Russia Ukraine Crisis ಇಂದು 100ಕ್ಕೂ ಅಧಿಕ ಕನ್ನಡಿಗರು ಮರಳುವ ನಿರೀಕ್ಷೆ

Kannadaprabha News   | Asianet News
Published : Mar 04, 2022, 05:15 AM IST
Russia Ukraine Crisis ಇಂದು 100ಕ್ಕೂ ಅಧಿಕ ಕನ್ನಡಿಗರು ಮರಳುವ ನಿರೀಕ್ಷೆ

ಸಾರಾಂಶ

ಶುಕ್ರವಾರ ಬರುವ 19 ವಿಮಾನಗಳಲ್ಲಿಯೂ ಕನ್ನಡಿಗರು ಎಲ್ಲಾ ವಿಮಾನಗಳಲ್ಲಿಯೂ ಕನ್ನಡಿಗರು ಬರುವ ನಿರೀಕ್ಷೆ ರಾಜ್ಯ ನೋಡಲ್ ಅಧಿಕಾರಿ ಮನೋಜ್ ರಾಜನ್ ಮಾಹಿತಿ

ಬೆಂಗಳೂರು (ಮಾ.4): ಉಕ್ರೇನ್‌ನಿಂದ (Ukraine) ಶುಕ್ರವಾರ 100ಕ್ಕೂ ಅಧಿಕ ಕನ್ನಡಿಗರು ಆಗಮಿಸುವ ನಿರೀಕ್ಷೆ ಇದ್ದು, ಉಳಿದವರ ಪೈಕಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಕಲ್ಪಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಸಂದೇಶ ನೀಡಲಾಗಿದೆ ಎಂದ ಉಕ್ರೇನ್‌ ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್‌ ಅಧಿಕಾರಿ (State Nodal Officer) ಮನೋಜ್‌ ರಾಜನ್‌ (Manoj Rajan)ತಿಳಿಸಿದ್ದಾರೆ.

ಭಾರತೀಯ ರಾಯಭಾರಿ ಕಚೇರಿ ಬುಧವಾರ ಸಂಜೆಯೊಳಗೆ ಖಾರ್ಕಿವ್‌ (Kharkiv) ನಗರ ಬಿಡುವಂತೆ ತುರ್ತು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಕಷ್ಟುಮಂದಿ ಕನ್ನಡಿಗರು ಉಕ್ರೇನ್‌ ಗಡಿ ಪ್ರದೇಶಕ್ಕೆ ಹೊರಟಿದ್ದು, ಈಗಾಗಲೇ ಹಲವರು ಬಂದು ತಲುಪಿದ್ದಾರೆ. ಆಪರೇಷನ್‌ ಗಂಗಾದಲ್ಲಿ (Operation Ganga) ಉಕ್ರೇನ್‌ನಿಂದ ಶುಕ್ರವಾರ 19 ವಿಮಾನಗಳು ಭಾರತೀಯರನ್ನು ಹೊತ್ತು ಬರಲಿವೆ. ಈ ಎಲ್ಲ ವಿಮಾನಗಳಲ್ಲಿಯೂ ಕರ್ನಾಟಕದ ವಿದ್ಯಾರ್ಥಿಗಳಿದ್ದು, 100ಕ್ಕೂ ಅಧಿಕ ಮಂದಿ ರಾಜ್ಯಕ್ಕೆ ಮರಳುವ ನೀರಿಕ್ಷೆ ಇದೆ. ಕಳೆದ ಐದು ದಿನಗಳ ಪೈಕಿ ಗುರುವಾರ ಅತಿ ಹೆಚ್ಚು 63 ಮಂದಿ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಬಳಿ ಉಕ್ರೇನ್‌ನಲ್ಲಿಯೇ ಉಳಿದುಕೊಂಡಿರುವ ಕನ್ನಡಿಗರ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಯಾರೆಲ್ಲಾ ಸಂಕಷ್ಟದಲ್ಲಿದ್ದಾರೆಯೋ ಅವರಿಗೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳ ನೆರವು ಕೊಡಿಸಲಾಗುತ್ತಿದೆ. ಯುದ್ಧ ಹೆಚ್ಚಿರುವ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ, ನೀರು, ಗಡಿಗೆ ತೆರಳಲು ಜತೆಗಾರರ ಸಂಪರ್ಕ ಇಲ್ಲದವರಿಗೆ ವಿಶ್ವವಿದ್ಯಾಲಯ, ಸ್ಥಳೀಯರಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸಹಾಯವಾಣಿಗೆ 693 ಮಂದಿ ಕುಟುಂಬಸ್ಥರು ನೋಂದಣಿಯಾಗಿದ್ದಾರೆ. ಕೆಲವರು ಯುದ್ಧ ಆರಂಭಕ್ಕೂ ಒಂದು ದಿನ ಮುನ್ನವೇ ಉಕ್ರೇನ್‌ನಿಂದ ಹೊರಟು ರಾಜ್ಯಕ್ಕೆ ಮರಳಿದ್ದಾರೆ. ಅಂತಹವರ ಹೆಸರು ನೋಂದಣಿ ಪಟ್ಟಿಯಲ್ಲಿದೆ. ಹೀಗಾಗಿ, ಪ್ರತಿಯೊಬ್ಬರ ಕುಟುಂಬಸ್ಥರಿಗೆ ಕರೆ ಮಾಡಿ ಖಚಿತ ಪಡೆಸಿಕೊಳ್ಳಲಾಗುತ್ತಿದೆ. ಯುದ್ಧಪೂರ್ವದಲ್ಲಿ ಸರ್ಕಾರಕ್ಕೆ ಮಾಹಿತಿ ಇಲ್ಲದೇ ತಮ್ಮವರು ಆಗಮಿಸಿದ್ದರೆ, ಹೆಚ್ಚುವರಿ ನೋಂದಣಿ ಮಾಡಿದ್ದರೆ ಕುಟುಂಬಸ್ಥರು ಸಹಾಯವಾಣಿಗೆ ಕರೆ ಮಾಡಿ ಖಚಿತಪಡಿಸಬೇಕು ಎಂದು ಮನವಿ ಮಾಡಿದರು.


ಉಕ್ರೇನ್‌ನಲ್ಲಿ ಕನ್ನಡಿಗರನ್ನು ಒತ್ತೆಯಾಳಾಗಿಟ್ಟಿಲ್ಲ: ನೋಡಲ್‌ ಅಧಿಕಾರಿ
ಬೆಂಗಳೂರು:
ಉಕ್ರೇನ್‌ನಲ್ಲಿ ಯುದ್ಧ ಹೆಚ್ಚಿರುವ ನಗರಗಳಲ್ಲಿ ಕನ್ನಡಿಗರನ್ನು ಒತ್ತೆಯಾಳಾಗಿಟ್ಟುಕೊಂಡಿಲ್ಲ ನೋಡಲ್‌ ಅಧಿಕಾರಿ ಮನೋಜ್‌ ರಾಜನ್‌ ಸ್ಪಷ್ಟಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಒತ್ತೆಯಾಳು ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ಈ ಬಗ್ಗೆ ರಾಜ್ಯಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಂದ, ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಂದ ಹಾಗೂ ಉಕ್ರೇನ್‌ನಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆಯಲಾಗಿದೆ ಎಂದು ಮನೋಜ್‌ ರಾಜನ್‌ ಹೇಳಿದರು.

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹ ಯಾವಾಗ ಬರುತ್ತೆ? ಹೆತ್ತವರ ಕಾತರ
ಇಂದು 100ಕ್ಕೂ ಅಧಿಕ ಕನ್ನಡಿಗರ ಆಗಮನ: ಉಕ್ರೇನ್‌ನಿಂದ ಶುಕ್ರವಾರ 100ಕ್ಕೂ ಅಧಿಕ ಕನ್ನಡಿಗರು ಆಗಮಿಸುವ ನಿರೀಕ್ಷೆ ಇದ್ದು, ಉಳಿದವರ ಪೈಕಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಕಲ್ಪಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಸಂದೇಶ ನೀಡಲಾಗಿದೆ ಎಂದ ಉಕ್ರೇನ್‌ ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್‌ ಅಧಿಕಾರಿ ಮನೋಜ್‌ ರಾಜನ್‌ ತಿಳಿಸಿದ್ದಾರೆ.

Russia Ukraine Crisis ಉಕ್ರೇನ್‌ನ ಪರಿಸ್ಥಿತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಕನ್ನಡಿಗ
ಭಾರತೀಯ ರಾಯಭಾರಿ ಕಚೇರಿ ಬುಧವಾರ ಸಂಜೆಯೊಳಗೆ ಖಾರ್ಕಿವ್‌ ನಗರ ಬಿಡುವಂತೆ ತುರ್ತು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಕಷ್ಟುಮಂದಿ ಕನ್ನಡಿಗರು ಉಕ್ರೇನ್‌ ಗಡಿ ಪ್ರದೇಶಕ್ಕೆ ಹೊರಟಿದ್ದು, ಈಗಾಗಲೇ ಹಲವರು ಬಂದು ತಲುಪಿದ್ದಾರೆ. ಆಪರೇಷನ್‌ ಗಂಗಾದಲ್ಲಿ ಉಕ್ರೇನ್‌ನಿಂದ ಶುಕ್ರವಾರ 19 ವಿಮಾನಗಳು ಭಾರತೀಯರನ್ನು ಹೊತ್ತು ಬರಲಿವೆ. ಈ ಎಲ್ಲ ವಿಮಾನಗಳಲ್ಲಿಯೂ ಕರ್ನಾಟಕದ ವಿದ್ಯಾರ್ಥಿಗಳಿದ್ದು, 100ಕ್ಕೂ ಅಧಿಕ ಮಂದಿ ರಾಜ್ಯಕ್ಕೆ ಮರಳುವ ನೀರಿಕ್ಷೆ ಇದೆ. ಕಳೆದ ಐದು ದಿನಗಳ ಪೈಕಿ ಗುರುವಾರ ಅತಿ ಹೆಚ್ಚು 63 ಮಂದಿ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್