ಮುಸ್ಲಿಂ ಖಾಜಿಗಳ ಕುರಾನ್‌ ಪಠಣ ಸಂಪ್ರದಾಯ ಕೈಬಿಡಿ: ರೋಹಿತ್‌ ಚಕ್ರತೀರ್ಥ ವಿವಾದ

By Sathish Kumar KH  |  First Published Mar 28, 2023, 11:32 PM IST

ಹಿಂದೂ ದೇವರ ಮುಂದೆ ಅಲ್ಲಾನೇ ಎಲ್ಲಾ ಎನ್ನುವುದನ್ನು ಒಪ್ಪಲ್ಲ
ಬೇಲೂರು ಚನ್ನಕೇಶವ ರಥೋತ್ಸವದ ಮುಂದೆ ಕುರಾನ್‌ ಪಠಣ ಕೈಬಿಡಿ
90 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ತ್ಯಜಿಸಿ
 


ಬೆಂಗಳೂರು (ಮಾ.28): ಹೊಯ್ಸಳರಿಂದ ನಿರ್ಮಿತವಾದ 900 ವರ್ಷಗಳ ಇತಿಹಾಸವಿರುವ ಬೇಲೂರಿನ ಚನ್ನಕೇಶವ ದೇವಾಲಯದ ರಥೋತ್ಸವದ ವೇಳೆ ಮುಸ್ಲಿಂ ಖಾಜಿಗಳಿಂದ ಕುರಾನ್‌ ಪಠಣ ಮಾಡಲಾಗುತ್ತದೆ. ಹಿಂದೂ ದೇವರ ಮುಂದೆ ಅಲ್ಲಾನೇ ಎಲ್ಲಾ ಎಂದು ಹೇಳುವ ಸಂಪ್ರದಾಯ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಚಿಂತಕ ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇವಾಲಯ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿದೆ. ಹೊಯ್ಸಳರು ನಿರ್ಮಿಸಿದ ವಿಶ್ವದ ಅತ್ಯಂತ ಸುಂದರ ಕಲಾಕೃತಿ, ವಾಸ್ತುಶಿಲ್ಪಗಳಿಗೆ ಇಲ್ಲಿನ ಚನ್ನಕೇಶವ ದೇವಾಲಯ ಸಾಕ್ಷಿಯಾಗಿದೆ. ಆದರೆ, 900 ವರ್ಷಗಳ ಇತಿಹಾಸವಿರುವ ಬೇಲೂರು ಚನ್ನಕೇಶವ ದೇವಾಲಯದ ರಥೋತ್ಸವ ವೇಳೆ ಮುಸಲ್ಮಾನ ಖಾಜಿಗಳಿಂದ ಕುರಾನ್ ಪಠಣ ಮಾಡಲಾಗುತ್ತದೆ. ಈ ಸಂಪ್ರದಾಯ 900 ವರ್ಷಗಳಿಂದಲೂ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಈ ರೀತಿ ಸಂಪ್ರದಾಯ ಇರಲಿಲ್ಲ ಎಂದು ಹೇಳಿದರು.

Latest Videos

undefined

ಬ್ರಾಹ್ಮಣರು ಮತ್ತು ಜೈನರೊಂದಿಗೆ ಮುಸ್ಲಿಮರ ಪೈಪೋಟಿ ಸಾಧ್ಯವಿಲ್ಲ: ಶಾಫಿ ಸಅದಿ

ಕೇವಲ 90 ವರ್ಷಗಳ ಹಿಂದೆ ಕಡತದಲ್ಲಿ ಸೇರ್ಪಡೆ: ಕಳೆದ 90 ವರ್ಷಗಳಿಂದ ಇತ್ತೀಚೆಗೆ ಬೇಲೂರಿನ ಚನ್ನಕೇಶವ ದೇವಾಲಯದ ರಥೋತ್ಸವದ ವೇಳೆ ಮುಸ್ಲಿಂ ಖಾಜಿಗಳು ಕುರಾನ್‌ ಪಠಣ ಮಾಡುವ ಸಂಪ್ರದಾಯವನ್ನು ಅಳವಡಿಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯ ದೇವಾಲಯ ಸ್ಥಾಪನೆಯಾದಗಿಂದಲೂ ಇದ್ದಿದ್ದರೆ ನಮ್ಮ ವಿರೋಧವಿರಲಿಲ್ಲ. ಆದರೆ, ಕೇವಲ 90 ವರ್ಷದ ಹಿಂದೆ ಯಾರೋ ಕಡತದಲ್ಲಿ ಸೇರಿಸಿದ್ದಾರೆ. ಆದ್ದರಿಂದ ಈ ಕಡತಕ್ಕೆ ಬೆಲೆ ಕೊಟ್ಟು ಕುರಾನ್‌ ಪಠಣವನ್ನು ಮಾಡಿಸುವುದು ಸೂಕ್ತವಲ್ಲ ಎಂದು ಕಿಡಿಕಾರಿದರು.

ಹಿಂದೂ ದೇವರ ಮುಂದೆ ಅಲ್ಲಾನೇ ಎಲ್ಲಾ ಎಂದರೆ ಹೇಗೆ?:  ಇನ್ನು ಚನ್ನಕೇಶವ ರಥೋತ್ಸವಕ್ಕೆ ಬಂದು ಮುಸ್ಲಿಂಮರು ಬಂದು ಕುರಾನ್ ಪಠಣ ಮಾಡುವುದಕ್ಕೆ ನನ್ನ ವಿರೋಧವಲ್ಲ. ಆದರೆ, ಅವರು ಹಿಂದೂ ದೇವರ (ಚನ್ನಕೇಶವ) ಮುಂದೆ ಬಂದು ಅಲ್ಲಾನೇ ಎಲ್ಲ, ನಾವು ನಿನ್ನನ್ನು ಬಿಟ್ಟು ಬೇರೆ ಯಾರನ್ನ ಪೂಜಿಸುವುದಿಲ್ಲ ಎಂದು ಹೇಳುತ್ತಾರೆ. ನಮ್ಮ ದೇವರ ಮುಂದೆಯೇ ನಾವು ಯಾರನ್ನೂ ನಂಬುವುದಿಲ್ಲ ಎಂದು ಫಠಣ ಮಾಡೋದು ಎಷ್ಟು ಸರಿ. ನಾವೆಲ್ಲರೂ ಕೋಮು ಸೌಹಾರ್ದತೆಯಿಂದ ಇರಬೇಕು ಅಂದುಕೊಳ್ಳೋಣ. ಹಾಗಿದ್ದರೆ, ಅವರು ಕೂಡ ಅವರ ಆರಾಧನಾ ಸ್ಥಳಗಳಲ್ಲಿ ನಮ್ಮ ಅರ್ಚಕರನ್ನ ಕರೆದು ಪೂಜೆ ಮಾಡಿಸಲಿ ಎಂದು ಹೇಳಿದರು.

ಸಿಎಂ ಚಡ್ಡಿ ಬಿಚ್ಚಿಸ್ತೀವಿ ಎಂದವರಿಗೆ ಬಿರಿಯಾನಿ ಕೊಟ್ಟು ಸಾಕೊಲ್ಲ: ಬಾಂಬ್‌ ಹಾಕೋರ ತಲೆಗೆ ಬಾಂಬ್‌ ಹಾಕ್ತೀವಿ

ಮುಸ್ಲಿಂ ಆರಾಧನಾ ಸ್ಥಳದಲ್ಲಿ ಹಿಂದೂ ದೇವರ ಪೂಜೆಗೆ ಅವಕಾಶ ಕೊಡಿ: ಮುಸಲ್ಮಾನ ಖಾಜಿಗಳು ತಮ್ಮ ಆರಾಧನಾ ಸ್ಥಳಕ್ಕೆ ಹಿಂದೂ ಅರ್ಚಕರನ್ನು ಕರೆದುಕೊಂಡು ಹೋಗಿ, ಅಲ್ಲಿ ಹಿಂದೂ ದೇವರ ಪೂಜೆಗೆ ಅವಕಾಶ ಮಾಡಿಕೊಡಿ. ಇದಕ್ಕೆ ಒಪ್ಪದಿದ್ದರೆ ಈ ಕೂಡಲೇ ಚನ್ನಕೇಶವ ರಥೋತ್ಸವದ ಮುಂದೆ ಕುರಾನ್‌ ಪಠಣ ಸಂಪ್ರದಾಯವನ್ನು ನಿಲ್ಲಿಸಬೇಕು. ಈ ಬಗ್ಗೆ ಎಲ್ಲ ಸಾಕ್ಷ್ಯಾಧಾರಗಳನ್ನ ಪರಿಶೀಲಿಸಿ ಕುರಾನ್‌ ಪಠಣ ಸಂಪ್ರದಾಯವನ್ನ ಕೈಬಿಡಬೇಕು. ಈ ಬಗ್ಗೆ ನಾವು ಕೂಡ ಸರ್ಕಾರಕ್ಕೆ ಪತ್ರದ ಮೂಲಕ ಸಂಪ್ರದಾಯವನ್ನ ಬಿಡುವಂತೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

click me!