Latest Videos

ಸಿಲಿಂಡರ್ ಸೋರಿಕೆ: ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ ಮೈಸೂರಿನ ಒಂದೇ ಕುಟುಂಬದ ನಾಲ್ವರು

By Suvarna NewsFirst Published May 22, 2024, 12:48 PM IST
Highlights

 ಸಿಲಿಂಡರ್ ಸೋರಿಕೆ ಆಗಿ ಒಂದೇ ಕುಟುಂಬದ  ನಾಲ್ವರು ಮಲಗಿದ್ದಲ್ಲಿಯೇ ಚಿರನಿದ್ರಗೆ ಜಾರಿದ ಆಘಾತಕಾರಿ ಘಟನೆ ಅರಮನೆ ನಗರಿ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.

ಮೈಸೂರು:  ಸಿಲಿಂಡರ್ ಸೋರಿಕೆ ಆಗಿ ಒಂದೇ ಕುಟುಂಬದ  ನಾಲ್ವರು ಮಲಗಿದ್ದಲ್ಲಿಯೇ ಚಿರನಿದ್ರಗೆ ಜಾರಿದ ಆಘಾತಕಾರಿ ಘಟನೆ ಅರಮನೆ ನಗರಿ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಯರಗನಹಳ್ಳಿ ನಿವಾಸಿಗಳಾದ  ಕುಮಾರಸ್ವಾಮಿ, ಮಂಜುಳಾ, ಆರತಿ, ಸ್ವಾತಿ ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾಗಿದ್ದು,  ಮೈಸೂರಿನಲ್ಲಿ ನೆಲೆಸಿದ್ದರು, ಬಟ್ಟೆಗೆ ಇಸ್ತಿ ಹಾಕುವ ಕೆಲಸವನ್ನು ಈ ದಂಪತಿ ಮಾಡುತ್ತಿದ್ದರು. 

ಭಾನುವಾರ ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ಸೋಮವಾರ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿಯೇ ಎಲ್ಲರೂ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಿಂದ ಯಾರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು ಹೋಗಿ ಬಾಗಿಲು ಮುರಿದು ನೋಡಿದಾಗ ಇಡೀ ಕುಟುಂಬ ಮಲಗಿದ್ದಲ್ಲಿಯೇ ಸಾವಿನ ಮನೆ ಸೇರಿರುವುದು ಬೆಳಕಿಗೆ ಬಂದಿದೆ. 

ಆದರೆ ಸಿಲಿಂಡರ್‌ನಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ, ಸಾವಿನ ಬಗ್ಗೆ ಕೆಲ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಜಿಂದಾಲ್ ಕಾರ್ಖಾನೆಯಲ್ಲಿ ಎಲ್‌ಪಿಜಿ ಅನಿಲ ಸೋರಿಕೆ: ಸುರಕ್ಷತಾ ಉಪಕರಣಗಳಿಲ್ಲದೇ ಕಾರ್ಮಿಕ ಸಾವು 

ಸ್ನಾನಕ್ಕೆ ಹೋದ ಯುವತಿ ಮರಳಿ ಬರಲೇ ಇಲ್ಲ !

ಗ್ಯಾಸ್ ಸೋರಿಕೆಯಾಗಿ ಸಾವನ್ನಪ್ಪುವ ಪ್ರಕರಣ ಇದೇ ಮೊದಲೇನು ಅಲ್ಲ,  ಈ ಹಿಂದೆ ಸಿಲಿಕಾನ್‌ ಸಿಟಿಯಲ್ಲೂ ಇಂತಹ ಘಟನೆಯೊಂದು ನಡೆದಿತ್ತು. ಗೀಸರ್ ಗ್ಯಾಸ್ ಸೋರಿಕೆಯಾಗಿ ಸ್ನಾನಕ್ಕೆ ಹೋಗಿದ್ದ ಯುವತಿ ಅಲ್ಲೇ ಸಾವನ್ನಪ್ಪಿದ್ದಳು.  ಬಸವೇಶ್ವರ ನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ಈ ಘಟನೆ ನಡೆದಿತ್ತು.  ಸ್ನಾನಕ್ಕೆ ತೆರಳಿದ್ದ ರಾಜೇಶ್ವರಿ ಬಹಳ ಸಮಯವಾದರೂ ಹೊರಗಡೆ ಬಂದಿರಲಿಲ್ಲ. ನಂತರ ಮನೆಯವರು ಬಾಗಿಲು ತೆಗೆದು ನೋಡಿದಾಗ ರಾಜೇಶ್ವರಿ ತೀವ್ರ ಅಸ್ವಸ್ಥಳಾಗಿ ಕೆಳಗೆ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದರು. 


ವಿಜಯಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ನಾಲ್ವರು ಗಂಭೀರ ಗಾಯ!

click me!