಗಳು ಸಿಎಂ ಮೇಲೆ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹಾಕಿದ್ದರು. ರಾಜ್ಯದಲ್ಲಿ 94 ಲಕ್ಷ ಲೀಟರ್ ಗೂ ಹೆಚ್ಚು ಹಾಲು ಉತ್ಪಾದನೆ ಆಗುತ್ತೆ. ಆಗಸ್ಟ್ ನಿಂದ ನೂತನ ದರ ಜಾರಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚಾಮರಾಜನಗರದಲ್ಲಿ ಬೈ ಪ್ರಾಡೆಕ್ಟ್ ಗಳ ಉತ್ಪಾದನೆಗೆ  ಚಿಂತನೆ ನಡೆದಿದೆ. ನಮ್ಮಲ್ಲಿ ಲೀಟರ್ ಗೆ 36 ರೂ ಗೆ. ಹಾಲು ಮಾರಾಟ ಆಗುತ್ತಿದೆ. ಎಲ್ಲಾ ಒಕ್ಕೂಟಗಳು ಲಾಭದಲ್ಲಿವೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಲಾಭ ಮಾಡುವ ಉದ್ದೇಶ ನಮ್ಮದು ಎಂದಿದ್ದಾರೆ.

6 ವರ್ಷದಲ್ಲಿಯೇ ಎರಡು ವಿಶ್ವದಾಖಲೆ ಮುಡಿಗೇರಿಸಿಕೊಂಡ ಚಿತ್ರದುರ್ಗದ ಪೋರ!

KMF ಅಧ್ಯಕ್ಷ ಭೀಮಾನಾಯ್ಕ್ ಮಾತನಾಡಿ, ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಆಗಸ್ಟ್ 1ರಿಂದ  ಪ್ರತಿ ಲೀಟರ್ ಗೆ 3 ರೂ. ದರ ಏರಿಕೆಯಾಗಲಿದೆ. ಈ ಬಗ್ಗೆ ಸಿಎಂ ನಿರ್ಧಾರ ಮಾಡಿದ್ದಾರೆ. ರೈತರು, ಒಕ್ಕೂಟದ ಬೇಡಿಕೆ 5 ರೂ ಇತ್ತು. 3 ರೂ ಏರಿಕೆಗೆ ಅಸ್ತು ಎನ್ನಲಾಗಿದೆ. ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದೆ. ದರ ಏರಿಕೆ ಹಣ ರೈತರಿಗೆ ತಲುಪಿಸುವ ವ್ಯವಸ್ಥೆ ಕೂಡ ಆಗಲಿದೆ ಎಂದಿದ್ದಾರೆ.

click me!