ಅರಸುಗಿಂತ ಹೆಚ್ಚು ಬದ್ಧತೆ ಹೊಂದಿರುವ ಸಿದ್ದರಾಮಯ್ಯ: ಪರಂ

Published : Jul 14, 2022, 05:00 AM IST
ಅರಸುಗಿಂತ ಹೆಚ್ಚು ಬದ್ಧತೆ ಹೊಂದಿರುವ ಸಿದ್ದರಾಮಯ್ಯ: ಪರಂ

ಸಾರಾಂಶ

ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ಅಂಬೇಡ್ಕರ್‌ ಮೌಲ್ಯಗಳನ್ನು ನಿಜ ಜೀವನದಲ್ಲಿ ಯಾರಾದರೂ ಅಳವಡಿಸಿಕೊಂಡಿದ್ದರೆ ಅದು ಸಿದ್ದರಾಮಯ್ಯ ಮಾತ್ರ. ಸಣ್ಣ ಹಾಗೂ ಶೋಷಿತ ಜಾತಿಗಳ ಬಗ್ಗೆ ದೇವರಾಜ ಅರಸು ಅಥವಾ ಅವರಿಗೆ ಮಿಗಿಲಾದ ಬದ್ಧತೆ ತೋರಿದವರು.

ಬೆಂಗಳೂರು (ಜು.14): ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ಅಂಬೇಡ್ಕರ್‌ ಮೌಲ್ಯಗಳನ್ನು ನಿಜ ಜೀವನದಲ್ಲಿ ಯಾರಾದರೂ ಅಳವಡಿಸಿಕೊಂಡಿದ್ದರೆ ಅದು ಸಿದ್ದರಾಮಯ್ಯ ಮಾತ್ರ. ಸಣ್ಣ ಹಾಗೂ ಶೋಷಿತ ಜಾತಿಗಳ ಬಗ್ಗೆ ದೇವರಾಜ ಅರಸು ಅಥವಾ ಅವರಿಗೆ ಮಿಗಿಲಾದ ಬದ್ಧತೆ ತೋರಿದವರು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಗುಣಗಾನ ಮಾಡಿದ್ದಾರೆ. 

ಸಿದ್ದರಾಮಯ್ಯ ಜನ್ಮದಿನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನ್ಮ ದಿನಾಚರಣೆ ಮೂಲಕ ಇಡೀ ಸಮಾಜ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸಂದೇಶ ಕೊಡಬೇಕು. ಕಾರ್ಯಕ್ರಮದ ಮೂಲಕ ಕೇವಲ ಸಿದ್ದರಾಮಯ್ಯ ಅವರನ್ನು ಬಿಂಬಿಸದೆ ಅವರ ಮೂಲಕ ಕಾಂಗ್ರೆಸ್‌ ಪಕ್ಷದ ಆಶಯಗಳನ್ನು ಬಿಂಬಿಸಬೇಕು ಎಂದು ಕರೆ ನೀಡಿದರು. ‘ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ಹಿಂದೆ ಬದ್ಧತೆ ಇದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ 8 ವರ್ಷಗಳ ಅವಧಿಯಲ್ಲಿ ಅವರನ್ನು ಹತ್ತಿರದಿಂದ ನೋಡಿ ಶೇ. 60 ರಷ್ಟುಭಾಗ ಅರ್ಥ ಮಾಡಿಕೊಂಡಿದ್ದೇನೆ. ಉಳಿದದ್ದನ್ನು ಅವರು ಬಿಟ್ಟುಕೊಟ್ಟಿಲ್ಲ’ ಎಂದು ಹೇಳಿದರು. 

ದಲಿತ, ಮುಸ್ಲಿಮರು ಮನಸ್ಸು ಮಾಡಿದರೆ ದಲಿತ ಸಿಎಂ: ಜಿ.ಪ​ರ​ಮೇ​ಶ್ವರ್‌

‘ದೇವರಾಜ ಅರಸು ಅವರ ಮಾತು, ಕೃತಿಗಳನ್ನು ನಾವು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಸಣ್ಣ ಜಾತಿಗಳು, ಶೋಷಿತ ವರ್ಷಗಳಿಗೆ ಅವರಿಗೆ ಮಿಗಿಲಾದ ಬದ್ಧತೆ ತೋರಿಸಿದವರು ಸಿದ್ದರಾಮಯ್ಯ’ ಎಂದರು. ‘ಅವರ ಜನ್ಮ ದಿನಾಚರಣೆಯ ಮೂಲಕ ಸಮಾಜಕ್ಕೆ ಹಾಗೂ ರಾಜಕೀಯ ಸಂದೇಶ ಕಳುಹಿಸಬೇಕು. ಯಾವ್ಯಾವ ಜಿಲ್ಲೆಯಿಂದ ಎಷ್ಟೆಷ್ಟುಜನರನ್ನು ಕರೆತರಬೇಕು ಎಂಬ ಗುರಿ ನಿಗದಿಪಡಿಸಬೇಕು. ನಮ್ಮ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಮುಖಂಡರಿಗೆ ಜವಾಬ್ದಾರಿಗಳನ್ನು ವಹಿಸಬೇಕು. ಈಗಾಗಲೇ ರಚಿಸಿರುವ ವಿವಿಧ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಸಿದ್ದರಾಮೋತ್ಸವದಲ್ಲಿ ಭಾಗವಹಿಸುತ್ತೇನೆ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ 75 ವರ್ಷವಾಗಿದೆ. ಅಷ್ಟುವರ್ಷ ವಯಸ್ಸಾಗುವುದು ಒಬ್ಬರ ಜೀವನದಲ್ಲಿ ದೊಡ್ಡ ಸಾಧನೆ. ರಾಜಕೀಯ ವ್ಯಕ್ತಿಗಳು ಸೇರಿದಾಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತದೆ. ಹೆಚ್ಚು ಟಿಪ್ಪಣಿಗಳನ್ನು ಮಾಡುವ ಅಗತ್ಯವಿಲ್ಲ. ಸಿದ್ದರಾಮೋೕತ್ಸವವನ್ನು ಯಾಕೆ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಾವೊಂದು ಪಕ್ಷದ ಸದಸ್ಯರಾಗಿ ಮುಖಂಡರಾಗಿದ್ದರಿಂದ ಪಕ್ಷ ಯಾಕೆ ಲಾಭ ಮಾಡಿಕೊಳ್ಳಬಾರದು ಎಂದ ಪರಮೇಶ್ವರ್‌,ತುಮಕೂರು ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದು ಮನೆಗೆ ಪರಂ ದಿಢೀರ್‌ ಭೇಟಿ: ಅಂತರ ಕಾಯ್ದುಕೊಂಡ ಬಗ್ಗೆ ಸ್ಪಷ್ಟನೆ

ಜನರನ್ನು ಪ್ರತಿನಿಧಿಸುವುದು ಹೆಮ್ಮೆ. ರಾಜಕೀಯದಲ್ಲಿ ಇರಬೇಕಾದರೆ ಕೆಲವೊಂದು ಬಾರಿ ಬೇಜಾರಾಗುತ್ತದೆ. ಸಾರ್ವಜನಿಕ ಬದುಕಿನಲ್ಲಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗಲ್ಲ, ಹಾಗಾಗಿ ಇದು ಸಂತೋಷ ಅಂದುಕೊಳ್ಳಬೇಕು. ಶಾಸಕರಾಗಿ ರಿಟೈರ್ಡ್‌ ಆಗ್ತಾರೆ, ಆದರೆ ನಾನು ಸಚಿವ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿಯಾಗಿದ್ದೇನೆ ನನಗೆ ಬೇಜಾರಿಲ್ಲ. ಏನೇನು ಬದಲಾಗುತ್ತದೆ ಎಂದು ರಾಜಕೀಯದಲ್ಲಿ ಹೇಳಲು ಬರುವುದಿಲ್ಲ. ಡಿಕೆಶಿ ಅವರ ಮನೆ ಭೇಟಿ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌