KMF ಗ್ರಾಹಕರಿಗೆ ಗುಡ್‌ ನ್ಯೂಸ್: ಈಗ ಕೇವಲ 10 ರುಪಾಯಿಗೆ ನಂದಿನಿ ಹಸು ಹಾಲು ಲಭ್ಯ!

Naveen Kodase, Kannadaprabha News |   | Kannada Prabha
Published : Jan 24, 2026, 08:33 AM IST
KMF Product

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿಯ ಹಲವು ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಇವುಗಳಲ್ಲಿ ಹೆಚ್ಚು ಪ್ರೊಟೀನ್‌ಯುಕ್ತ ಹಾಲು (ಎನ್‌-ಪ್ರೊಮಿಲ್ಕ್), ಮೀಡಿಯಂ ಫ್ಯಾಟ್‌ ಪನೀರ್, ಹೈ ಅರೋಮಾ ತುಪ್ಪ ಮತ್ತು ಪ್ರೊಬಯೋಟಿಕ್‌ ಮೊಸರು ಸೇರಿವೆ.  

ಬೆಂಗಳೂರು: ಗುಡ್‌ಲೈಫ್‌ ತುಪ್ಪ (ಹೈ ಅರೋಮ), ಪನೀರ್‌ (ಮೀಡಿಯಂ ಫ್ಯಾಟ್‌), ಹೆಚ್ಚು ಪ್ರೊಟೀನ್‌ ಯುಕ್ತ ಹಾಲು (ಎನ್‌-ಪ್ರೊಮಿಲ್ಕ್), ಪ್ರೋಬಯೋಟಿಕ್‌ ಮೊಸರು ಸೇರಿ ನಂದಿನಿಯ ಹೊಸ ಉತ್ಪನ್ನಗಳನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು.

ವಿಧಾನಸೌಧದಲ್ಲಿ ನಡೆದ ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಡಾ। ಶಿವಸ್ವಾಮಿ, ಶಾಸಕರಾದ‌ ನಂಜೇಗೌಡ, ಅಶೋಕ್‌ ಕುಮಾರ್ ರೈ ಇದ್ದರು.

10 ರುಪಾಯಿಗೆ ನಂದಿನಿ ಹಸುವಿನ ಹಾಲು

ಎನ್‌-ಪ್ರೊಮಿಲ್ಕ್‌, ಪನೀರ್‌(ಮೀಡಿಯಂ ಫ್ಯಾಟ್‌), ಗುಡ್‌ಲೈಫ್‌ ಶುದ್ಧ ತುಪ್ಪ (ಹೈ ಅರೋಮಾ), ನಂದಿನಿ ಶುದ್ಧ ತುಪ್ಪ (ಕ್ಯೂಆರ್‌ ಕೋಡ್‌ನೊಂದಿಗೆ), ಪ್ರೊಬಯೋಟಿಕ್‌ ಮೊಸರು, ಪ್ರೊಬಯೋಟಿಕ್‌ ಮಾವಿನ ಲಸ್ಸಿ, ಪ್ರೊಬಯೋಟಿಕ್‌ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್‌, ನಂದಿನಿ ಹಸುವಿನ ಹಾಲು (₹10), ನಂದಿನಿ ಮೊಸರು (₹10) ಹೊಸದಾಗಿ ಬಿಡುಗಡೆಯಾಗಿರುವ ನಂದಿನಿ ಉತ್ಪನ್ನಗಳಾಗಿವೆ.

 

ಎನ್‌-ಪ್ರೋಮಿಲ್ಕ್‌:

ಇದು ಸಾಮಾನ್ಯ ಟೋನ್ಡ್‌ ಹಾಲಿಗಿಂತ ಶೇ.18ರಷ್ಟು ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಹೊಂದಿದೆ. ಪ್ರಸ್ತುತ ಅರ್ಧ ಲೀಟರ್ ಪೊಟ್ಟಣದಲ್ಲಿ ₹27ಕ್ಕೆ ಮಾರುಕಟ್ಟೆಗೆ ಬರಲಿದೆ.

ಪನೀರ್‌ (ಮೀಡಿಯಂ ಫ್ಯಾಟ್‌):

ಸಾಮಾನ್ಯ ಪನೀರ್‌ಗಿಂತ ಕಡಿಮೆ ಜಿಡ್ಡಿನಾಂಶ ಮತ್ತು 50 ಗ್ರಾಂ. ಪ್ರೊಟೀನ್‌ ಹೊಂದಿದೆ. 200 ಗ್ರಾಂ. ಪೊಟ್ಟಣದಲ್ಲಿ 90 ರು.ನಂತೆ ನಿಗದಿಪಡಿಸಲಾಗಿದ್ದು, 5 ರು.ಆರಂಭಿಕ ರಿಯಾಯಿತಿಯೂ ಇರಲಿದೆ.

ಗುಡ್‌ಲೈಫ್‌ ಶುದ್ಧ ತುಪ್ಪ (ಹೈ ಅರೋಮಾ-ಕ್ಯೂಆರ್‌ ಕೋಡ್‌ನೊಂದಿಗೆ): ಪ್ರಸ್ತುತ ಅರ್ಧ ಲೀಟರ್‌ ಮತ್ತು 1 ಲೀಟರ್‌ ಪೊಟ್ಟಣದಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 500 ಮಿ.ಲೀ. ತುಪ್ಪ ₹380 ಮತ್ತು 1 ಲೀಟರ್‌ ₹760 ನಂತೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ನಂದಿನಿ ಶುದ್ಧ ತುಪ್ಪ:

200 ಮಿ.ಲೀ. (₹165), 500 ಮಿ.ಲೀ. (₹360) ಮತ್ತು 1 ಲೀಟರ್‌ ಜಾರ್‌ಗಳಲ್ಲಿ (₹760) ಬಿಡುಗಡೆಗೊಳಿಸಲಾಗಿದೆ. ಈ ಹೊಸ ಉತ್ಪನ್ನದ ಪ್ಯಾಕ್‌ ಮೇಲೆಯೂ ಕ್ಯೂ ಆರ್‌ ಕೋಡ್‌ ಇದ್ದು, ಮಾಹಿತಿ ಪಡೆಯಬಹುದು.

ಪ್ರೊಬಯೋಟಿಕ್‌ ಮೊಸರು: ಇದು ಜೀವಂತ ಲಾಭದಾಯಕ ಬ್ಯಾಕ್ಟೀರಿಯಾಗಳಿಂದ ತಯಾರಿಸಲ್ಪಟ್ಟಿದೆ. ಇದು 200 ಗ್ರಾಂ. ಪ್ಯಾಕ್‌ನಲ್ಲಿ ಲಭ್ಯವಿದ್ದು, ₹35 ನಿಗದಿಪಡಿಸಲಾಗಿದೆ. ಶೇ.5 ರಿಯಾಯಿತಿಯೂ ಇರಲಿದೆ.

ಪ್ರೊಬಯೋಟಿಕ್‌ ಮಾವಿನ ಲಸ್ಸಿ ಮತ್ತು ಪ್ರೊಬಯೋಟಿಕ್‌ ಸ್ಟ್ರಾಬೆರಿ ಲಸ್ಸಿ: 160 ಮಿ.ಲೀ. ಪೊಟ್ಟಣದಲ್ಲಿ ₹15ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಡೇರಿ ವೈಟ್ನರ್‌: ಇದು ಸಕ್ಕರೆ ಸೇರಿಸಿದ ಹಾಲಿನ ಪುಡಿಯಾಗಿದೆ. ದೀರ್ಘಾವಧಿ ಹೊಂದಿದ್ದು ಸಂಗ್ರಹಿಸಲು ಮತ್ತು ಸಾಗಿಸಲು ಸುಲಭವಾಗಿದೆ. 14 ಗ್ರಾಂ- ₹5, 28 ಗ್ರಾಂ- ₹10, 200 ಗ್ರಾಂ- ₹90, 500 ಗ್ರಾಂ- ₹180, 1 ಕೇಜಿಗೆ ₹355 ಮತ್ತು 10 ಕೇಜಿಗೆ ₹3400ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ನಂದಿನಿ ಹಸುವಿನ ಹಾಲು ಎಲ್ಲ, ವರ್ಗದ ಗ್ರಾಹಕರಿಗೆ ಲಭ್ಯವಾಗುವಂತೆ 160 ಮಿ.ಲೀ. ಪೊಟ್ಟಣದಲ್ಲಿ ₹10ಕ್ಕೆ ಸಿಗಲಿದೆ. ನಂದಿನಿ ಮೊಸರು ಕೂಡ 140 ಗ್ರಾಂ ಪೊಟ್ಟಣದಲ್ಲಿ ₹10ಕ್ಕೆ ಲಭ್ಯವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ರೂಣಲಿಂಗ ಪತ್ತೆಕೋರರ ಮಾಹಿತಿ ಕೊಟ್ರೆ ₹1 ಲಕ್ಷ ಬಹುಮಾನ! ಮಹತ್ವದ ಘೋಷಣೆ
ಕಾಂಗ್ರೆಸ್ ಸದಸ್ಯರಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಎನ್.ರವಿಕುಮಾರ್ ಪ್ರಶ್ನೆ