* ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಗೆ ಭೇಟಿ ನೀಡಿದ ಪ್ರತಾಪ್ ಸಿಂಹ
* ಪುನೀತ್ ರಾಜ್ಕುಮಾರ್ಗೆ ಪ್ರತಾಪ್ ಸಿಂಹ ಶ್ರದ್ಧಾಂಜಲಿ
* ಅಂತಿಮ ದರ್ಶನ ಪಡೆದಿಯದಿರುವುದಕ್ಕೆ ಕಾರಣ ಕೊಟ್ಟ ಸಿಂಹ
ಬೆಂಗಳೂರು, (ಅ.31): ನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಅದರಲ್ಲೂ ಕರ್ನಾಟಕದ ರಾಜಕಾರಣಿಗಳು ಎರಡು ದಿನಗಳಿಂದ ಪುನೀತ್ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಕಂಠೀರವ ಸ್ಟೇಡಿಯಂನಲ್ಲಿ ಇದ್ದರು. ಅದರಲ್ಲೂ ಸಿಎಂ ಬೊಮ್ಮಾಯಿ, ಆರ್ ಅಶೋಕ್, ರಾಜುಗೌಡ ಸೇರಿದಂತೆ ಹಲವು ಸಚಿವರು ಸ್ಥಳದಲ್ಲಿಯೇ ಇದ್ದು ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆದ್ರೆ, ಮೈಸೂರು ಸಂಸದ ಪ್ರತಾಪ್ ಸಿಂಹ ಕಾಣಿಸಿಕೊಂಡಿರಲಿಲ್ಲ. ಇಂದು (ಅಕ್ಟೋಬರ್ 31) ಅಂತ್ಯಕ್ರಿಯೆ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿದ್ದಾರೆ. ಅದಕ್ಕೆ ಇದೀಗ ಅವರೇ ಕಾರಣ ಕೊಟ್ಟಿದ್ದಾರೆ.
undefined
ಅಪ್ಪು ಅಂತಿಮ ಸಂಸ್ಕಾರದವರೆಗೆ ಎಲ್ಲವೂ ಸುಸೂತ್ರ : ಧನ್ಯವಾದ ತಿಳಿಸಿದ ಸಿಎಂ
ನಟ ಪುನೀತ್ರನ್ನ ಶವವಾಗಿ ನೋಡುವುದಕ್ಕೆ ಮನಸ್ಸಾಗಿಲ್ಲ. ಹಾಗಾಗಿ ನಾನು ನಿನ್ನೆ (ಶನಿವಾರ) ಬಂದಿರಲಿಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಸಹಜವಾಗಿ ನಮಗೆಲ್ಲರಿಗೂ ವೇದನೆ ಆಗಿದೆ. ಪುನೀತ್ ಅವರನ್ನು ಶವವಾಗಿ ನೋಡಲು ಮನಸ್ಸಾಗಿಲ್ಲ. ಹಾಗಾಗಿ ಶನಿವಾರ ಬಂದಿರಲಿಲ್ಲ. ಕೊನೆಗೆ ಸಮಾಧಿಯನ್ನಾದ್ರೂ ನೋಡೋಣ ಅಂತ ಬಂದಿದ್ದೇನೆ ಎಂದರು.
ರಾಘವೇಂದ್ರ ರಾಜ್ಕುಮಾರ್ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಬಹಳ ವಿನಮ್ರ ಸ್ವಭಾವದ ವ್ಯಕ್ತಿ. ನನ್ನ ಹೆಂಡತಿಗೂ ಸಹ ಪುನೀತ್ ಅಂದ್ರೆ ತುಂಬಾ ಇಷ್ಟ. ಅವರು ನಮ್ಮ ಮನೆಗೂ ಸಹ ಬಂದಿದ್ರು. ಎಷ್ಟು ದೊಡ್ಡ ಸ್ಟಾರ್ ಆಗಿದ್ರೂ ಸರಳವಾಗಿ ಇದ್ದ ವ್ಯಕ್ತಿ ಅವರು. ನಟ ಪುನೀತ್ ಅಪಾರ ನೆನಪುಗಳನ್ನ ಬಿಟ್ಟು ಹೋಗಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಾಪ್ ಸಿಂಹ ಹಾರೈಸಿದರು.
ಸಿಎಂ ಧನ್ಯವಾದ
ಪುನೀತ್ ರಾಜ್ಕುಮಾರ್ ನಿಧನ ನಂತರ ಕಳೆದ ಮೂರು ದಿನಗಳಿಂದ ಸಾರ್ವಜನಿಕರ ದರ್ಶನದಿಂದ ಹಿಡಿದು ಎಲ್ಲಾ ವ್ಯವಸ್ಥೆ ಯ ವರೆಗೂ ಪೊಲೀಸರು, ಅಧಿಕಾರಿಗಳು ಶ್ರಮ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸನ್ನಿವೇಶವನ್ನ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಎಂ ಪೊಲೀಸರ ಶ್ರಮ, ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಪುನೀತ್ ಕುಟುಂಬದವರೂ ಸಂಪೂರ್ಣ ಸಹಕಾರ ನೀಡಿದ್ದಾರೆ ಅಪ್ಪು ಕುಟುಂಬದವರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಸರ್ಕಾರದ ವ್ಯವ್ಥಸ್ಥೆಗೆ ಶಿವಣ್ಣ ಕೃತಜ್ಞತೆ
ಸರ್ಕಾರದ ವ್ಯವ್ಥಸ್ಥೆಗೆ ಕೃತಜ್ಞತೆ ಸೂಚಿಸಿದ ಶಿವಣ್ಣ, ವ್ಯವಸ್ಥಿತವಾಗಿ ಅಂತಿಮದರ್ಶನ ಹಾಗೂ ಅಂತ್ಯಕ್ರಿಯೆಗೆ ಸಹಕರಿಸಿದ ಸರ್ಕಾರ, ಪೊಲೀಸರು, ಅಧಿಕಾರಿಗಳಿಗೆ ಕೃತಜ್ಞತೆಗಳು. ತುಂಬಾ ಚೆನ್ನಾಗಿ ಯಾರಿಗೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಿದರು. ಬೊಮ್ಮಾಯಿ ಅವರಿಗೆ ವಿಶೇಷ ಧನ್ಯವಾದಗಳು. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸವಿಟ್ಟಿದ್ದೀರಾ. ಅಪ್ಪಾಜಿದು ಅಂತ್ಯಕ್ರಿಯೆ ತುಂಬಾ ಕಷ್ಟ ಆಗಿತ್ತು. ಈ ವಿಚಾರವಾಗಿ ಇಡೀ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.