6 ವರ್ಷದ ಪೋರನ ಬಾಯಲ್ಲಿ ಸಾವಿರಾರು ಪ್ರಶ್ನೆಗಳಿಗೆ ಸಿಗ್ತಿವೆ ಉತ್ತರಗಳು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಾಮಾನ್ಯ ಜ್ಞಾನ ಹೊಂದಿರೋ ಪೋರ ಹೇಮಂತ್. ಪುಟಾಣಿಯ ಸಾಧನೆಗೆ ಒಲಿದು ಬಂದಿವೆ ಎರಡೆರಡು ವರ್ಲ್ಡ್ ರೆಕಾರ್ಡ್
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.21): ಆರು ವರ್ಷದ ಪೋರನ ಬಾಯಲ್ಲಿ ಸಾವಿರಾರು ಪ್ರಶ್ನೆಗಳಿಗೆ ಸಿಗ್ತಿವೆ ಉತ್ತರಗಳು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಾಮಾನ್ಯ ಜ್ಞಾನ ಹೊಂದಿರೋ ಪೋರ ಹೇಮಂತ್. ಪುಟಾಣಿಯ ಸಾಧನೆಗೆ ಒಲಿದು ಬಂದಿವೆ ಎರಡೆರಡು ವರ್ಲ್ಡ್ ರೆಕಾರ್ಡ್ ಗಳು. ಮೂಲತಃ ಚಿತ್ರದುರ್ಗ ನಗರದ ಜಟ್ ಪಟ್ ನಗರ ಬಡಾವಣೆಯ ನಿವಾಸಿ. ಆರು ಮುಕ್ಕಾಲು ವರ್ಷ ವಯಸ್ಸಿನ ಈ ಪೋರನ ಸಾಧನೆ ಅಷ್ಟಿಷ್ಟಲ್ಲ. ತನ್ನ ಈ ಚಿಕ್ಕ ವಯಸ್ಸಿನಲ್ಲಿಯೇ ನೂರಾರು ದೇಶಗಳು, ನೂರಾರು ಗಾದೆಗಳು, ಕರ್ನಾಟಕದ ನದಿಗಳು ಹೀಗೆ ಹಲವಾರು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ತನ್ನ ನಾಲಿಗೆ ತುದಿಯಲ್ಲಿಯೇ ಹಿಡಿದಿಟ್ಟುಕೊಂಡಿದ್ದಾನೆ. ತನ್ನ ಈತನ ಜ್ಞಾನ ಬಂಡಾರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ ಒಲಿದು ಬಂದಿವೆ.
undefined
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500
ಈ ಬಗ್ಗೆ ಪುಟಾಣಿ ಪೋರನನ್ನೇ ಕೇಳಿದ್ರೆ, ನಾನು 2ನೇ ತರಗತಿ ಓದುತ್ತಿದ್ದೇನೆ. ನನಗೆ ಗಾದೆಗಳು, 101 ಕೌರವರ ಹೆಸರು, ರಾಜ್ಯದ ಮುಖ್ಯಮಂತ್ರಿಗಳ ಹೆಸರು ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕೂಡ ಹೇಳಲು ಬರುತ್ತದೆ. ನಿತ್ಯ ಮನೆಯಲ್ಲಿ ಅಮ್ಮ ನನಗೆ ಅಭ್ಯಾಸ ಮಾಡಿಸುತ್ತಾರೆ. ಅದೇ ರೀತಿ ಶಾಲೆಯಲ್ಲಿಯೂ ಶಿಕ್ಷಕರು ಅಭ್ಯಾಸ ಮಾಡಿಸುತ್ತಾರೆ. ಸದ್ಯ ನನಗೆ ಎರಡು ಪ್ರಶಸ್ತಿ ಬಂದಿರೋದಕ್ಕೆ ಖುಷಿ ಆಗಿದೆ. ಮುಂದೆ ನಾನು ದೇಶ ಕಾಯುವ ಯೋಧನಾಗುವ ಆಸೆ ಇಟ್ಟುಕೊಂಡಿದ್ದೇನೆ ಎಂದು ಪುಟಾಣಿ ಹೇಳಿದನು.
ಇನ್ನೂ ತನ್ನ ಮಗನ ಈ ಸಾಧನೆ ಕುರಿತು ಪೋಷಕರನ್ನೇ ವಿಚಾರಿಸಿದ್ರೆ, ನನ್ನ ಮಗ ಹುಟ್ಟಿದ ಮೂರು ವರ್ಷದಿಂದಲೇ ಸಾಕಷ್ಟು ಫಾಸ್ಟ್ ಇದ್ದನು. ಮನೆಯಲ್ಲಿ ಏನಾದ್ರು ಓದಿಕೊಡುವಾಗ ಜಾಸ್ತಿ ರಿಪೀಟ್ ಮಾಡಿದ್ರೇನೆ ಸಾಕು, ಈ ವಿಷಯ ನನಗೆ ಬರುತ್ತದೆ ಬೇರೆ ವಿಚಾರ ಓದುತ್ತೇನೆ ಎಂದು ಹಠ ಮಾಡ್ತಿದ್ದ. ಅವಾಗ್ಲೆ ನಾವು ಅವನಿಗೆ ಏನು ಇಷ್ಟವೋ ಅದನ್ನೇ ಹೆಚ್ಚು ಓದಿಸಿ ಕೊಡಲು ಮುಂದಾದೆವು. ಶಾಲೆಯಲ್ಲಿಯೂ ನನ್ನ ಮಗ ಓದಿನಲ್ಲಿ ಫಾಸ್ಟ್ ಇದ್ದ ಕಾರಣ, ಶಿಕ್ಷಕರು ನಮಗೆ ಸಲಹೆ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಅಪ್ಲೆ ಮಾಡಲು ಸಲಹೆ ನೀಡಿದರು. ಅದಕ್ಕಾಗಿ ಮನೆಯಲ್ಲಿಯೂ ಸಾಕಷ್ಟು ಅಭ್ಯಾಸ ಮಾಡಿಸಲಾಯಿತು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಸಾವಿರಾರು ಪ್ರಶ್ನೆಗಳಿಗೆ ಉತ್ತರವನ್ನು ಪಟಾ ಪಟ್ ಹೇಳಲು ಮುಂದಾದನು. ಆದ್ದರಿಂದ ನಾವು ಇಂಡಿಯಾ ಬುಕ್ ರೆಕಾರ್ಡ್ ಹಾಗೂ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ ಗೆ ನಮ್ಮ ಮಗನ ಟ್ಯಾಲೆಂಟ್ ಕುರಿತು ಮಾಹಿತಿ ನೀಡಲಾಯಿತು. ಸದ್ಯ ಅವನ ಸಾಧನೆಗೆ ಎರಡು ಉತ್ತಮ ಪ್ರಶಸ್ತಿಗಳು ಲಭಿಸಿವೆ. ಮುಂದೆ ಲಿಮ್ಕಾ ಅವಾರ್ಡ್ ಗೆ ತಯಾರಾಗ್ತಿದ್ದಾನೆ. ಅವನಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದ್ರಲ್ಲೇ ಶಿಕ್ಷಣ ಕೊಡಿಸಲಾಗುವುದು. ನನ್ನ ಮಗನ ಈ ಸಾಧನೆ ನಮಗೆ ತುಂಬಾ ಹೆಮ್ಮೆ ಅನಿಸಿದೆ ಅಂತಾರೆ ಪೋಷಕರು.
ದಾವಣಗೆರೆಯಲ್ಲಿ ಬಾರ್ ಹಟಾವೋ, ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರಿಂದ ಧರಣಿ ಎಚ್ಚರಿಕೆ
ಒಟ್ಟಾರೆ ಚಿಕ್ಕ ವಯಸ್ಸಿನಲ್ಲಿ ಕೆಲ ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಿಂದೇಟು ಹಾಕ್ತಾರೆ. ಅಂತದ್ರಲ್ಲಿ ಹೇಮಂತ್ ಎಂಬುವ ಪೋರ ತನ್ನ ಜ್ಞಾನ ಬಂಡಾರದಿಂದ ಎರಡು ರೆಕಾರ್ಡ್ ತನ್ನ ಮುಡಿಗೆ ಏರಿಸಿಕೊಂಡಿರೋದು ನಿಜಕ್ಕೂ ಸಂತೋಷದ ವಿಷಯವೇ ಸರಿ.