ಅಕ್ರಮ ಸಕ್ರಮ ಪ್ರಕರಣದಲ್ಲಿ ಜನ ಪರ ನಿಲುವು ಸ್ಪಷ್ಟಪಡಿಸಿದ ನಮ್ಮ ಬೆಂಗಳೂರು ಫೌಂಡೇಶನ್!

By Suvarna NewsFirst Published Jul 19, 2022, 9:53 PM IST
Highlights

ಬಡವರಿಗೆ ಮತ್ತು ಮಧ್ಯಮ ವರ್ಗದ ಮನೆ ಮಾಲೀಕರಿಗೆ ಅಕ್ರಮ-ಸಕ್ರಮದ  ವಿನಾಯಿತಿಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸುವ ಮನವಿಯನ್ನು ನಮ್ಮ ಬೆಂಗಳೂರು ಫೌಂಡೇಷನ್ ಬೆಂಬಲಿಸಿದೆ.

ಬೆಂಗಳೂರು(ಜು.19):  ಅಕ್ರಮ ಸಕ್ರಮ ನೀತಿಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ವಿನಾಯಿತಿ ಕೋರಲು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಲು  ನಮ್ಮ ಬೆಂಗಳೂರು ಫೌಂಡೇಷನ್ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಕ್ರಮ ಸಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ ಹಲವು ಬಡವ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮನೆ, ವಾಸಿಸುವ ಸ್ಥಳಗಳನ್ನು ಕ್ರಮಬದ್ಧಗೊಳಿಸಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಬಂದಿದೆ. ಹೀಗಾಗಿ ಅಕ್ರಮ ಸಕ್ರಮ ತಡೆಯಾಜ್ಞೆಯಿಂದ ಕೆಲ ವರ್ಗಗಳಿಗೆ ವಿನಾಯಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ನಮ್ಮ ಬೆಂಗಳೂರು ಫೌಂಡೇಶನ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ನಮ್ಮ ಬೆಂಗಳೂರು ಫೌಂಡೇಷನ್ ಮತ್ತೆ ಜನಪರ ಅನ್ನೋದನ್ನು ಸಾಬೀತುಪಡಿಸಿದೆ.

2016 ರಲ್ಲಿ, ಅಂದಿನ ಕಾಂಗ್ರೆಸ್ ಸರ್ಕಾರವು ಅಕ್ರಮ ಸಕ್ರಮ ಶಾಸನವನ್ನು ಜಾರಿಗೆ ತರಲು ಪ್ರಯತ್ನಿಸಿತ್ತು. ಇದು ಬಿಲ್ಡರ್ಸ್, ಅಕ್ರಮ ಗಣಿಗಾರಿಕೆ, ಅಕ್ರಮ ರೆಸಾರ್ಟ್ ಸೇರಿದಂತೆ ಹಲುವ ಬಿಲ್ಡರ್‌ಗಳಿಗೆ ಪ್ರಯೋಜನ ನೀಡುವ ಯೋಜನೆಯಾಗಿದೆ ಅನ್ನೋ ಕಾರಣಕ್ಕೆ ನಮ್ಮ ಬೆಂಗಳೂರು ಫೌಂಡೇಷನ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಅಕ್ರಮ ಸಕ್ರಮಕ್ಕೆ ಸಂಪೂರ್ಣವಾಗಿ ತಡೆಯಾಜ್ಞೆ ನೀಡಿತ್ತು. ಇದರಿಂದ ಬಡವರು ಹಾಗೂ ಮಧ್ಯಮವರ್ಗ ಜನ ಹಲವು ದಶಕಗಳಿಂದ ಅರಣ್ಯ ಸಮೀಪ, ಹಾಗೂ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸಮಸ್ಯೆ ಆರಂಭಗೊಂಡಿದೆ. ಇದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಮುಂದಾಗಿದೆ. ಈ ತಡೆಯಾಜ್ಞೆಯಿಂದ ಕೆಲ ವರ್ಗದ ಜನರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಲು ಮುಂದಾಗಿದೆ. ಇದಕ್ಕೆ ನಮ್ಮ ಫೌಂಡೇಷನ್ ಯಾವುದೇ ತಕರಾರಿಲ್ಲ ಎಂದಿದೆ. ಬಡವರು ಹಾಗೂ ಮಧ್ಯಮ ವರ್ಗದ ಪರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಧ್ವನಿ ಎತ್ತಲು ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ಯಾವುದೇ ತಕರಾರಿಲ್ಲ. ಇಷ್ಟೇ ಅಲ್ಲ ಬಡವರು ಹಾಗೂ ಮಧ್ಯಮವರ್ಗದ ಜನರ ಪರ ನಮ್ಮ ಬೆಂಗಳೂರು ಫೌಂಡೇಷನ್ ನಿಲ್ಲಲಿದೆ ಎಂದಿದೆ.

 

ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಡಿಲಿಮಿಟೇಶನ್ ಸಲಹೆ ಸಲ್ಲಿಸಿದ ನಮ್ಮ ಬೆಂಗಳೂರು ಫೌಂಡೇಷನ್

ಅಕ್ರಮ ಸಕ್ರಮದಿಂದ ಬಿಲ್ಡರ್‌ಗಳಿಗೆ ತಮ್ಮ ಅಕ್ರಮಗಳಿಂದ ಲಾಭ ಪಡೆಯುವದನ್ನು ತಪ್ಪಿಸಲು  NBF ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.  ತಮ್ಮ ಸ್ವಂತ ಮನೆಗಳನ್ನು ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು  ಆಸ್ತಿಗಳನ್ನು ಕ್ರಮಬದ್ಧಗೊಳಿಸುವುದಕ್ಕೆ ಅನುಮತಿ ನೀಡಬೇಕು ಎಂದು ನಮ್ಮ ಬೆಂಗಳೂರು ಫೌಂಡೇಷನ್ ಒತ್ತಾಯಿಸಿದೆ. ಈ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಷನ್ ಸಂಪರ್ಕೀಸಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ನೆರವು ನೀಡಲು ಸುಪ್ರೀಂ ಕೋರ್ಟ್‌ನಲ್ಲಿ ಫೌಂಡೇಷನ್ ಸಲ್ಲಿಸಿರುವ ಅರ್ಜಿ ವಿರುದ್ಧ ಮನವಿ ಸಲ್ಲಿಸಲು ಅನುಮತಿ ನೀಡಲು ಕೋರಿದ್ದರು. ಇದರ ಬೆನ್ನಲ್ಲೇ ನಮ್ಮ ಬೆಂಗಳೂರು ಫೌಂಡೇಷನ್ ಸಿಂ ಬೊಮ್ಮಾಯಿಗೆ ಅಧಿಕೃತ ಪತ್ರದ ಮೂಲಕ ಸ್ಪಷ್ಟನೆ ನೀಡಿದೆ. 

ಬಡವರಿಗೆ ಮತ್ತು ಮಧ್ಯಮ ವರ್ಗದ ಮನೆ ಮಾಲೀಕರಿಗೆ ಅಕ್ರಮ-ಸಕ್ರಮದ ಈ ವಿನಾಯಿತಿಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಸರ್ಕಾರಗಳು ಸಲ್ಲಿಸುವ ಮನವಿಯನ್ನು ನಾವು ಬೆಂಬಲಿಸುತ್ತೇವೆ.  ಆದರೆ ತಪ್ಪಿತಸ್ಥ ಬಿಲ್ಡರ್‌ಗಳು ಮತ್ತು ಅಧಿಕಾರಿಗಳಿಗೆ ದಂಡ ವಿಧಿಸಲು ಸರ್ಕಾರವು ಶಿಫಾರಸು ಮಾಡಬೇಕು. ಈ ರಿಯಲ್ ಎಸ್ಟೇಟ್ ಬಿಲ್ಡರ್‌ಗಳಿಗೆ ಸಹಾಯ ಮಾಡಿದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಬೆಂಗಳೂರು ಫೌಂಡೇಷನ್ ಜಿಎಂ ವಿನೋದ್ ಜೇಕಬ್ ಹೇಳಿದ್ದಾರೆ.

click me!