ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಪ್ರವೇಶ; ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ

By Sathish Kumar KHFirst Published Jun 1, 2024, 3:55 PM IST
Highlights

ಈಗಾಗಲೇ 15 ದಿನ ಮೊದಲೇ ರಾಜ್ಯಕ್ಕೆ ಪ್ರವೇಶ ಪಡೆದ ಮುಂಗಾರು ಮಳೆಯು ನಾಳೆ ಬೆಂಗಳೂರಿಗೆ ಪ್ರವೇಶಿಸಲಿದೆ. ನಾಳೆಯಿಂದ 5 ದಿನ ಯಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು (ಜೂ. 01): ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಪಡೆದಿದ್ದು, ಕೊಡಗು ಸೇರಿ ಕರಾವಳಿ ತೀರ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಜೊತೆಗೆ, ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂಗಾರು ಮಳೆ ಪ್ರವೇಶ ಮಾಡಲಿದ್ದು, ಮುಂದಿನ 5 ದಿನ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ವರ್ಷ ಬಿಫೋರ್ ಜಾಯ್ ಚಂಡಮಾರುತ ಬೀಸಿದ್ದರಿಂದಾಗ ರಾಜ್ಯಕ್ಕೆ ಆಗಮಿಸಬೇಕಿದ್ದ ಮುಂಗಾರು ಮಳೆ ಪ್ರವೇಶ ವಿಳಂಬವಾಗಿತ್ತು. ಕಳೆದ ಸಾಲಿನಲ್ಲಿ ಜೂ.15ಕ್ಕೆ ಮುಂಗಾರು ಮಳೆ ಪ್ರವೇಶ ಪಡೆದಿತ್ತು. ಆದರೆ, ಈ ಬಾರಿ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವಂತಹ ಚಂಡಮಾರುತ ಬೀಸದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ಮುಂಗಾರು ಮಳೆ ಪ್ರವೇಶವಾಗಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಕೆಲ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇನ್ನು ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಹಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.

Latest Videos

ಕರ್ನಾಟಕಕ್ಕೆ ಮುಂಗಾರು ಪ್ರವೇಶ: ಮಳೆ ಶುರು

ನಾಳೆಯಿಂದ ಬೆಂಗಳೂರಿಗೆ ಮುಂಗಾರು ಮಳೆ ಪ್ರವೇಶ: ಕೇರಳ ರಾಜ್ಯಕ್ಕೆ ಒಂದು ದಿನ ಮೊದಲೇ  ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂಗಾರು ಪ್ರವೇಶದ ಘೋಷಣೆಗೆ ಕೆಲವು ಮಾನದಂಡಗಳನ್ನು ಹವಾಮಾನ ಇಲಾಖೆ ಪರಿಶೀಲಿಸುತ್ತಿದೆ. ಜೂ.1 ಅಥವಾ 2 ರಂದು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ. ಇನ್ನು ನಾಳೆ ಜೂ.2ಕ್ಕೆ ರಾಜ್ಯ ರಾಧಾನಿ ಬೆಂಗಳೂರಿಗೆ ಮುಂಗಾರು ಮಳೆ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿಉ ರಾಜ್ಯದಲ್ಲಿ‌ ಇಂದಿನಿಂದ ಐದು ದಿನಗಳ‌ ಕಾಲ ಭಾರಿ‌ ಮಳೆಯಾಗುವ ಸಾಧ್ಯತೆಯಿದೆ.

ಸದ್ಯ ಕೇರಳ ಪ್ರವೇಶಿಸಿರುವ ಮುಂಗಾರು, ಕೇರಳ ಪ್ರವೇಶಿಸಿದ ನಂತರ ನಮ್ಮ ರಾಜ್ಯಕ್ಕೆ ಪ್ರವೇಶಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 15 ದಿನ ಮೊದಲೇ ಮಂಗಾರು ಮಳೆ ಪ್ರವೇಶವಾಗಿದೆ. ಹೀಗಾಗಿ, ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆಯು ಅಲರ್ಟ್ ನೀಡಿದೆ. ಬೆಂಗಳೂರಿಗೆ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗಲಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಈ ವರ್ಷದ ಮಳೆಗಾಲದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಸಿದ್ಧತೆಯಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಿಎಂ ಬೊಮ್ಮಾಯಿ

ನಾಳೆಯಿಂದ 9 ಜಿಲ್ಲೆಗೆ ಯೆಲ್ಲೋ ಅಲರ್ಟ್:  ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಪಡೆಯುತ್ತಿದ್ದಂತೆಯೇ ಜೂ.1 ರಿಂದಲೇ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಹಾಗೂ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮತ್ತು ಜೂ.2 ರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಆರಂಭಗೊಳ್ಳಲಿದೆ. ಅಲ್ಲಿಂದ ಒಂದು ವಾರ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ಜೂ.2 ಮತ್ತು 3ಕ್ಕೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಕೊಡಗು ಸೇರಿ 9 ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ.ವರೆಗೆ ಮಳೆ ಯಾಗುವ ಸಾಧ್ಯತೆ ಇದ್ದು ಜೂನ್ 2ಕ್ಕೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

click me!