ಹಾವೇರಿಯಲ್ಲಿ ಎದೆನಡುಗಿಸುವ ನೈತಿಕ ಪೊಲೀಸ್‌ಗಿರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಕರಣದ ಎರಡು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.
ಹಾನಗಲ್ (ಜ.10): ರಾಜ್ಯದಲ್ಲಿ ಬೆಚ್ಚಿಬೀಳಿಸುವ ನೈತಿಕ ಪೊಲೀಸ್ ಗಿರಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್‌ನ ಖಾಸಗಿ ಹೋಟೆಲ್‌ಗೆ ನುಗ್ಗಿ ಇಬ್ಬರನ್ನು ಯವಕರ ಗುಂಪು ಥಳಿಸಿದೆ. ಲಾಡ್ಜ್‌ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿಸಲಾಗಿದೆ. ಮುಸ್ಲಿಂ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಕಾರಣಕ್ಕೆ ಅನ್ಯಕೋಮಿನ ಯುವಕರ ಗುಂಪಿನಿಂದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 'ಬುರ್ಖಾ ಹಾಕಿಕೊಂಡು ಬಂದು ಇಲ್ಲಿ ಮಲಗಿದ್ದೀಯಾ?ಎಂದು ಮಹಿಳೆಗೆ ಯುವಕರು ಥಳಿಸಿದ್ದಾರೆ. ನಿನಗೆ ನಮ್ ಹುಡುಗೀನೇ ಬೇಕಾ ಎಂದು ಆ ವ್ಯಕ್ತಿಗೂ ಬಾರಿಸಿದ್ದಾರೆ. ಇಬ್ಬರ ಮೇಲೂ ಹಲ್ಲೆ ನಡೆಸಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಎದೆನಡುಗಿಸುವಂಥ ನೈತಿಕ ಪೊಲೀಸ್‌ಗಿರಿಯ ವಿಡಿಯೋ ಇದಾಗಿದೆ. ಅಲ್ಲದೆ ವಿಡಿಯೋನಲ್ಲಿಯೇ ಥಳಿಸುತ್ತಿರುವ ಯುವಕರು ಗುಂಪು, ವಿಡಿಯೋ ಮಾಡಬೇಡಿ ಎಂದು ಹೇಳಿದೆ. ಒಂದು ವಿಡಿಯೋದಲ್ಲಿ ಇಬ್ಬರ ಮೇಲೆ ಲಾಡ್ಜ್‌ನಲ್ಲಿಯೇ ಹಲ್ಲೆ ಮಾಡಲಾಗಿದ್ದರೆ, ಇನ್ನೊಂದು ವಿಡಿಯೋದಲ್ಲಿ ಇಬ್ಬರನ್ನೂ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಬಳಿಯ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್‌ನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಮಹಿಳೆಯೊಂದಿಗೆ ಹಿಂದು ವ್ಯಕ್ತಿ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಯುವತಿಯ ಪರಿಚಯಸ್ಥರ ಯುವಕರ ಗುಂಪು ಇಬ್ಬರ ಮೇಲೆ ಹಲ್ಲೆ ನಡೆದಿದೆ. ಬುರ್ಖಾ ಹಾಕಿಕೊಂಡು ಬಂದು ಮಲಗಿದಿಯಾ? ಎಂದು ಮಹಿಳೆಯನ್ನು ಯುವಕರು ಥಳಿಸಿದ್ದಾರೆ. ನಿನಗೆ ನಮ್ ಹುಡುಗಿನೇ ಬೇಕಾ ಎಂದು ಮಹಿಳೆ ಜೊತೆ ಇದ್ದ ವ್ಯಕ್ತಿಗೂ ಯುವಕರು ಹೊಡೆದಿದ್ದಾರೆ. ರೂಮಲ್ಲಿ ನೀರು ಬರ್ತಾ ಇದೆಯಾ ಚೆಕ್ ಮಾಡಬೇಕು ಬಾಗಿಲಿ ತೆಗೆಯಿರಿ ಎಂದು ಯುವಕರು ಹೇಳಿದ್ದಾರೆ. ಈ ವೇಳೆ ನೀರು ಬರ್ತಾ ಇದೆ ಏನೂ ಸಮಸ್ಯೆ ಇಲ್ಲ ಎಂದು ಮಹಿಳೆಯ ಜೊತೆಗಿದ್ದ ವ್ಯಕ್ತಿ ಒಳಗಡೆಯಿಂದಲೇ ಹೇಳಿದ್ದಾನೆ.
ಕಾಫಿನಾಡಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ; ಹಿಂದು ಯುವತಿ ಜೊತೆಗಿದ್ದ ಅನ್ಯಕೋಮಿನ ಯುವಕ, ಸ್ನೇಹಿತರ ಮೇಲೆ ಹಲ್ಲೆ!
ಕೊನೆಗೆ ಬಾಗಿಲು ಓಪನ್ ಮಾಡಿದ್ದೇ ತಡ ತಮ್ಮ ಕೋಮಿನ ಯುವತಿ ಮೇಲೆ ಯುವಕರು ಮೊದಲಿಗೆ ಹಲ್ಲೆ ಮಾಡಿದ್ದಾರೆ. ತಡವಾಗಿ ಬೆಳಕಿಗೆ ಬಂದ ಪ್ರಕರಣದಲ್ಲಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಮಹಿಳೆ ಮೇಲೆ ಮತ್ತೇನಾದರೂ ದೌರ್ಜನ್ಯ ನಡೆದಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಹೇಳಿಕೆಯನ್ನೂ ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಘಟನೆ ಸಂಬಂಧ ಒಬ್ಬರು ಯುವಕರನ್ನು ವಶಕ್ಕೆ ಪಡೆದು ಹಾನಗಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಹದಗೆಟ್ಟಿದೆಯಾ ಕಾನೂನು ಸುವ್ಯವಸ್ಥೆ? ಅಕ್ಕ-ತಮ್ಮನ ಮೇಲೆಯೇ ನೈತಿಕ ಪೊಲೀಸ್‌ಗಿರಿ?