
ಮೈಸೂರು (ಜು.14): ‘ಆರೆಸ್ಸೆಸ್ ಆಳ-ಅಗಲ’ ಕೃತಿ ವಿಚಾರವಾಗಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ಕಿಡಿಕಾರಿದ್ದಾರೆ. ಸಾಹಿತಿ ದೇವನೂರ ಮಹಾದೇವ ಅವರು ರಚಿಸಿರುವುದು ಕೃತಿಯಲ್ಲ, ವಿಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನ ಆಳಾಗಿ ಬರೆಯುವವರಿಗೆ ಆರೆಸ್ಸೆಸ್‌ನ ಆಳ-ಅಗಲ ಹೇಗೆ ತಿಳಿದುಕೊಳ್ಳಲು ಸಾಧ್ಯ?
ಮಹಾದೇವ ಅವರು ಒಂದು ಪಕ್ಷದ ಆಳಾಗಿ ಆ ಕೃತಿ ಬರೆದಿದ್ದಾರೆ. ಒಂದು ಧರ್ಮ, ಒಬ್ಬ ನಾಯಕ, ಒಂದು ದೇಶವನ್ನು ಆರೆಸ್ಸೆಸ್ ಪ್ರತಿಪಾದಿಸುತ್ತದೆ ಎಂದು ಬರೆದಿರುವ ಮಹಾದೇವ ಅವರು, ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಕುಸುಮಬಾಲೆ ನಂತರ ದೇವನೂರ ಅವರಲ್ಲಿ ಒಂದಷ್ಟುಸೃಜನಶೀಲತೆ ಉಳಿದುಕೊಂಡಿದೆ ಎಂದುಕೊಂಡಿದ್ದೆ. ಆದರೆ, ಆರೆಸ್ಸೆಸ್ ಆಳ-ಅಗಲ ಕೃತಿ ಬರೆಯಲು ಹೋಗಿ ಅವರ ಘನತೆ ಕಳೆದುಕೊಂಡಿದ್ದಾರೆ. ಚಾತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಪ್ರಯತ್ನಿಸಿದ್ದಾರೆ.
ಒಳ್ಳೆಯ ಮುಸ್ಲಿಂಮರು ಈಗ್ಯಾಕೆ ಮೌನ ವಹಿಸಿದ್ದೀರಿ: ಸಂಸದ ಸಿಂಹ ಕಿಡಿ
ಹಾಗೆ ನೋಡಿದರೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಪಂಥಗಳಿದ್ದು, ಚಾತುರ್ವರ್ಣ ಪದ್ಧತಿ ಜಾರಿಯಲ್ಲಿದೆ. ವಿರೋಧಿಸುವುದಾದರೆ ಎಲ್ಲಾ ಧರ್ಮವನ್ನೂ ವಿರೋಧಿಸಲಿ ಎಂದರು. ಈ ಕೃತಿಯಲ್ಲಿ ಅದಾನಿ, ಅಂಬಾನಿ ಆಸ್ತಿ ಹೆಚ್ಚಾಗಿರುವುದು, ಬ್ಯಾಂಕ್ ಸಾಲ ಮತ್ತಿತರ ವಿಚಾರ ಬರೆದಿರುವುದನ್ನು ನೋಡಿದರೆ ರಾಹುಲ್‌ಗಾಂಧಿ ಭಾಷಣದಿಂದ ಪ್ರೇರಿತನಾದ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಬರೆದಂತಿದೆ. ಸಿದ್ದರಾಮಯ್ಯ ಅವರು ದೇವನೂರ ಮಹಾದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ ಅಷ್ಟೆಎಂದು ಪ್ರತಾಪ್ ಸಿಂಹ ದೂರಿದರು.
ಪ್ರತಾಪ್ ಸಿಂಹ ವಿರುದ್ಧ ಆರೋಪ ನಿಲ್ಲಿಸಲು ಆಗ್ರಹ: ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನಿರಂತರವಾಗಿ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಾಪ್ ಸಿಂಹ ಅಭಿಮಾನಿಗಳ ಬಳಗ ಆಗ್ರಹಿಸಿದೆ. ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ ಅವರು ಎರಡು ಬಾರಿ ಸಂಸತ್ ಸದಸ್ಯರಾಗಿರುವುದು. ಯಾವುದೇ ಚುನಾವಣೆಯನ್ನು ಗೆಲ್ಲದಿರುವ ಲಕ್ಷ್ಮಣ ಚರ್ಚೆಗೆ ಆಹ್ವಾನಿಸುವುದು ಹಾಸ್ಯಾಸ್ಪದ. ಬೇಕಿದ್ದರೆ ನಮ್ಮೊಂದಿಗೆ ಚರ್ಚಿಸಲಿ ಎಂದು ಅಭಿಮಾನಿ ಬಳಗದ ವಿ.ಪಿ. ನಂದಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಲ್ಲದೇ ಮಂಡ್ಯದಲ್ಲೂ ಪ್ರತಾಪ್ ಆಕ್ಟೀವ್, ಕುತೂಹಲ ಮೂಡಿಸಿದ ಸಿಂಹ ನಡೆ
ಅಲ್ಲದೆ, ಎಂ. ಲಕ್ಷ್ಮಣ ಅವರು ಯಾರನ್ನು ಮೆಚ್ಚಿಸಲು ಇಂತಹ ಬೇಜವಾಬ್ದಾರಿ ಮಾತುಗಳನ್ನಾಡುತ್ತಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಎಂ. ಲಕ್ಷ್ಮಣ ಅವರು ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸಲಿ. ಒಂದು ವೇಳೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಸೋತರೆ ನಾನು ಎಂ. ಲಕ್ಷ್ಮಣ ಮನೆಯಲ್ಲಿ ಗುಲಾಮನಾಗಿ ಕೆಲಸ ಮಾಡಲು ಸಿದ್ಧ. ಅವರೇನಾದರು ಸೋತರೆ ರಾಜಕೀಯ ನಿವೃತ್ತಿ ಪಡೆದು ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಬೇಕು ಎಂದು ಅವರು ಸವಾಲು ಹಾಕಿದರು. ಅಭಿಮಾನಿ ಬಳಗದ ಸುಕೀತ್‌ರ್, ಅಜಯ್, ಕಾರ್ತಿಕ್, ಪ್ರಸಾದ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ