ನಾಡದೇವತೆ ಚಾಮುಂಡೇಶ್ವರಿ ಆಸ್ತಿಗೆ ಕೈ ಹಾಕಿದ ಮೂರೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಡಾ ಉರುಳು!

By Sathish Kumar KH  |  First Published Aug 11, 2024, 12:27 PM IST

ತಲೆ ತಲಾಂತರಗಳಿಂದ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಗುಡಿ ಕಟ್ಟಿ ಪೂಜಿಸುತ್ತಾ ಬಂದ ಮೈಸೂರು ಒಡೆಯರ್ ರಾಜಮನೆತನವನ್ನು ಬದಿಗೊತ್ತು ಚಾಮುಂಡೇಶ್ವರಿ ಆಸ್ತಿಗೆ ಕೈ ಹಾಕಿದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇವಲ 3 ತಿಂಗಳಲ್ಲಿ ಮುಡಾ ಸಂಕಷ್ಟದ ಉರುಳು ಎದುರಾಗಿದೆ. 


ಬೆಂಗಳೂರು (ಆ.11): ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಗುಡಿ ಕಟ್ಟಿ ತಲೆ ತಲಾಂತರಗಳಿಂದ ಪೂಜಿಸುತ್ತಾ ಬಂದ ಮೈಸೂರು ಒಡೆಯರ್ ರಾಜಮನೆತನವನ್ನು ಬದಿಗೊತ್ತು ಚಾಮುಂಡೇಶ್ವರಿ ಆಸ್ತಿಗೆ ಕೈ ಹಾಕಿದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇವಲ 3 ತಿಂಗಳಲ್ಲಿ ಮುಡಾ ಸಂಕಷ್ಟದ ಉರುಳು ಎದುರಾಗಿದೆ. 

ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವರ ಆಸ್ತಿಗೆ ಕೈ ಹಾಕಿದ ಕೇವಲ 3 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿ ಸರಿಯಾದ ಪಾಠ ಕಲಿಸಿದ್ದಾಳೆ ಎಂದು ಜನರು ಹೇಳುತ್ತಿದ್ದಾರೆ. ಈಗ ಸಿಎಂ ಹುದ್ದೆಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದು, ತಾಯಿ ಬಳಿ ಸಿಎಂ ಸಿದ್ದಾರಾಮಯ್ಯ ಕ್ಷಮೆ ಕೇಳಿದ್ದಾರಾ ಎಂಬ ಗುಮಾನಿ ಹರಿದಾಡುತ್ತಿದೆ.

Latest Videos

undefined

ಪ್ರಕರಣ ಏನು..?
ಮೈಸೂರು ಚಾಮುಂಡಿ ಬೆಟ್ಟದ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಣ್ಣು ಹಾಕಿತ್ತು. ರಾಜ್ಯದಲ್ಲಿ ಅಭಿವೃದ್ಧಿಯ ನೆಪವೊಡ್ಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ (Chamundeshwari Kshetra Development Authority Act, 2024) ಎಂಬ ಹೊಸ ಕಾಯ್ದೆ ಜಾರಿ ಮಾಡಿತ್ತು. ಈ ಮೂಲಕ ತಲೆ ತಲಾಂತಗಳಿಂದ ನಾಡದೇವತೆಯನ್ನು ಆರಾಧಿಸುತ್ತಾ ಭವ್ಯ ಮಂದಿರ ಕಟ್ಟಿ ಪೂಜಿಸುತ್ತಾ, ವಾರ್ಷಿಕ ವಿಶ್ವ ವಿಖ್ಯಾತ ದಸರಾವನ್ನು ಆಚರಣೆ ಮಾಡಿಕೊಂಡು ಬಂದಿದ್ದ ಮೈಸೂರು ಒಡೆಯರ ಮನೆತನವನ್ನು ಚಾಮುಂಡೇಶ್ವರಿ ದೇವಾಲಯದ ವಿಚಾರದಿಂದ ದೂರ ಇಡುವ ಪ್ರಯತ್ನ ಮಾಡಲಾಗಿತ್ತು. ಇಕ್ಕೆ ಸ್ಥಳೀಯ ಜನರಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಬಹಿರಂಗವಾಗಿ ಯಾರೊಬ್ಬರೂ ಸರ್ಕಾರದ ನಡೆಯನ್ನು ವಿರೋಧಿಸಿ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಇಳಿದಿರಲಿಲ್ಲ. ಈ ಘಟನೆ ನಡೆದು ಕೇವಲ ಮೂರ್ನಾಲ್ಕು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಉರುಳು ಸಿಎಂ ಸಿದ್ದರಾಮಯ್ಯಗೆ ಸುತ್ತಿಕೊಂಡಿದೆ. ಇದರಿಂದ ಜನ ವಿರೋಧದ ಸಂಕಷ್ಟವೂ ಎದುರಾಗಿದೆ.

ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಪ್ರಮೋದಾದೇವಿ ಅಸಮಾಧಾನ

ಮೈಸೂರು ಮೂಲದವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಾ.7, 2024 ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮದ ಹೊಸ ಕಾಯ್ದೆ ಜಾರಿಗೆ ತಂದಿದೆ. ಈ ನಿಯಮದ ಮೂಲಕ ಚಾಮುಂಡೇಶ್ವರಿ ದೇವಾಲಯದ ಮೇಲೆ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕು ಮಾಡಲು ಮುಂದಾಗಿತ್ತು. ಅಂದರೆ, ಚಾಮುಂಡಿ ಬೆಟ್ಟಕ್ಕೂ ತಲೆ ತಲಾಂತರಗಳಿಂದ ಚಾಮುಂಡೇಶ್ವರಿ ದೇವಿ ಪೂಜಿಸುತ್ತಾ ಬಂದಿದ್ದ ಒಡೆಯರ್ ರಾಜಮನೆತನಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ರಾಜಮನೆತನದ ಅಧಿಕಾರ ಮೊಟಕು ಮಾಡಲು ಮುಂದಾಗಿತ್ತು.

ಮೈಸೂರು ರಾಜಮನೆತದಿಂದ ನಿರ್ಮಿಸಿದ ದೇವಾಲಯದಲ್ಲಿ ತಮಗೆ ಅಧಿಕಾರವಿಲ್ಲದಂತೆ ಮಾಡಲಾಗಿತ್ತು. ಆದರೆ, ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರ ಮಾಡಿಕೊಂಡು ತಾನೇ ಅಧ್ಯಕ್ಷರಾಗಿ ಮೆರೆಯಲು ಸಿಎಂ ಸಿದ್ಧರಾಮಯ್ಯ ನಿರ್ಧಾರ ಮಾಡಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲು ಸಿಎಂ ಸಿದ್ದರಾಮತ್ತ ಸರ್ಕಾರದ ಹೊಸ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಸರ್ಕಾರದ ಹೊಸ ಕಾಯ್ದೆಯ ಸೆಕ್ಷನ್ 2(ಎ), 3, 12(1), 14(3)14(4), 16(1), 17(1), 20(1)(ಒ), 20(2)ಗಳು ಸಂಪೂರ್ಣ ಕಾನೂನು ಬಾಹಿರವಾಗಿವೆ ಎಂದು ರಿಟ್ ಅರ್ಜಿಯ ಮೂಲಕ ಮನವಿ ಮಾಡಿದ್ದರು.

ನನ್ನ ಮಗ ಸುನೀಲ್ ಬೋಸ್ ಕೆಎಎಸ್ ಅಧಿಕಾರಿಗೆ ಕುಂಕುಮ ಇಟ್ಟಿದ್ದರಲ್ಲಿ ತಪ್ಪಿಲ್ಲ: ಸಚಿವ ಮಹದೇವಪ್ಪ

ಇನ್ನು ಹೈಕೋರ್ಟ್‌ನಲ್ಲಿ ಶನಿವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು ಸರ್ಕಾರದ ಹೊಸ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ ಕಾಯ್ದೆಗೆ ತಡೆ ನೀಡಲಾಗಿದೆ. ಇದರಿಂದಾಗಿ ಸಿಎಂ ಸಿದ್ಧರಾಮಯ್ಯ ಸರ್ಕಾರಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಪ್ರಾಧಿಕಾರ ಪ್ರಕರಣದಲ್ಲಿ ಭಾರಿ ಹಿನ್ನಡೆ ಉಂಟಾಗಿದೆ ಎಂದೇ ಹೇಳಬಹುದು.

click me!