
ವಿಧಾನ ಪರಿಷತ್(ಜು.20): ಕಲಾಪ ನಡೆಯುವ ವೇಳೆ ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಮೊಬೈಲ್ ಫೋನ್‌ಗಳನ್ನು ಸದನದೊಳಕ್ಕೆ ಕಡ್ಡಾಯವಾಗಿ ತರಬಾರದು. ಹಾಜರಾಗುವಾಗ ತಮ್ಮ ಮೊಬೈಲ್ ಫೋನ್‌ಗಳನ್ನು ನಿಗದಿತ ಕಪಾಟಿನಲ್ಲಿ ಇರಿಸಿ ಬಳಿಕ ಸದನಕ್ಕೆ ಬರಬೇಕು. ಕಲಾಪ ನಡೆಯುವಾಗ ಮೊಬೈಲ್ ನೋಡುತ್ತಾ ಕೂರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.
ಬುಧವಾರ ಭೋಜನ ವಿರಾಮದ ಬಳಿಕ ಕಲಾಪ ಆರಂಭದಲ್ಲಿ ಮಾತನಾಡಿದ ಅವರು, ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಕಲಾಪಕ್ಕೆ ಹಾಜರಾಗುವಾಗ ತಮ್ಮ ಮೊಬೈಲ್ ಫೋನ್‌ಗಳನ್ನು ನಿಗದಿತ ಕಪಾಟಿನಲ್ಲಿ ಇರಿಸಿ ಬಳಿಕ ಸದನಕ್ಕೆ ಬರಬೇಕು. ಕಲಾಪ ನಡೆಯುವಾಗ ಮೊಬೈಲ್ ನೋಡುತ್ತಾ ಕೂರುವುದು ಸರಿಯಲ್ಲ. ಹೀಗಾಗಿ ಕಲಾಪ ನಡೆಯುವಾಗ ಮೊಬೈಲ್ ಸದನದೊಳಕ್ಕೆ ಕಡ್ಡಾಯವಾಗಿ ತರಬಾರದು ಎಂದರು.
Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು
ಕಲಾಪ ನಡೆಯುವಾಗ ಶಾಸಕರು ಹಾಗೂ ಮಂತ್ರಿಗಳು ಸದನದೊಳಗೆ ಕೂರಬೇಕು. ತಮ್ಮ ಭಾಷಣ ಮುಗಿಸಿ ಅಥವಾ ಪ್ರಶ್ನೆ ಕೇಳಿ ಹೊರಗೆ ಹೋದರೆ ಕಲಾಪ ನಡೆಸುವುದು ಹೇಗೆ? ನಿಮ್ಮ ಭಾಷಣದ ಸರದಿ ಮುಗಿದರೂ ಬೇರೆಯವರು ಮಾತನಾಡುವಾಗ ಕುಳಿತು ಆಲಿಸಬೇಕು. ಸದನಲ್ಲಿ ಕಲಿಯುವ ವಿಚಾರಗಳು ತುಂಬಾ ಇರುತ್ತವೆ. ಇದು ಮೇಲ್ಮನೆ. ಇದು ಮಾದರಿ ಸದನ ಎಂದು ಶಾಸಕರು ಹಾಗೂ ಮಂತ್ರಿಗಳಿಗೆ ಕಿವಿಮಾತು ಹೇಳಿದರು.
ಸಚಿವರು ಇಲ್ಲದೆ 5 ನಿಮಿಷ ಕಲಾಪ ಮುಂದೂಡಿಕೆ:
ಭೋಜನ ವಿರಾಮದ ಬಳಿಕ ಕಲಾಪ ಆರಂಭದಲ್ಲಿ ಆಡಳಿತ ಪಕ್ಷದ ಸಭಾ ನಾಯಕ ಸೇರಿ ಕೇವಲ ನಾಲ್ವರು ಸದಸ್ಯರು ಹಾಜರಿದ್ದರು. ಈ ವೇಳೆ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಚರ್ಚೆ ಆರಂಭಿಸಲು ಆಡಳಿತ ಪಕ್ಷದ ಕನಿಷ್ಠ ಮೂವರು ಸಚಿವರು ಇರಬೇಕು. ಒಬ್ಬರೂ ಇಲ್ಲದೆ ಹೇಗೆ ಚರ್ಚೆ ಮಾಡುವುದು ಎಂದು ಪ್ರಶ್ನಿಸಿದರು. ಈ ವೇಳೆ ಸಭಾಪತಿ ಹೊರಟ್ಟಿ ಅವರು ಸಚಿವರನ್ನು ಕರೆಸುವಂತೆ ಸಭಾನಾಯಕ ಬೋಸರಾಜುಗೆ ಸೂಚಿಸಿ, ಕಲಾಪವನ್ನು ಐದು ನಿಮಿಷ ಮುಂದೂಡಿದ ಪ್ರಸಂಗವೂ ಜರುಗಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ