ಕೆಆರ್‌ಎಸ್‌ನಲ್ಲಿ ನೀರು ಕಡಿಮೆ: ಸಂಸದೆ ಸುಮಲತಾ ಅಂಬರೀಶ್‌ ಕಳವಳ

By Kannadaprabha NewsFirst Published Jul 7, 2023, 1:12 PM IST
Highlights

ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಕಾರಣ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಮುಂದಿನ ಎರಡು ವಾರಗಳ ಕಾಲ ಕುಡಿಯುವ ನೀರು ಲಭ್ಯ ಇರುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಕಳವಳ ವ್ಯಕ್ತಪಡಿಸಿದರು. 

ಶ್ರೀರಂಗಪಟ್ಟಣ (ಜು.07): ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಕಾರಣ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಮುಂದಿನ ಎರಡು ವಾರಗಳ ಕಾಲ ಕುಡಿಯುವ ನೀರು ಲಭ್ಯ ಇರುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಕೆಆರ್‌ಎಸ್‌ ಜಲಾಶಯಕ್ಕೆ ಗುರುವಾರ ಭೇಟಿ ನೀಡಿ ಪ್ರಸ್ತುತ ಅಣೆಕಟ್ಟೆನೀರನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಂಸದರು, ಪ್ರಸ್ತುತ ಅಣ್ಣೆಕಟ್ಟೆಯಲ್ಲಿ 78 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 114.70 ಅಡಿಗಳಷ್ಟು ನೀರಿತ್ತು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡುವುದಾಗಿದೆ ಎಂದರು.

ಈ ಹಿಂದೆ ಅನೇಕ ಬಾರಿ ಜುಲೈ 15ರ ನಂತರವೂ ಉತ್ತಮ ಮಳೆಯಾಗಿ ನೀರು ಹೆಚ್ಚು ಸಂಗ್ರಹವಾಗಿದೆ. ಈ ಬಾರಿಯೂ ಅಲ್ಲಿವರೆಗೂ ಕಾದು ನೊಡಬೇಕಿದೆ. ನಮಗೆ ಬೇಸಿಗೆಯಲ್ಲೂ ಮಳೆ ಬಂದಿಲ್ಲ. ಕಾವೇರಿ ಕೊಳ್ಳದಲ್ಲಿ ಇದುವರೆಗೂ ಉತ್ತಮ ಮಳೆ ಆಗಿಲ್ಲ. ಇದರಿಂದ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಇದು ಆತಂಕ ಸೃಷ್ಠಿಸಿದೆ ಎಂದು ಹೇಳಿದರು. ಸಂಸದರಿಗೆ ಕಾವೇರಿ ನೀರಾವರಿ ನಿಗಮದ ಇ.ಇ ರಾಮಮೂರ್ತಿ ಮಾಹಿತಿ ನೀಡಿದರು. ಈ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿ ಪರಿಹಾರಕ್ಕಾಗಿ ಮನವಿ ಮಾಡುವುದಾಗಿ ತಿಳಿಸಿದರು.

ಎತ್ತಿನಹೊಳೆ ಕಾಮಗಾರಿ ಸರ್ಕಾರ ಪೂರ್ಣಗೊಳಿಸಲಿದೆ: ವೀರಪ್ಪ ಮೊಯ್ಲಿ

ಬಿಜೆಪಿ ಅಧಿಕೃತ ಸದಸ್ಯೆಯಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯಾವ ಪಾರ್ಟಿಯಲ್ಲೂ ಇಲ್ಲ. ಪಕ್ಷೇತರವಾಗಿ ನಿಂತು ಗೆದಿದ್ದೇನೆ. ನಾನು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದೇನೆ ಹೊರತು ಬಿಜೆಪಿಯ ಯಾವುದೇ ಸಭೆ ಸಮಾರಂಭಗಳಲ್ಲಿ ನಾನು ಭಾಗಿಯಾಗಿಲ್ಲ. ಮೈತ್ರಿ ವಿಷಯ ಆಯಾ ಪಕ್ಷಗಳಿಗೆ ಸಂಬಂಧ ಪಟ್ಟಿದ್ದು, ನಾನು ಬಿಜೆಪಿ ಅಧಿಕೃತ ಸದಸ್ಯೆಯಲ್ಲ. ನಾನು ಬಿಜೆಪಿ ಪಕ್ಷದ ಆಂತರಿಕ ವಿಚಾರದಲ್ಲಿ ನಿರ್ಧಾರಗಳು ಅವರಿಗೆ ಬಿಟ್ಟಿದ್ದು ಎಂದು ಪ್ರಶ್ನೆಗೆ ಉತ್ತರಿಸಿದರು.

ಅಪಘಾತ ತಡೆಗೆ ಉನ್ನತ ತಜ್ಞರ ಸಮಿತಿ ರಚನೆ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣದಲ್ಲಿರಬಹುದಾದ ಲೋಪಗಳ ಪರಿಶೀಲನೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು. ವಿಧಾನ ಸೌಧದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಂಸದರು ಮತ್ತು ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ವಿಪಕ್ಷ ನಾಯಕನ ಆಯ್ಕೆ ಕುರಿತು ಸಿ.ಟಿ.ರವಿ ಹೇಳಿದ್ದೇನು?

ಸಂಸದರು, ಶಾಸಕರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳನ್ನೊಳಗೊಂಡ ತಜ್ಞರ ಸಮಿತಿ ರಚಿಸುವುದು. ಸಮಿತಿಯು ಅಪಘಾತ ನಡೆಯುವ ಸ್ಥಳಗಳು ಮತ್ತು ಆಗಮನ-ನಿರ್ಗಮನ ಸ್ಥಳಗಳನ್ನು ನಿರ್ಮಾಣ ಸಮಸ್ಯೆಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ವರದಿ ನೀಡಲು ತೀರ್ಮಾನಿಸಲಾಯಿತು. ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಮತ್ತು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಜೊತೆಗೆ ಭಾರತೀಯ ಹೆದ್ದಾರಿ ಪ್ರಾಧಿಕಾರದ ಮಂತ್ರಿಗಳ ಜೊತೆ ಮಾತನಾಡಿ ಲೋಪಗಳನ್ನು ಸರಿಪಡಿಸುವಂತೆ ಮನವಿ ಮಾಡಲಾಗುವುದು ಎಂದು ನಿರ್ಧರಿಸಲಾಯಿತು.

click me!