Mohammad Azharuddin: ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ

Published : Jun 14, 2025, 11:23 PM ISTUpdated : Jun 14, 2025, 11:24 PM IST
ohammad Azharuddin Raiachur Tournament,

ಸಾರಾಂಶ

ರಾಯಚೂರಿನಲ್ಲಿ ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಮಾಜಿ ಕ್ರಿಕೆಟಿಗ ಅಜರುದ್ದೀನ್, ಕಾಂಗ್ರೆಸ್ ಗ್ಯಾರಂಟಿಗಳನ್ನು ಶ್ಲಾಘಿಸಿದರು, ಐಪಿಎಲ್ ದುರಂತ ಮತ್ತು ಏರ್ ಇಂಡಿಯಾ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ರಾಯಚೂರು (ಜೂ.14): ಯೂತ್ ಕಾಂಗ್ರೆಸ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅತಿಥಿಯಾಗಿ ಭಾಗವಹಿಸಿದರು. ರಾಯಚೂರು ನಗರದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಅವರು ಅಜರುದ್ದೀನ್‌ಗೆ ಸಾಥ್ ನೀಡಿದರು. ಕಾರ್ಯಕ್ರಮದ ವೇಳೆ ಪೊಲೀಸ್ ಸಿಬ್ಬಂದಿ ಅಜರುದ್ದೀನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಎಲ್ಲರನ್ನೂ ಕರೆಸಿ ಫೋಟೊಗೆ ಫೋಸ್ ನೀಡಿದ ಅಜರುದ್ದೀನ್, ರಾಯಚೂರಿನ ಜನರಿಂದ ಉತ್ತಮ ಸ್ವಾಗತ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಯಚೂರಿಗೆ ಎರಡನೇ ಬಾರಿಗೆ ಬಂದಿದ್ದೇನೆ:

ರಾಯಚೂರಿಗೆ ಎರಡನೇ ಬಾರಿಗೆ ಬಂದಿರುವುದು ತುಂಬಾ ಖುಷಿ ತಂದಿದೆ. ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಇಲ್ಲಿಗೆ ಬಂದಿದ್ದೇನೆ. ನನಗೆ ಆಡಲು ಅವಕಾಶ ಸಿಗದಿದ್ದರೂ, ಪ್ರಶಸ್ತಿ ವಿತರಣೆಯ ಗೌರವ ದೊರೆತಿದೆ. ಈ ಅವಕಾಶಕ್ಕಾಗಿ ಸಚಿವ ಬೋಸರಾಜು ಅವರಿಗೆ ಧನ್ಯವಾದ ಹೇಳುತ್ತೇನೆ. ಹಾಗೆಯೇ ರಾಯಚೂರಿನ ಜನರ ಸ್ವಾಗತಕ್ಕೆ ಧನ್ಯವಾದ ಹೇಳಿದರು.

ರನ್ನರ್ಸ್‌ ಮುಂದಿನ ಬಾರಿ ವಿನ್ನರ್ಸ್ ಆಗಲಿ:

ರಾಯಚೂರಿನಲ್ಲಿ ಯೂತ್ ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿ, ಪಕ್ಷವನ್ನು ಗೆಲ್ಲಿಸಲಿ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕರ ಹೆಸರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಖರ್ಗೆಯವರು ಈ ವಯಸ್ಸಿನಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಖರ್ಗೆ ಮತ್ತು ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳ್ತೇನೆ. ಈ ಬಾರಿಯ ರನ್ನರ್ಸ್ ಮುಂದಿನ ಬಾರಿ ವಿನ್ನರ್ ಆಗಲಿ, ವಿನ್ನರ್ ಮುಂದಿನ ಬಾರಿ ರನ್ನರ್ಸ್ ಆಗಲಿ ಎಂದರು.

ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ವಿಷಾದ:

ಬೆಂಗಳೂರಿನಲ್ಲಿ ಐಪಿಎಲ್ ಕಾರ್ಯಕ್ರಮದ ವೇಳೆ ಕಾಲ್ತುಳಿತಕ್ಕೆ ಆರ್‌ಸಿಬಿ ಅಭಿಮಾನಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಅಜರುದ್ದೀನ್ ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನ ಘಟನೆ ತಪ್ಪಾಗಿತ್ತು, ಆ ರೀತಿಯಾಗಬಾರದಿತ್ತು. ಸಂತ್ರಸ್ತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಇಂಥ ಘಟನೆಗಳು ಮತ್ತೆ ಮರುಕಳಿಸಬಾರದು. ನಾನು ಆ ಬಗ್ಗೆ ಏನೂ ಹೇಳಲಿ? ಬ್ಯಾನ್ ಮಾಡಬೇಕಾ, ಬೇಡ್ವಾ ಅನ್ನೋದು ತನಿಖೆ ಬಳಿಕ ಗೊತ್ತಾಗುತ್ತೆ. ಅದು ನನ್ನ ಕೈಯಲ್ಲಿಲ್ಲ. ಅದು ಬೋರ್ಡ್​ ಕೈಯಲ್ಲಿದೆ. ಐಪಿಎಲ್‌ನ ಆಡಳಿತ ವಿಭಾಗ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೆ. ಇಷ್ಟು ಬೇಗ ಈ ಬಗ್ಗೆ ಉತ್ತರ ಕೊಡಲು ಕಠಿಣವಾಗತ್ತೆ ಈ ವಿಚಾರ ಐಪಿಎಲ್ ಆಡಳಿತ ವಿಭಾಗದ ನಿರ್ಣಯಕ್ಕೆ ಬಿಡುತ್ತೇನೆ ಎಂದರು.

ಏರ್‌ ಇಂಡಿಯಾ ದುರಂತ; ಡೇವಿಡ್ ವಾರ್ನರ್ ಹೇಳಿಕೆ ಪ್ರಸ್ತಾಪ:

ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಕ್ರಿಕೆಟಿಗ ಡೇವಿಡ್ ವಾರ್ನರ್‌ 'ಮತ್ತೆಂದೂ ಏರ್‌ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಜರುದ್ದೀನ್, ಡೇವಿಡ್ ವಾರ್ನರ್ ಏರ್ ಇಂಡಿಯಾ ವಿಮಾನ ಹತ್ತದಿದ್ದರೆ ಅದು ಅವರ ಇಷ್ಟ. ಆದರೆ ಈ ದುರಂತ ಆಗಬಾರದಿತ್ತು. ಹಣೆಬರಹವನ್ನು ಯಾರೂ ತಪ್ಪಿಸಲಾಗದು. ಮೃತರ ಕುಟುಂಬಗಳಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇಂಥ ಘಟನೆ ದೇಶದಲ್ಲಿ ಮತ್ತೆಂದೂ ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಕಾಂಗ್ರೆಸ್ ಗ್ಯಾರೆಂಟಿ ಹೊಗಳಿದ ಅಜರುದ್ದೀನ್:

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಅಜರುದ್ದೀನ್, ಗ್ಯಾರಂಟಿಗಳು ಜನರಿಗೆ ಮುಖ್ಯವಾಗಿ ಬೇಕಾಗಿವೆ.. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು 100% ಯಶಸ್ವಿಯಾಗಿವೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಕೆಲವು ಸಮಸ್ಯೆಗಳು ಬರಬಹುದು, ಆದರೆ ಸರ್ಕಾರ ಜನರ ಪರವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮವು ರಾಯಚೂರಿನ ಯುವಕರಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸಿದ್ದು, ಅಜರುದ್ದೀನ್‌ರ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ