
ಬೆಂಗಳೂರು (ಜು.29): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳು ಪವಿತ್ರವಾಗಿ ಪರಿಗಣಿಸುವ ಭಗವಧ್ವಜವನ್ನು ಎರಡ್ಮೂರು ಕಡೆಗಳಲ್ಲಿ ತೆರವು ಮಾಡಿದ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದೂ ಉಂಟು. ಆದರೆ, ಇದೀಗ ಮೂಡಿಗೆರೆಯಲ್ಲಿ ನಡೆಯುತ್ತಿರುವ ಹಿಂದು ಸಂಗಮ ಮಹಾರ್ಯಾಲಿ ಮತ್ತು ನೂತನ ಭಗವಧ್ವಜ ಕಟ್ಟೆ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅತಿಥಿಯಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿದಾಡುತ್ತಿದೆ. ಇದರಲ್ಲಿ ಮೂಡಿಗೆರೆ ಜನತೆ ನಯನ ಮೋಟಮ್ಮ ಹಾದಿಯಾಗಿ ಚಿಕ್ಕಮಗಳೂರಿನ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹಾಗೂ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಶಾಸಕಿ ನಯನ ಮೋಟಮ್ಮ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅನೇಕರಿಗೆ ಆಶ್ಚರ್ಯಕರ ವಿಚಾರವಾಗಿದೆ.
ನಯನ ಮೋಟಮ್ಮ ಭಾಗವಹಿಸಿದರೆ ಆಶ್ವರ್ಯವೇಕೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಹಿಂದೂ ಭಗವದ್ವಜಗಳ ವಿವಾದ ಮುನ್ನೆಲೆಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಗವದ್ವಜ ತೆರವು ಮಾಡಿದ ಘಟನೆ ನಡೆದಿತ್ತು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊನೆಗೆ ಅಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಭಗವಧ್ವಜ ಕಟ್ಟೆಯೇ ಇಲ್ಲದಂತೆ ಮಾಡಲಾಯಿತು. ಇದಾದ ನಂತರ ಕಳೆದ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬೃಹತ್ ಭಗವಧ್ವಜವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಬಗ್ಗೆ ಅಲ್ಲಿನ ಅನ್ಯ ಸಮುದಾಯದ ಕೆಲವರಿಂದ ವಿರೋಧ ವ್ಯಕ್ತವಾಯಿತು.
ಸರ್ಕಾರದ ಜಾಗದಲ್ಲಿ ದೊಡ್ಡ ಧ್ವಜಸ್ಥಂಬವನ್ನು ನಿರ್ಮಾಣ ಮಾಡಿ ಅಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಹನುಮಾನ್ ಧ್ವಜ ಕೆಳಗಿಳಿಸಲು ಸೂಚನೆ ನೀಡಿತು. ಇದಕ್ಕೆ ಜನರು ಒಪ್ಪದಿದ್ದಾಗ ಅಲ್ಲಿಗೆ ಪೊಲೀಸ್ ಪಡೆಯನ್ನು ಕಳಿಸಿ ಹನುಮಧ್ವಜ ಕೆಳಗಿಳಿಸಲು ಮುಂದಾಯಿತು. ಆಗ ಸ್ಥಳೀಯ ಗ್ರಾಮಸ್ಥರು ಹಾಗೂ ಜಿಲ್ಲೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ದೌಡಾಯಿಸಿ ಬಂದು ಪ್ರತಿಭಟನೆ ಹಮ್ಮಿಕೊಂಡರು. ಸರ್ಕಾರದ ಯಾವುದೇ ವ್ಯಕ್ತಿ ಹನುಮ ಧ್ವಜ ಕೆಳಗಿಳಿಸಲು ಸಾಧ್ಯವಾಗದಂತೆ ಮಹಿಳೆಯರ ಹಾದಿಯಾಗಿ ಸಾವಿರಾರು ಜನರು ಧ್ವಜಸ್ತಂಭವನ್ನು ಸುತ್ತುವರಿದು ನಿಂತು ಪ್ರತಿಭಟಿಸಿದರು.
ಸರ್ಕಾರ ಮಾತ್ರ ಮೊಂಡು ಹಠಕ್ಕೆ ಬಿದ್ದಂತೆ ಕಾಣಿಸುತ್ತಿತ್ತು. ಹನುಮಾನ್ ಧ್ವಜವನ್ನು ತೆರವು ಮಾಡಲೇಬೇಕೆಂದು ಗ್ರಾಮ ಪಂಚಾಯಿತಿ ಆದೇಶಗಳನ್ನೆಲ್ಲಾ ರದ್ದುಗೊಳಿಸಿ, ನೇರವಾಗಿ ಜಿಲ್ಲಾಡಳಿತವೇ ಈ ತೆರವು ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿತು. ಅಲ್ಲಿ ಪ್ರತಿಭಟನೆ ಹತ್ತಿಕ್ಕಲು ಎಷ್ಟು ಬೇಕೋ ಅಷ್ಟು ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳಿಸಲಾಯಿತು. ಅಲ್ಲಿ ನೆರೆದಿದದ ಜನರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಕೊನೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹನುಮಧ್ವಜ ತೆರವುಗೊಳಿಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಇದೀಗ ರಾಷ್ಟ್ರ ಧ್ವಜ ಹಳತಾಗಿ, ಹರಿದು ಹೋಗಿದ್ದರೂ ಅದನ್ನು ತಿರುಗಿ ಕೂಡ ನೋಡುವವರಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ