ಕರ್ನಾಟಕ ಬಿಜೆಪಿಯಲ್ಲಿನ ಜಾತಿವಾದ, ಭ್ರಷ್ಟಾಚಾರ, ಕುಟುಂಬವಾದದ ಶುದ್ಧೀಕರಣ ಮಾಡ್ತೇನೆ: ಸಂಸದ ಸದಾನಂದಗೌಡ!

By Sathish Kumar KHFirst Published Mar 21, 2024, 11:48 AM IST
Highlights

ಕರ್ನಾಟಕ ಬಿಜೆಪಿಯಲ್ಲಿರುವ ಸ್ವಜನಪಕ್ಷಪಾತ, ಜಾತಿವಾದ, ಕುಟುಂಬವಾದ, ಭ್ರಷ್ಟಾಚಾರವನ್ನು ಶುದ್ದಿಕರಣ ಮಾಡುತ್ತೇನೆ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ಬೆಂಗಳೂರು (ಮಾ.21): ದೇಶದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಜನಪರ ಮತ್ತು ಜನ ಒಪ್ಪಿಕೊಳ್ಳುವ ಪಕ್ಷ ಆಗಬೇಕು.ಶೇ.40 ಕಮಿಷನ್ ಆರೋಪ, ಸ್ವಜನಪಕ್ಷಪಾತ ಹಾಗೂ ಮೋದಿಯವರು ಹೇಳಿದಂತೆ ಜಾತಿವಾದ, ಕುಟುಂಬವಾದ, ಭ್ರಷ್ಟಾಚಾರ ಇರಬಾರದು. ಹೀಗಾಗಿ, ಪಾರ್ಟಿಯ ಶುದ್ದಿಕರಣ ಮಾಡುತ್ತೇನೆ. ರಾಜ್ಯ ಬಿಜೆಪಿ ಶುದ್ಧೀಕರಣವಾದರೆ ಅದು ಸದಾನಂದಗೌಡರಿಂದ ಮಾತ್ರ ಸಾಧ್ಯವೆಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬದಲಿ ಹೆಸರು ಬಂದ ತಕ್ಷಣ ಅದು ಕುತೂಹಲದ ಕ್ಷೇತ್ರ ವಾಗಿ ಪರಿಗಣನೆ ಆಯ್ತು. ಚುನಾವಣೆ ಕಣದಿಂದ ದೂರ ಸರಿದ ಮೇಲೆ ಮತ್ತೆ ಸ್ಪರ್ಧೆ ಮಾಡಿ ಎಂದು ಪಾರ್ಟಿ ಲೀಡರ್ ಮನವಿ ಮಾಡಿದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಸದಾನಂದ ಗೌಡ ಬಲಿಯಾದರೆ ಎಂದು ಮಾಧ್ಯಮ ವಿಶ್ಲೇಷಣೆ ಮಾಡಿತು. ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ಇಂದ ಆಹ್ವಾನ ಬಂದಿದೆಯೆ? ಹೌದು ಬಂದಿದೆ. ಕಾಂಗ್ರೆಸ್ ಸೇರುತ್ತಿರಾ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರ ಅಲ್ಲ. ನನ್ನ ನಡಿಗೆ ಕರ್ನಾಟಕ ಬಿಜೆಪಿ ಶುದ್ದಿಕರಣ ಕಡೆಗೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ನನಗೆ ಆಫರ್ ಬಂದಿದೆ, ನಾಳೆಯೇ ನನ್ನ ನಿಲುವನ್ನು ತಿಳಿಸ್ತೇನೆ; ಸಂಸದ ಡಿ.ವಿ. ಸದಾನಂದಗೌಡ

ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಜನಪರ ಮತ್ತು ಜನ ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಶೇ.40 ಕಮಿಷನ್ ಆರೋಪ, ಸ್ವಜನಪಕ್ಷಪಾತ ಆರೋಪ ಬರಬಾರದು. ಮೋದಿಯವರು ಹೇಳಿದಂತೆ ಜಾತಿವಾದ, ಕುಟುಂಬವಾದ ಹಾಗೂ ಭ್ರಷ್ಟಾಚಾರ ಇರಬಾರದು. ಹೀಗಾಗಿ, ಪಾರ್ಟಿಯ ಶುದ್ದಿಕರಣಕ್ಕೆ ವೇಗ ಕೊಡುತ್ತೇನೆ. ಸದಾನಂದ ಗೌಡ ಏನು ಮಾಡಿಯಾರು ಎಂದು ಕೆಲವರು ಹೇಳಬಹುದು. ಆದರೆ, ರಾಜ್ಯದ ಬಿಜೆಪಿ ಪಕ್ಷ ಶುದ್ಧೀಕರಣ ಯಾರಾದರೂ ಮಾಡುತ್ತಾರೆಂದರ ಅದು ಸದಾನಂದ ಗೌಡರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಂದು ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು  ಮನವಿ ಮಾಡಿದ್ದರು.  ಆದರೆ, ಅವರಿಗೆ ಪಾರ್ಟಿ ಬೆಲೆ ಕೊಡಲಿಲ್ಲ. ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ. 'ಒಬ್ಬ ವ್ಯಕ್ತಿಗೆ ಸಹಿಸಿಕೊಳ್ಳುವವನಿಗೆ ತಾಳ್ಮೆ ಇದ್ದರೆ, ದುಃಖ ನೀಡುವವನು ಇದ್ದು ಸತ್ತಂತೆ' ಎಂಬುದು ಹಿರಿಯರು ಹೇಳಿದ ಮಾತು. ರಾಜ್ಯದಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲಿಲ್ಲ ‌. ಸಿಟಿ ರವಿಯನ್ನು ಸೈಡ್ ಲೈನ್ ಮಾಡುವ ವ್ಯವಸ್ಥೆ ನಡೆಯುತ್ತಿದೆ. 142 ಜನರು ಸದಾನಂದಗೌಡರೇ ಸ್ಪರ್ಧೆ ಮಾಡಬೇಕು ಎಂದು ಹೇಳಿದರು. ಆದ್ರೆ ದೆಹಲಿಯಲ್ಲಿ ನನ್ನ ಪರ ನಿಲ್ಲದವರು ನಾಯಕರೇ ಅಲ್ಲ ಎಂದು ಕಿಡಿಕಾರಿದರು. 

ಹಾವೇರಿಯ ಕಾಂಗ್ರೆಸ್‌ ಚುನಾವಣೆ ಪ್ರಚಾರ ಸಭೇಲಿ ಗದ್ದಲ: ಕೈಕೈ ಮಿಲಾಯಿಸಿದ ಕಾರ್ಯಕರ್ತರು

ಮಾಧ್ಯಮ ವಿಶ್ಲೇಷಕರು ಕೂಡ, ನಾನು ಕೊಟ್ಟ ಕುದುರೆ ಏರದವನು ಎಂದರು. ನಾನು ಕೇಂದ್ರ ಮಂತ್ರಿಯಾಗಿ ಫೇಲ್ ಅಂದರು. ಆ ಮಾಧ್ಯಮ ವಿಶ್ಲೇಷಕರಿಗೆ ಹೇಳುತ್ತೇ‌ನೆ, ಸಿಎಂ ಆಗಿದ್ದಾಗ ಸಕಾಲ ಯೋಜನೆ ತಂದೆ‌. ಕೇಂದ್ರ ಮಂತ್ರಿ ಆಗಿದ್ದಾಗ ರೆಮಿಡಿಸಿವರ್ ಮೆಡಿಸಿನ್ ಕರ್ನಾಟಕಕ್ಕೆ ನೀಡಿದೆ. ಮಾಧ್ಯಮಗಳ ಚರ್ಚೆಗೆ ನಾನು ಕುಗ್ಗುವುದು ಇಲ್ಲ. ಹಿಗ್ಗುವುದು ಇಲ್ಲ. ನಿಮಗೆ ಪಾರ್ಟಿ ಎಲ್ಲಾ ನೀಡಿದೆ. ಇನ್ನೇನಿದ್ದರೂ ಪಾರ್ಟಿಗೆ ಸದಾನಂದ ಗೌಡ ನೀಡುವುದು ಬಾಕಿ ಇದೆ ಎಂದು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಈಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು.

click me!