
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ.ಸುರೇಶ್ ಹೆಸರಿನಲ್ಲಿ ಬಹು ಕೋಟಿ ವಂಚನೆ ಪ್ರಕರಣ ಸಂಬಂಧ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ ಸಿಐಡಿ ಧ್ವನಿ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿಯನ್ನು ಸಿಐಡಿ ಪಡೆದಿತ್ತು. ಬಳಿಕ ನೋಟಿಸ್ ನೀಡಿ ಧರ್ಮ ಅವರ ಧ್ವನಿ ಮಾದರಿ (ಸ್ಯಾಂಪಲ್) ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ಅಧಿಕಾರಿಗಳು ಕಳುಹಿಸಿದ್ದಾರೆ
ಎಫ್‌ಎಸ್ ಎಲ್ ವರದಿ ಬಳಿಕ ವಂಚನೆ ಕೃತ್ಯದಲ್ಲಿ ಧರ್ಮ ಅವರು ಚಿನ್ನದ ವ್ಯಾಪಾರಿ ಜತೆ ಡಿ.ಕೆ.ಸುರೇಶ್ ದನಿ ಅನುಕರಣೆ ಮಾಡಿ ಮಾತನಾಡಿದ್ದಾರೋ ಅಥವಾ ಇಲ್ಲವೋ ಎಂಬುದು ಖಚಿತವಾಗಲಿದೆ ಎಂದು 'ಕನ್ನಡಪ್ರಭ'ಕ್ಕೆ ಮೂಲಗಳು ಮಾಹಿತಿ ನೀಡಿವೆ. ಚಿನ್ನ ವ್ಯಾಪಾರಿಗೆ ಮಾಜಿ ಸಂಸದ ಸುರೇಶ್ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಗೌಡ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಐಶ್ವರ್ಯಾಗೆ ಧರ್ಮ ಸಹಕರಿಸಿದ್ದರು ಎಂದು ದೂರ ಲಾಗಿತ್ತು.
ಇದನ್ನೂ ಓದಿ: ಮನೆಕೆಲಸದವರಾಗಿ ಬಂದು ಮನೆಮಂದಿಯನ್ನೇ ಮುಗಿಸಿದರು: IISC ವಿಜ್ಞಾನಿ ಹಾಗೂ ಕುಟುಂಬವನ್ನು ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಅಂದು ಚಿನ್ನ ವ್ಯಾಪಾರಿ ವನಿತಾ ಅವರ ಜತೆ ಮೊಬೈಲ್‌ನಲ್ಲಿ ತಾವೇ ಸಂಸದ ಸುರೇಶ್ ಎಂದು ಧರ್ಮ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿರುವ ದನಿಯ ಸಾಚಾತನಕ್ಕೆ ಧರ್ಮರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿದೆ. ಧರ್ಮ ಅವರ ಧ್ವನಿ ಪರೀಕ್ಷೆ ನಡೆಯಬಹುದು ಎಂದು ಕನ್ನಡಪ್ರಭ 2025ರ ಡಿ.9ರಂದೇ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ: ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ