ರೈಲು ಆಯ್ತು ಈಗ ಮೈಸೂರು ವಿಮಾನ ನಿಲ್ದಾಣಕ್ಕೂ ಒಡೆಯರ್‌ ಹೆಸರು: ಸಂಸದ ಪ್ರತಾಪ್‌ ಸಿಂಹ

By Govindaraj S  |  First Published Nov 14, 2022, 7:49 AM IST

ಈಗಾಗಲೇ ರೈಲೊಂದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ನಾಮಕರಣ ಮಾಡಿದಂತೆ, ಮೈಸೂರು ವಿಮಾನ ನಿಲ್ದಾಣಕ್ಕೂ ಅವರ ಹೆಸರಿಡಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.


ಮೈಸೂರು (ನ.14): ಈಗಾಗಲೇ ರೈಲೊಂದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ನಾಮಕರಣ ಮಾಡಿದಂತೆ, ಮೈಸೂರು ವಿಮಾನ ನಿಲ್ದಾಣಕ್ಕೂ ಅವರ ಹೆಸರಿಡಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ರಂಗಾಯಣ ಮತ್ತು ಅಯೋಧ್ಯ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಡ್ಡಂಡ ಸಿ.ಕಾರ್ಯಪ್ಪ ಅವರ ಟಿಪ್ಪು ನಿಜಕನಸುಗಳು ನಾಟಕ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ ಈ ವಿಚಾರ ತಿಳಿಸಿದರು. 

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಯ ಒಡೆಯರ್‌ ಹೆಸರಿಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಷ್ಟೇ ಬಾಕಿ ಇದೆ ಎಂದರು. ನಾವು ಶಾಲೆಯಲ್ಲಿ ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂದು ಓದಿಕೊಂಡು ಬಂದೆವು. ಯಾವ ಹುಲಿ ಕೊಂದ ಎಂದು ಪ್ರಶ್ನಿಸಲಿಲ್ಲ. ಏಕಾಂಕಿಯಾಗಿ, ಬರಿಗೈಯಲ್ಲಿ ಕೊಲ್ಲುವುದು ಹೇಗೆ ಸಾಧ್ಯ ಎಂದು ಇದೇ ವೇಳೆ ಪ್ರಶ್ನಿಸಿದರು. ಹಿಂದಿ ಏರಿಕೆ ಎಂದು ಹೋರಾಟ ನಡೆಸುವ ಕನ್ನಡಪರ ಹೋರಾಟಗಾರರು ನಿಜವಾದ ಕನ್ನಡ ಪದ ಬಿಟ್ಟು ಪರ್ಷಿಯನ್‌ ತುಂಬಿದ ಟಿಪ್ಪು ವಿರುದ್ಧ ಯಾಕೆ ಹೋರಾಟ ಮಾಡುವುದಿಲ್ಲ? 

Latest Videos

undefined

ವರ್ಷಾಂತ್ಯಕ್ಕೆ 25 ಕೋಟಿ ರು. ವೆಚ್ಚದ ಸಾರ್ವಜನಿಕ ಆಸ್ಪತ್ರೆ ಕಾರ್ಯಾರಂಭ: ಸಚಿವ ಸುಧಾಕರ್‌

ಅನೇಕ ಸಂಶೋಧನೆ ನಡೆಸಿದ್ದೇನೆ ಎಂದಿದ್ದ ಸಂಶೋಧಕ ಕಲಬುರ್ಗಿ ಅವರು ಟಿಪ್ಪುವಿನ ಕನ್ನಡ ವಿರೋಧಿತನವನ್ನು ಏಕೆ ಸಂಶೋಧನೆ ಮಾಡಲಿಲ್ಲ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಕೆ.ಆರ್‌.ಕ್ಷೇತ್ರದಲ್ಲಿ ಗುಂಬಜ್‌ ರೀತಿ ನಿರ್ಮಿಸಿರುವ ಬಸ್‌ ಶೆಲ್ಟರ್‌ಗಳನ್ನು ನಿಗದಿತ ಅವಧಿಯೊಳಗೆ ತೆಗೆಯದಿದ್ದರೆ ನಾನೇ ಬುಲ್ಡೋಜರ್‌ ತೆಗೆದುಕೊಂಡು ಹೋಗಿ ತೆಗೆಯುತ್ತೇನೆ ಎಂದು ಎಚ್ಚರಿಸಿದರು.

ಟಿಪ್ಪು ಯಾವ ಹುಲಿ ಕೊಂದ: ಸಂಸದ ಪ್ರತಾಪ ಸಿಂಹ ಮಾತನಾಡಿ, ನಾವು ಶಾಲೆಯಲ್ಲಿ ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂದು ಓದಿಕೊಂಡು ಬಂದೆವು. ಯಾವ ಹುಲಿ ಕೊಂದ ಎಂದು ಪ್ರಶ್ನಿಸಲಿಲ್ಲ. ಏಕಾಂಕಿಯಾಗಿ, ಬರಿಗೈಯಲ್ಲಿ ಕೊಲ್ಲುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಟಿಪ್ಪುವನ್ನು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಬೆಂಬಲಿಸಲು ಯಾವ ಅನಿವಾರ್ಯತೆ ಇದೆಯೋ ಗೊತ್ತಿಲ್ಲ. ಶಾಸಕ ತನ್ವೀರ್‌ಸೇಠ್‌ ಸಮರ್ಥನೆಯಲ್ಲಿ ನ್ಯಾಯವಿದೆ.

ಉದ್ದೇಶ ಪೂರ್ವಕವಾಗಿ ಟಿಪ್ಪು ರೈಲು ಹೆಸರು ಬದಲಿಸಲಾಗಿದೆ: ಸಂಸದ ಪ್ರತಾಪ್‌ ಸಿಂಹ

ಆದರೆ ವಿಶ್ವನಾಥ್‌ಗೆ ಏನು ಅನಿವಾರ್ಯತೆ ಇದೆ? 2ನೇ ಮಹಾಯುದ್ದದಲ್ಲಿ ಹೈದರ್‌ಅಲಿ ಸತ್ತ ಮೇಲೆ ಒಂದು ಯುದ್ಧವನ್ನೂ ಗೆಲ್ಲಲಾಗದ ಆತ ಸುಲ್ತಾನ ಹೇಗೆ ಆಗುತ್ತಾನೆ? ಬರಿಗೈಯಲ್ಲಿ ಹೇಗೆ ಹುಲಿ ಕೊಲ್ಲುತ್ತಾನೆ? ಇಲ್ಲಿ ಎಂದಿಗೂ ಮುಸ್ಲಿಂರು ಏಕಾಂಗಿಯಾಗಿ ಶೌರ್ಯಮೆರಿದಿಲ್ಲ, ಕ್ರೌರ್ಯ ಮೆರೆದಿದ್ದಾರೆ. 3ನೇ ಮಹಾಯುದ್ಧವಾದಲ್ಲಿ ರಣರಂಗಕ್ಕೂ ಬರದೆ, ಕೋಟೆ ಒಳಗೆ ಸತ್ತ ಟಿಪ್ಪು ಸುಲ್ತಾನ ಆಗಲು ಸಾಧ್ಯವೇ ಇಲ್ಲ. ಆತ ಕೋಟೆ ಒಳಗೇ ಕುಳಿತು ಬ್ರಿಟೀಷರೊಡನೆ ಸಂಧಾನಕ್ಕೆ ಮುಂದಾಗಿದ್ದ ಎಂದು ಅವರು ಹೇಳಿದರು.

click me!