Panchamasali Peetha ಪಂಚಮಸಾಲಿ 3ನೇ ಪೀಠ ವಿವಾದ, ಜಯಮೃತ್ಯುಂಜಯ ಸ್ವಾಮೀಜಿಗೆ ಸಚಿವ ನಿರಾಣಿ ಟಾಂಗ್

By Suvarna NewsFirst Published Jan 22, 2022, 5:59 PM IST
Highlights

* ತಾರಕಕ್ಕೇರಿದ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿವಾದ
* 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯಶ್ರೀ ಆಕ್ರೋಶ 
* ಸ್ವಾಮಿಗೆ ಟಾಂಗ್ ಕೊಟ್ಟ  ಸಚಿವ ಮುರುಗೇಶ್ ನಿರಾಣಿ 

ಬಾಗಲಕೋಟೆ, (ಜ.22): ಪಂಚಮಸಾಲಿ 3ನೇ ಪೀಠಕ್ಕೆ (News Panchamasali Peetha) ಸಂಬಂಧಿಸಿದಂತೆ ಜಯಮೃತ್ಯುಂಜಯ ಸ್ವಾಮೀಜಿ ( Jaya Mrutyunjaya Swamiji) ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ(Murugesh Nirani)ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೀರಶೈವ ಲಿಂಗಾಯತ ಪಂಚಮಸಾಲಿ ಹೆಸರಲ್ಲಿ ಮೂರನೆ ಪೀಠದ ಹಿಂದೆ ಮುರುಗೇಶ್ ನಿರಾಣಿ ಕೈವಾಡವಿದೆ ಎಂಬ ಕಾಶಪ್ಪನವರ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ(Bagalakot) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ‌ ಮುರುಗೇಶ್ ನಿರಾಣಿ, ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ. ನನ್ನಲ್ಲಿ ಎರಡು ಪೀಠಗಳು ಒಂದೇ ಎಂಬ ಭಾವನೆ ಇದೆ. ಮೂರನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, 3ನೇ ಪೀಠ ಆದರೆ ತಪ್ಪಲ್ಲ ಎಂದು ಹೇಳುವ ಮೂಲಕ ಪಂಚಮಸಾಲಿ 3ನೇ ಪೀಠದ ಪರ ಬ್ಯಾಟಿಂಗ್ ಮಾಡಿದರು. 

ಪಂಚಮಸಾಲಿ ಸಮಾಜ ದೊಡ್ಡದಿದೆ. ಇದಕ್ಕೆ ನಾವು ಸಹಮತ ವ್ಯಕ್ತಪಡಿಸಬೇಕು. 3ನೇ ಪೀಠಕ್ಕೂ ನನಗೂ ಸಂಬಂಧ ಇಲ್ಲ. ಪಂಚಮಸಾಲಿ 3ನೇ ಪೀಠ ಆದರೆ ಅವರು ಏನಾದರೂ ಸಹಾಯ ಸಹಕಾರ ಕೇಳಿದರೆ ಆಗ ನನ್ನ ಅಳಿಲು ಸೇವೆ ಮಾಡಲು ಸಿದ್ದನಿದ್ದೇನೆ. ಸ್ವಾಮೀಜಿಗಳು ಆಪಾದನೆ ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳಲಿ. ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಷ್ಠೆಗಾಗಿ ಬರೀ ಅಪಾದನೆ ಮಾಡಬಾರದು ಎಂದರು.

ನಾನು ಸಿಎಂ ಸ್ಥಾನದ ಕನಸು ಕಂಡಿಲ್ಲ. ನಮ್ಮ ಪಕ್ಷ ಏನು ಜವಾಬ್ದಾರಿ ಕೊಡುತ್ತದೋ ಅದನ್ನು ಮಾಡುತ್ತೇನೆ. ನಾನು ಯಾವತ್ತಾದ್ರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ? ತಾವೇ ಕಲ್ಪನೆ ಮಾಡಿಕೊಂಡು ಮಾತನಾಡ್ತಿದ್ದಾರೆ. ಸಮಯ ನಿಗದಿ ಮಾಡಿದರೆ ನಾನೇ ಶ್ರೀಗಳನ್ನು ಭೇಟಿಯಾಗ್ತೇನೆ ಎಂದು ಸ್ಪಷ್ಟಪಡಿಸಿದರು.

 ಯಾರೋ ತಾವೇ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ಏನೇನೋ ಹೇಳಬಾರದು. ಟಿವಿಯಲ್ಲಿ, ಪತ್ರಿಕೆಯಲ್ಲಿ ಬರಲು ನನ್ನ ಮೇಲೆ ಆಪಾದನೆ ಮಾಡಬಾರದು. ಪಂಚಮಸಾಲಿ ಸಮಾಜವನ್ನು ಒಡೆಯುವ ಕೆಲಸಕ್ಕೆ ನನಗೆ ಸಮಯವಿಲ್ಲ. ಸಮಾಜ ಒಡೆಯುವ ಹುನ್ನಾರ ಮಾಡಿದವರು ಯಾರೆಂದು ನಿಮಗೆ ಗೊತ್ತು ಎಂದು ತಿಳಿಸಿದರು,

ನಾನು ವಿಜಯಪುರ, ಬಾಗಲಕೋಟೆ ಜಿಲ್ಲೆಯ ನೀರು ಕುಡಿದಿದ್ದೇನೆ. ಬೇರೆ ಬೇರೆಯವರು ಏನು ಮಾತಾಡ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಸುಮ್ಮನಿರುತ್ತೇನೆ ಎಂದರೆ ಅದು ನನ್ನ ಅಸಮರ್ಥತೆ ಅಲ್ಲ. ಟೀಕೆ, ಟಿಪ್ಪಣಿಗಳಿದ್ದರೆ ಹೇಳಲಿ. ನಾನು ನನ್ನ ತಪ್ಪು ತಿದ್ದಿಕೊಳ್ಳುತ್ತೇನೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

ಪಂಚಮಸಾಲಿ 3ನೇ ಪೀಠದ ಬಗ್ಗೆ ಸಮಾಜದ ಜನ ತೀರ್ಮಾನಿಸಿದ್ದಾರೆ.  ಮೂರನೇ ಪೀಠ ರಚನೆ ವಿಚಾರವಾಗಿ ಬೇರೆ ಬೇರೆ ಸ್ವಾಮೀಜಿಗಳು ಬರ್ತಿದ್ದಾರೆ. ಸಮಾಜ ಜನಸಂಖ್ಯೆ ಜಾಸ್ತಿ ಇರೋದ್ರಿಂದ 3ನೇ ಪೀಠ ಆದರೆ ತಪ್ಪೇನು? ಎಂದು ಪ್ರಶ್ನಿಸಿದರು.

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿವಾದ ತಾರಕಕ್ಕೇರಿದೆ. 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

3ನೇ ಪೀಠ ಮಾಡಿರುವುದೇ ಸಿಎಂ ಆಗೋದಕ್ಕೆ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಜಯಮೃತ್ಯುಂಜಯಶ್ರೀ ಅಸಮಾಧಾನ ಹೊರಹಾಕಿದ್ದಾರೆ. 

click me!