ಫೋಕ್ಸೋ ಕೇಸ್: ಮುರುಘಾ ಶ್ರೀ ಇನ್ನೂ ಅರೆಸ್ಟ್ ಯಾಕಾಗಿಲ್ಲ? ಭುಗಿಲೆದ್ದ ಆಕ್ರೋಶ!

By Suvarna News  |  First Published Sep 1, 2022, 1:07 PM IST

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಅವರನ್ನು ಬಂಧಿಸುವಂತೆ ಪ್ರತಿಟನೆಗಳು ಆರಂಭವಾಗಿವೆ.


ಮೈಸೂರು, ಸೆಪ್ಟೆಂಬರ್ 01): ಚಿತ್ರದುರ್ಗದ ಮುರುಘಾ ಶರಣರ (Murugha Shri) ಬಂಧಿಸುವಂತೆ ಪ್ರತಿಭಟನೆಗಳು ಆರಂಭವಾಗಿವೆ. ಪ್ರಕರಣ ದಾಖಲಾಗಿ ಆರು ದಿನಗಳು ಆದರೂ ಸಹ ಇನ್ನೂ ಮುರುಘಾ ಶ್ರೀ ಬಂಧನ ಆಗಿಲ್ಲ. ಅದರಲ್ಲೂ ಫೋಕ್ಸೋ ಅಂತ ಕೇಸ್ ದಾಖಲಾದ ಮೇಲೂ ಅರೆಸ್ಟ್ ಮಾಡಿಲ್ಲ. ಇದರಿಂದ ಪೊಲೀಸರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ  ಖಂಡಿಸಿ ಇಂದು(ಗುರುವಾರ) ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ಮಾಡಿದವು.  ನಗರದ ಟೌನ್ ಹಾಲ್‌ನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದು,  ಅತ್ಯಾಚಾರಿಗಳ ಬಂಧನಕ್ಕೆ ಒತ್ತಾಯಿಸಿದವು.ಕಾಮಿ ಸ್ವಾಮಿಯನ್ನ ಗಲ್ಲಿಗೇರಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದ್ದು. ಫೋಕ್ಸೋ ಕಾಯಿದೆ ಅಡಿ ಸ್ವಾಮಿಜೀಯನ್ನ ಬಂಧಿಸಬೇಕೆಂದು ಪ್ರತಿಭಟನಾಕಾರರರು ಆಗ್ರಹಿಸಿದರು.

Latest Videos

undefined

ಮುರುಘಾ ಶ್ರೀ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಚಿತ್ರದುರ್ಗದಲ್ಲೂ ಪ್ರತಿಭಟನೆ
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಡಾ. ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ (Statue Collapse) ಮಾಡಲಾಗಿದೆ. ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ (Fire) ಹಾಕಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ. 

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಅತ್ಯಾಚಾರ, ಪೋಕ್ಸೋ ಕೇಸ್ ಸಂಕಷ್ಟ ತಂದೊಡ್ಡಿದೆ. ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ವಿರುದ್ಧ ಆಕ್ರೋಶ ಹೆಚ್ಚಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ
ಮುರಘಾ ಮಠದ ಶರಣ ಸ್ವಾಮೀಜಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ ಐದು ದಿನಗಳ ಕಡೆದರೂ ಸಹ ಶ್ರೀಗಳ ಬಂಧನವಾಗಿಲ್ಲ. ಇದರಿಂದ ಸಾಮಾಜಿ ಜಾಲತಾಣಗಳಲ್ಲಿ ಶ್ರೀಗಳ ವಿರುfಧ ಹಾಗೂ ಪೊಲೀಸರು ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 

ಫೋಕ್ಸೋ ಕಾಯ್ದೆಯಂತ ಪ್ರಕರಣಗಳಲ್ಲಿ ಇನ್ನೂ ಸ್ವಾಮೀಜಿಯನ್ನು ಅರೆಸ್ಟ್ ಮಾಡಿಲ್ಲ ಅಂದ್ರೆ ನಾಚಿಗೇಡು ಸಂಗತಿ. ಜನ ಸಾಮಾನ್ಯರ ವಿರುದ್ಧ ಕೇವಲ ಒಂದು ಸಾಧಾರಣ ಕೇಸ್ ದಾಖಲಾದ್ರೆ ಸಾಕು ಪೊಲೀಸ್ರು ನೋಟಿಸ್ ಕೊಟ್ಟ ಸ್ಪೆಷನ್‌ಗೆ ಬರುತ್ತಾರೆ. ಅಲ್ಲದೇ ಮನೆಗೆ ಬಾಯಿಗೆ ಬಂದಂಗೆ ಬೈದು ಎಳೆದುಕೊಂಡು ಬರುತ್ತಾರೆ. ಆದ್ರೆ, ಸ್ವಾಮೀಜಿ ವಿರುದ್ಧ ಫೋಕ್ಸೋ ಕೇಸ್ ದಾಖಲಾದೂ ಪೊಲೀಸರು ಇನ್ನೂ ಏಕೆ ಅವರನ್ನ ಬಂಧಿಸಿಲ್ಲ. ಅವರಿಗೊಂದು ಕಾನೂನು, ಜನಸಾಮಾನ್ಯರಿಗೊಂಡು ಕಾನೂನು ನಾ? ಅಂತೆಲ್ಲಾ ಪ್ರಶ್ನಿಸುತ್ತಿದ್ದಾರೆ.

click me!