ವಿಧಾನಸೌಧಕ್ಜೆ ಬಂದರೂ ಪಕ್ಷದ ಕಚೇರಿಗೆ ಬರದ ಶಾಸಕರು, ಬಿಕೋ ಎನ್ನುತ್ತಿದೆ ಜೆಡಿಎಸ್ ಕಚೇರಿ

By Kannadaprabha NewsFirst Published May 23, 2023, 5:39 AM IST
Highlights

ವಿಧಾನಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿಧಾನಸೌಧದ ಜೆಡಿಎಸ್‌ ಕಚೇರಿ ಸಹ ಬಿಕೋ ಎನ್ನುವಂತಿತ್ತು. ಯಾವುದೇ ನಾಯಕರು ಅತ್ತ ಸುಳಿಯದಿರುವುದು ಕಂಡು ಬಂತು.

ಬೆಂಗಳೂರು (ಮೇ.23) : ವಿಧಾನಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿಧಾನಸೌಧದ ಜೆಡಿಎಸ್‌ ಕಚೇರಿ ಸಹ ಬಿಕೋ ಎನ್ನುವಂತಿತ್ತು. ಯಾವುದೇ ನಾಯಕರು ಅತ್ತ ಸುಳಿಯದಿರುವುದು ಕಂಡು ಬಂತು.

ನೂತನ ಶಾಸಕರ ಪ್ರಮಾಣ ವಚನ ಸಂಬಂಧ ಅಧಿವೇಶನ ಕರೆದಿದ್ದರೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಗೈರಾಗಿದ್ದರು. ಪ್ರಮುಖ ಮುಖಂಡರು ಹಾಜರಾಗದಿರುವ ಕಾರಣ ಇತರೆ ನಾಯಕರು ಸಹ ಪಕ್ಷದ ಕಚೇರಿಯತ್ತ ತೆರಳಲಿಲ್ಲ. ಜೆಡಿಎಸ್‌ ಕಚೇರಿ ಖಾಲಿ ಖಾಲಿಯಾಗಿತ್ತು.

Latest Videos

Bengaluru rains: ಗಾಳಿಗೆ ಕಬ್ಬನ್‌ ಪಾರ್ಕಲ್ಲಿ 25ಕ್ಕೂ ಹೆಚ್ಚು ಮರ ಧರೆಗೆ!...

ಪಕ್ಷದಲ್ಲಿ ಹಲವರು ಹೊಸದಾಗಿ ಆಯ್ಕೆಯಾಗಿ ವಿಧಾನಸೌಧಕ್ಕೆ ಆಗಮಿಸಿದ್ದರೂ ಪಕ್ಷದ ಕಚೇರಿಯತ್ತ ಮುಖ ಮಾಡಲಿಲ್ಲ. ನೇರವಾಗಿ ಸದನಕ್ಕೆ ಆಗಮಿಸಿದರು. ವಿಧಾನಸೌಧದಲ್ಲಿ ಪಕ್ಷದ ಕಚೇರಿ ಯಾವ ಭಾಗದಲ್ಲಿ ಬರುತ್ತದೆ ಎಂಬ ಮಾಹಿತಿಯೂ ಹಲವರಿಗೆ ಇಲ್ಲ. ಹೀಗಾಗಿ ಅವರು ಕಚೇರಿಯತ್ತ ತೆರಳುವ ಪ್ರಯತ್ನವೂ ಮಾಡಲಿಲ್ಲ. ಹಿರಿಯ ನಾಯಕರು ಇಲ್ಲದ ಕಾರಣ ಕಿರಿಯರು ಸಹ ಕಚೇರಿ ಕಡೆಗೆ ಹೋಗಲಿಲ್ಲ ಎಂದು ಹೇಳಲಾಗಿದೆ.

 

ಶೇ.10ಕ್ಕಿಂತ ಕಮ್ಮಿ ಸ್ಥಾನ

ವಿಧಾನಸಭೆ ಚುನಾವಣೆ(Karnataka assembly election)ಯಲ್ಲಿ ಶೇ.10ಕ್ಕಿಂತ ಕಡಮೆ ಸ್ಥಾನಗಳನ್ನು ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ ಜೆಡಿಎಸ್‌ಗೆ ವಿಧಾನಸೌಧ(Vidhanasoudha)ದಲ್ಲಿ ಕಚೇರಿ ಲಭ್ಯವಾಗುವುದು ಕಷ್ಟಕರ ಎನ್ನಲಾಗಿತ್ತು., ಅದೇ ಕಾರಣಕ್ಕೆ ಜೆಡಿಎಸ್ ಶಾಸಕರು ಕಚೇರಿ ಕಡೆ ಹೋಗದಿರಬಹುದು.

ನಾನೇ ಪಕ್ಷ ಸಂಘಟಿಸುವುದಾಗಿ ಪಂಚೆಕಟ್ಟಿನಿಂತ ದೇವೇಗೌಡ! ಸಮಾಧಾನ ಮಾಡಿದ ಕುಮಾರಸ್ವಾಮಿ

ಶೇ.10ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಪಕ್ಷಕ್ಕೆ ವಿಧಾನಸೌಧದಲ್ಲಿ ಕಚೇರಿ ನೀಡುವುದಿಲ್ಲ ಎಂಬ ನಿಯಮ ಇತ್ತು. ಈ ನಿಯಮಕ್ಕೆ ತಿದ್ದುಪಡಿ ಮಾಡಿ ಸಭಾಧ್ಯಕ್ಷರ ವಿವೇಚನಕ್ಕೆ ಬಿಡಲಾಗಿದೆ ಎಂದು ಹೇಳಲಾಗಿದೆ. ಜೆಡಿಎಸ್‌ ರಾಜ್ಯದ ಪ್ರಾದೇಶಿಕ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ವಿಧಾನಸೌಧದಲ್ಲಿ ಕಚೇರಿ ನೀಡಲಾಗುತ್ತದೆ. ಈ ಹಿಂದೆ ಜೆಡಿಎಸ್‌ ಇಷ್ಟೊಂದು ಕಡಿಮೆ ಸ್ಥಾನ ಪಡೆದುಕೊಂಡಿರಲಿಲ್ಲ. ಹೀಗಾಗಿ ಇಂತಹ ಹಿಂದೆ ಘಟನೆಗಳು ನಡೆದಿರಲಿಲ್ಲ..

click me!