
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: 10 ವರ್ಷಗಳಿಂದ ಗ್ರಾಮದಲ್ಲೇ ಇದ್ದು 11 ದಿನದ ಹಿಂದೆ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದ ಕೋತಿಯ 11ನೇ ದಿನದ ತಿಥಿ ಮಾಡಿ ಊರಿಗೆ ಊಟ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮದಲ್ಲಿ ನಡೆದಿದೆ. 11 ದಿನದ ಹಿಂದೆ ಕೋತಿ ಸಾವನ್ನಪ್ಪಿದ್ದಾಗಲೂ ಮುಗುಳಿ ಗ್ರಾಮದ ಜನ ಮನುಷ್ಯರು ಸತ್ತಾಗ ನಡೆಸುವಂತೆಯೇ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದರು.
ಜನರೆಲ್ಲರೂ ಒಟ್ಟಿಗೆ ಸೇರಿ ಕೋತಿಯ ತಿಥಿ :
ಊರಿನ ತುಂಬಾ ಮೆರವಣಿಗೆ ಮಾಡಿ ಗ್ರಾಮದ ಭೂತನಾಥೇಶ್ವರ ದೇಗುಲದ ಪಕ್ಕದಲ್ಲಿ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದರು. ನಿನ್ನೆಗೆ ಕೋತಿ ಸಾವನ್ನಪ್ಪಿ 11 ದಿನವಾದ ಹಿನ್ನೆಲೆ ಮುಗುಳಿ ಗ್ರಾಮದ ಸುಮಾರು 250-300 ಮನೆಯ ಜನರೆಲ್ಲರೂ ಒಟ್ಟಿಗೆ ಸೇರಿ ಕೋತಿಯ ತಿಥಿ ಮಾಡಿದ್ದಾರೆ. ಈ ಕೋತಿ 10 ವರ್ಷಗಳಿಂದ ಗ್ರಾಮದಲ್ಲಿ ಊರಿನ ಮಗನಂತಿತ್ತು. ಊರಿನ ಜನ ಕೋತಿಗೆ ಪ್ರೀತಿಯಿಂದ ಮಾರುತಿ ಎಂದೇ ಕರೆಯುತ್ತಿದ್ದರು. ಒಂದು ಕಾಲು ಕೂಡ ಮುರಿದು ಕುಂಟುತ್ತಾ ಓಡಾಡುತ್ತಿತ್ತು. ಗ್ರಾಮ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಮುಗುಳಿ ಗ್ರಾಮದಲ್ಲಿ ಸುಮಾರು 250-300ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರ ಮನೆಯ ಬಳಿಯೂ ಹೋಗುತ್ತಿತ್ತು. ಮಾರುತಿ ಅಂತ ಕರೆದರೆ ಹೋಗಿ ಬಾಳೆಹಣ್ಣು ಪಡೆದುಕೊಂಡು ಬರುತ್ತಿತ್ತು. ಯಾವುದೇ ಮನೆಯವರು ಎನೇ ಕೊಟ್ಟರು ತಿನ್ನುತ್ತಿತ್ತು. ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ.
ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್!
ಅಚಾನಕ್ಕಾಗಿ ವಿದ್ಯುತ್ ಶಾಕ್‌ನಿಂದ ಸಾವು :
ತಟ್ಟೆಯಲ್ಲಿ ಅನ್ನ ಹಾಕಿಕೊಟ್ಟರೆ ಮನುಷ್ಯರಂತೆಯೇ ಊಟ ಮಾಡುತ್ತಿತ್ತು. ಆದರೆ, ಮರದಿಂದ ಮರಕ್ಕೆ ಹಾರುವಾಗ ಅಚಾನಕ್ಕಾಗಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿತ್ತು. ಆ ಕೋತಿಯನ್ನ ಊರಿನ ಜನರೆಲ್ಲಾ ಸೇರಿ ಮನುಷ್ಯರು ಸತ್ತಾಗ ಯಾವ ರೀತಿ ಅಂತ್ಯ ಸಂಸ್ಕಾರ ಮಾಡುತ್ತಾರೋ ಅದೇ ರೀತಿ ಅಂತ್ಯ ಸಂಸ್ಕಾರ ಮಾಡಿದ್ದರು. ಕೋತಿಗೆ ಊರಿನ ತುಂಬಾ ಮೆರವಣಿಗೆ ಮಾಡಿ ಗ್ರಾಮದ ಭೂತನಾಥೇಶ್ವರ ದೇವಾಲಯದ ಪಕ್ಕದಲ್ಲಿ ಅಂತ್ಯ ಸಂಸ್ಕಾರ ಮಾಡಿ, ಕೋತಿಯ ತಿಥಿ ಮಾಡಲು ನಿರ್ಧರಿಸಿದ್ದರು. ಅದರಂತೆ ನಿನ್ನೆ, ಊರಿನ ಜನರೆಲ್ಲಾ ಸೇರಿ, ಹಣ ಸಂಗ್ರಹಿಸಿ ಕೋತಿಯ ತಿಥಿ ಮಾಡಿ ಇಡೀ ಊರಿಗೆ ಊಟ ಹಾಕಿದ್ದಾರೆ.
ಕೋತಿಗಳ ಐಸ್ ಕ್ರೀಂ ಪಾರ್ಟಿ ನೋಡಿದ್ರೆ ಎಂಥವರೂ ಬಾಯಲ್ಲೂ ಬರುತ್ತೆ ನೀರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ