ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಸುಲ್ತಾನ್ ಹೆಸರಿಡಿ ಅಂತಾ ಕೇಳೋದ್ರಲ್ಲಿ ತಪ್ಪೇನೂ ಇಲ್ಲ: ಸಚಿವ ದಿನೇಶ್ ಗುಂಡೂರಾವ್

By Ravi JanekalFirst Published Dec 16, 2023, 3:35 PM IST
Highlights

ಕೇಂದ್ರದ ತಂಡ ಬಂದು ನೋಡಲಿ. ಯಾಕೆಂದರೆ ಇದು ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯ. ಮಹಿಳೆ ಮೇಲೆ ಹೇಗೆ ವರ್ತಿಸಿದ್ದಾರೆ ಅದನ್ನ ಖಂಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಂಗಳೂರು (ಡಿ.16): ಕೇಂದ್ರದ ತಂಡ ಬಂದು ನೋಡಲಿ. ಯಾಕೆಂದರೆ ಇದು ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯ. ಮಹಿಳೆ ಮೇಲೆ ಹೇಗೆ ವರ್ತಿಸಿದ್ದಾರೆ ಅದನ್ನ ಖಂಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಗೆ ಕೇಂದ್ರದ ತಂಡ ಬರಲಿ ಅವರು ನೋಡಲಿ ಏಕೆಂದರೆ ಇದು ಮಹಿಳೆಯ ಮೇಲೆ ಆಗಿರುವ ದೌರ್ಜನ್ಯ. ಎಲ್ಲರೂ ಖಂಡಿಸಲೇಬೇಕು. ಈ ವಿಚಾರದ ಬಗ್ಗೆ ಪೊಲೀಸರಿಗೆ ಗೊತ್ತಾದ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಕ್ರಮ ತೆಗೆದುಕೊಂಡಿಲ್ಲ ಅಂತ ಏನಿಲ್ಲ . ಮುಂದೆ ಏನಾಗಬೇಕು ಎಂಬುದು ಕಾನೂನು ಪ್ರಕಾರ ಆಗಲಿದೆ ಎಂದರು.

ಬೆಳಗಾವಿ ಕೇಸ್ ದ್ರೌಪದಿ ವಸ್ತ್ರಾಪಹರಣಕ್ಕಿಂತಲೂ ಕ್ರೂರ: ಹೈಕೋರ್ಟ್ 

ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ದುಷ್ಕರ್ಮಿಗಳು ಮಧ್ಯರಾತ್ರಿ ಮನೆಯಿಂದ ಎಳೆದು ತಂದು ಎರಡು ಗಂಟೆಗಳ ಕಾಲ ಅಮಾನುಷವಾಗಿ ಹಿಂಸಿರುವ ಪ್ರಕರಣ ದೇಶವನ್ನೇ ಬೆಚ್ಚಿಬಿಳಿಸಿದೆ. ರಾತ್ರೋರಾತ್ರಿ ನಡೆದ ಘೋರ ಕೃತ್ಯದ ಬಗ್ಗೆ ಸಂಸತ್ತಿನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಕೇಂದ್ರ ಮಹಿಳಾ ಸಂಸದರ ಸತ್ಯಶೋಧನಾ ತಂಡ ಬೆಳಗಾವಿಗೆ ಭೇಟಿ ನೀಡಿದೆ. ಪ್ರಕರಣದ ಬಗ್ಗೆ ವಿವರ ಪಡೆಯುತ್ತಿದೆ.

ಆರು ತಿಂಗಳಾದರೂ ಮಹಿಳಾ ಆಯೋಗಕ್ಕೆ ಅಧ್ಯಕ್ಷರಿಲ್ಲದ ವಿಚಾರ ಸಂಬಂಧ ಪ್ರತಿಕ್ರಿಯಿಸಿ ಸಚಿವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಾನು ಒತ್ತಾಯಿಸುತ್ತೇನೆ. ಅಧ್ಯಕ್ಷರನ್ನು ನೇಮಿಸಲು ಸರ್ಕಾರದ ಮಟ್ಟದಲ್ಲಿ ಹೇಳುತ್ತೇನೆ ಎಂದರು.

ಬೆಳಗಾವಿ ಶಾಕ್: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ!

ಇನ್ನು ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಎಲ್ಲೆಡೆ ಪರ ವಿರೋಧ ವ್ಯಕ್ತವಾಗುತ್ತಿದೆ. ಆ ಕುರಿತು ಕೇಳಿದ ಪ್ರಶ್ನೆಗೆ,  ನನಗೆ ಈ ಬಗ್ಗೆ ಇದುವರೆಗೂ ಈ ಬಗ್ಗೆ ಮಾಹಿತಿ ಇಲ್ಲ. ಟಿಪ್ಪು ಹೆಸರು ಇಡಿ ಅಂತ ಕೇಳೋದ್ರಲ್ಲಿ ತಪ್ಪೇನೂ ಇಲ್ಲ ಎಂದರು.

click me!