ರೈತರಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ

By Sathish Kumar KH  |  First Published Jul 19, 2023, 10:38 PM IST

ರೈತರು ದೇಶದ ಬೆನ್ನಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ಬೇಡ. ಕನ್ಯಾಭಾಗ್ಯ ಯೋಜನೆ ಜಾರಿಗೊಳಿಸಿ ನಮಗೆ ಮದುವೆ ಮಾಡಿಸಿ ಎಂದು ಯುವ ರೈತರು ಸಿಎಂಗೆ ಮನವಿ ಮಾಡಿದ್ದಾರೆ. 


ಹಾವೇರಿ (ಜು.19): ರೈತರು ದೇಶದ ಬೆನ್ನಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ಬೇಡ. ಕೃಷಿ ಕೆಲಸ ಮಾಡುವ ಯುವ ರೈತರಿಗೆ ಜನರು ಹೆಣ್ಣು ಕೊಡ್ತಿಲ್ಲ. ಕೂಡಲೇ ಸರ್ಕಾರದಿಂದ ರೈತರಿಗೆ ಈಗಿರುವ ಕೃಷಿಭಾಗ್ಯ ಯೋಜನೆ ಜೊತೆಗೆ "ಕನ್ಯಭಾಗ್ಯ" ಯೋಜನೆ ಜಾರಿಗೊಳಿಸಿ ನಮಗೆ ಮದುವೆ ಮಾಡಿಸಿ ಎಂದು ಯುವ ರೈತರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. 

ರೈತ ದೇಶದ ಬೆನ್ನೆಲುಬು ಅಂತೆಲ್ಲಾ ಕರೆಯುತ್ತಾರೆ. ಜೊತೆಗೆ ಎಲ್ಲಿಯೇ ಹೋದರೂ ರೈತರನ್ನು ಪೂಜ್ಯ ಭಾವನೆಯಲ್ಲಿ ನೋಡ್ತಾರೆ. ಆದರೆ ನಮಗೆ, ಹೊಗಳಿಕೆ ಮಾತುಗಳು ಬೇಡ. ಸಾಲ, ಸೋಲ ಮಾಡಿ ಕೃಷಿ ಕೆಲಸ ಮಾಡುತ್ತಿದ್ದು, ಮಳೆ-ಬೆಳೆ ಕೈಕೊಟ್ಟು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ, ಈಗ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಾದ ನೀವು ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಕನ್ಯಾಭಾಗ್ಯ ಯೋಜನೆ ಜಾರಿಗೆ ತರಬೇಕು ಎಂದು ಹಾವೇರಿ ಜಿಲ್ಲೆಯ ಯುವ ರೈತರು ಪತ್ರ ಬರೆದಿದ್ದಾರೆ.

Tap to resize

Latest Videos

undefined

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

ರಾಜ್ಯದಲ್ಲಿ ಒಂದು‌ ಕಡೆ ಮಳೆರಾಯನ ಕಣ್ಣಾಮುಚ್ಚಾಲೆ ಆಟ. ಇನ್ನೊಂದು ಕಡೆ ಸಾಲದ ಹೊರೆ ಹೊತ್ತುಕೊಂಡೇ ರೈತರು ಜೀವನ ನಡೆಸ್ತಿರೋದು ಹೊಸ ಸಂಗತಿ ಏನಲ್ಲ.  ಮುಂಗಾರು ಕೈ ಕೊಟ್ಟು ರೈತರು ಆತ್ಮಹತ್ಯೆ ಹತ್ಯೆ ಹಾದಿ ಹಿಡಿದಿರುವಾಗಲೇ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ರೈತರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ! ಎಸ್. ಎಂಥ ಶೋಚನೀಯ ಅಲ್ಲವಾ? ಹೊಲದಲ್ಲಿ ಬೆವರು ಸುರಿಸಿ ದುಡಿಯೋ ಯುವ ರೈತರಿಗೆ ಹೆಣ್ಣೇ ಕೊಡುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ರೈತ ಯವಕರಿಗಾಗಿ ಕನ್ಯಾಭಾಗ್ಯ ಯೋಜನೆ ಜಾರಿ ಮಾಡಿ. ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ಸಹಾಯಧನ ಕೊಡಿ ಎಂದು ನೊಂದ ಯುವ ರೈತರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ. 

ಜಮೀನು‌ ಇರಬೇಕು.ಆದರೆ ಹುಡುಗ ರೈತನಾಗಿರಬಾರದಂತೆ!
ಆಸ್ತಿ ಪಾಸ್ತಿ, ಕಾರು , ಜಮೀನು , ಸರ್ಕಾರಿ‌ ನೌಕರಿನೇ ಬೇಕಂತೆ! 

ಏನು‌ ಕಾಲ ಬಂತು ನೋಡಿ, ಮೊದಲು ಹಿರಿಯರೆಲ್ಲಾ ಹುಡುಗ ಕಟ್ಟು ಮಸ್ತಾಗಿದ್ದಾನೆ. ಲಕ್ಷಣವಾಗಿದ್ದಾನೆ. ಕಷ್ಟ ಪಟ್ಟು ದುಡಿತಾನೆ. ಯಾವುದೇ ದುರಾಭ್ಯಾಸ ಇಲ್ಲ ಅಂದರೆ ಹೆಣ್ಣು ಕೊಟ್ಟು ಬಿಡ್ತಿದ್ರು. ಆದ್ರೀಗ ದುಡ್ಡಿದ್ರೆ ದುನಿಯಾ. ಫ್ಯಾಷನ್ ದುನಿಯಾ.ನಮ್ ಮಗಳು ಕಾರಲ್ಲೇ ಓಡಾಡಬೇಕು. ಹುಡುಗನಿಗೆ ಜಮೀನು ಇದ್ದರೂ ಅವನು ಕೃಷಿ ಮಾಡಬಾರದು. ಯಾವುದಾದರೂ ಸಣ್ಣ ಪುಟ್ಟ ಬ್ಯುಸಿನೆಸ್ ಇರಬೇಕು ಎಂದು ಆಸೆ ಪಟ್ಟು ಹೆಣ್ಣು ಕೊಡೋ ಜನಕ್ಕೇನು ಕಡಿಮೆ ಇಲ್ಲ. ಹೀಗಾಗಿಯೇ ನೊಂದ ಯುವ ರೈತರು ಸಿಎಂ ಗೆ ಪತ್ರ ಬರೆದಿದ್ದಾರೆ. 

ಈ ಬಾರಿ ಮುಂಗಾರು ಕೈ ಕೊಟ್ಟ ಹಿನ್ನಲೆ ಸಂಕಷ್ಟದಲ್ಲಿರೋ ರೈತರ ಮನೆಗೆ ಹೆಣ್ಣು ಕೊಡಲು  ಜನ ಮುಂದೆ ಬರ್ತಿಲ್ಲ.ರೈತರು ಸಾಲ ಮಾಡಿಕೊಂಡು ಕೃಷಿ ಮಾಡ್ತಿರ್ತಾರೆ.ನಾಳೆ ಹೇಗೋ ಏನು ಎಂದು ಹೆಣ್ಣು ಕೊಡಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಕನ್ಯಾಭಾಗ್ಯ ಯೋಜನೆ ಜಾರಿ ಮಾಡಲು ಯುವ ರೈತರ ಆಗ್ರಹಿಸಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.ರೈತರಿಗೆ ಹೆಣ್ಣು ಕೊಡುವುದನ್ನು ಪ್ರೋತ್ಸಾಹಿಸುವಂತ ಯೋಜನೆಗಳನ್ನು ಜಾರಿ ಮಾಡಬೇಕು.ರೈತರನ್ನು ಮದುವೆಯಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಬೇಕು. ಅಥವಾ ರೈತರನ್ನು ಮದುವೆಯಾಗುವ ಯುವತಿಗೆ ಉದ್ಯೋಗಾವಕಾಶಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವ ಯೋಜನೆ ರೂಪಿಸಬೇಕು. ರೈತರನ್ನು ಮದುವೆ ಆದ ಹೆಣ್ಣುಮಕ್ಕಳಿಗೆ ಮಾಸಿಕ ಸಹಾಯಧನ ಕೊಡುವುದು ಸೇರಿದಂತೆ ಹಲವು ಯೋಜನೆ ಜಾರಿಗೆ ರೈತರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಗೃಹಜ್ಯೋತಿ ಯೋಜನೆ: ಒಂದು ಬಲ್ಬ್ ಇರುವ ಮನೆಗಳಿಗೆ 23 ಸಾವಿರ ರೂ. ವಿದ್ಯುತ್ ಬಿಲ್‌

ಮಾಜಿ ಸಿಎಂ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು:  ಹಿಂದೆ ಚುನಾವಣೆಗೂ ಮುನ್ನ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ರು. ಅಲ್ಲದೇ ಅಧಿಕಾರಕ್ಕೆ ಬಂದರೆ ರೈತರಿಗೆ ಹೆಣ್ಣು ಕೊಡಲು ಜನ ಮುಂದೆಬರುವಂತ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು  ಜಾರಿ ಮಾಡೋದಾಗಿ ಘೋಷಣೆ ಮಾಡಿದ್ರು. ಸದ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿರೋ ರೈತರಿಗೆ ಈಗ ಹೆಣ್ಣು ಕೊಡೋದಕ್ಕೆ ಜನ ಹಿಂದೇಟು ಹಾಕ್ತಿರೋದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೋ ಜನ ರೈತರು ಮದುವೆನೇ ಆಗಲ್ಲ. ನನಗೆ ಮದುವೆನೇ ಬೇಡ ಅನ್ನೋ ಮಟ್ಟಿಗೆ ಜಿಗೊಪ್ಸೆಗೊಂಡಿದ್ದಾರೆ. ಸದ್ಯ ಸರ್ಕಾರ ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದರೆ ರೈತರ ಬದುಕು ಮತ್ತಷ್ಟು ಕಷ್ಟವಾಗಲಿದೆ.

click me!