ಸನಾತನ ಧರ್ಮವನ್ನು ಕಾಗೆಗೆ ಹೋಲಿಸಿದ ನಟ ಪ್ರಕಾಶ್‌ ರೈ ಹಂದಿ: ಶಾಸಕ ಯತ್ನಾಳ್‌ ಕಿಡಿ

By Sathish Kumar KH  |  First Published Sep 12, 2023, 3:48 PM IST

ಸನಾತನ ಧರ್ಮವನ್ನು ಕಾಗೆಗೆ ಹೋಲಿಕೆ ಮಾಡಿದ ನಟ ಪ್ರಕಾಶ್‌ ರೈ ಹಂದಿ ಇದ್ದಂತೆ. ಪ್ರಕಾಶ್‌ ರಾಜ್‌ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್‌ ವಾಗ್ದಾಳಿ ಮಾಡಿದ್ದಾರೆ.


ವಿಜಯಪುರ (ಸೆ.12): ಕಳೆದ ಹಲವು ದಿನಗಳಿಂದ ತಮಿಳುನಾಡು ಮುಖ್ಯಮಮಂತ್ರಿ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್‌, ಸನಾತನ ಧರ್ಮದ ಕುರಿತ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಸಮರ್ಥಿಸಿಕೊಳ್ಳಲು ಮುಂದಾದ ಪ್ರಕಾಶ್‌ ರಾಜ್‌ ಸನಾತನ ಧರ್ಮ ಕಾಗೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಜಯಪುರದಲ್ಲಿ ಕಿಡಿಕಾರಿದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಪ್ರಕಾಶ್‌ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ಹೇಳುವ ಮೂಲಕ ಪ್ರಕಾಶ್‌ ರೈ ಅವರನ್ನು ಹಂದಿಗೆ ಹೋಲಿಕೆ ಮಾಡಿದ್ದಾರೆ.

ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿಷದ ಹಾವು ಎಂದ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆ ನಿಷ್ಠೆ ಇಲ್ಲ. ಒಂದು ಕಾಲದಲ್ಲಿ ಎಲ್‌ಟಿಟಿಇ ದೇಶ ವಿರೋಧಿ ಸಂಘಟನೆಗೆ ಸಪೋರ್ಟ್ ಮಾಡಿದವರು ಅವರು. ದೇಶವಿರೋಧಿ ಚಟುವಟಿಕೆಗೆ ಸಪೋರ್ಟ್ ಮಾಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Latest Videos

undefined

Bengaluru ಖಾಸಗಿ ವಾಹನಗಳ ಸಂಚಾರ ಬಂದ್‌ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ ಬಂತು!

ಜೊತೆಗೆ, ಪ್ರಕಾಶ್ ರೈ ವಿರುದ್ಧವೂ ಯತ್ನಾಳ್ ವಾಗ್ದಾಳಿ ಮಾಡಿದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಸನಾತನ ಧರ್ಮ ಕಾಗೆ ಎಂದ ಪ್ರಕಾಶ್ ರಾಜ್, ಹಂದಿ ಇದ್ದ ಹಾಗೆ. ಪ್ರಕಾಶ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಊರು ಸ್ವಚ್ಛ ಮಾಡಲು ಹಂದಿ ಇರುತ್ತದೆ. ಹಾಗೆ ನಮ್ಮಲ್ಲೂ ಪ್ರಕಾಶ ರೈ ಎನ್ನುವ ಹಂದಿ ಇದೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ ಎಂದು ಯತ್ನಾಳ್ ಹೇಳಿದರು.

ಸನತಾನ ಧರ್ಮ ನಾಶ ಮಾಡಬೇಕು, ಸನಾತನ ಧರ್ಮ ಕ್ಯಾನ್ಸರ್, ಏಡ್ಸ್ ಇದ್ದ ಹಾಗೆ ಎನ್ನುವವರ ವಿರುದ್ಧ ಸ್ವಾಮೀಜಿಗಳು ಮಾತನಾಡಬೇಕು. ಆದರೆ, ಸನತಾನ ಧರ್ಮದ ಪರವಾಗಿ ಆದಿಚುಂಚನಗಿರಿ ಸ್ವಾಮಿಜಿ, ಮೂರು ಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಉಳಿದವರು ಮಾತನಾಡಿಲ್ಲ, ಧ್ವನಿ ಎತ್ತಬೇಕು. ಕಾವಿ ಬಟ್ಟೆ ಹಾಕಿದವರು ಅನೇಕರು ಖಂಡನೆ ಮಾಡಿಲ್ಲ. ಇಂತಹ ಸ್ವಾಮಿಜಗಳು ನಮಗೇಕೆ ಬೇಕು. ಸ್ವಾಮಿಜಿಗಳಲ್ಲು ಕೆಲವರು ಕಪಟರು ಇದ್ದಾರೆ. ಹಿಂಧು ಧರ್ಮದ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.

ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್‌ ವೋಚರ್‌ಗೆ ಕನ್ನ ಹಾಕುವುದೇ ಕಾಯಕ

ಸಿಎಂ ವಿರುದ್ಧ ಮಾತನಾಡಿದ ಹರಿಪ್ರಸಾದ್‌ ಮೇಲೆ ಕ್ರಮಕೈಗೊಳ್ಳುವಂತೆ ಸವಾಲು:  ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನ ಧಮ್ ಇದ್ರೆ, ತಾಕತ್ ಇದ್ರೆ, ಗಂಡಸತನ ಇದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಉಚ್ಚಾಟನೆ ಮಾಡಲಿ. ಡಿಕೆಶಿಗೆ ಬಸನಗೌಡ ಯತ್ನಾಳ್ ಸವಾಲು ಹಾಕಿದರು. ನಾನು ಬಿಜೆಪಿ ಬಗ್ಗೆ ಮಾತನಾಡಿದ್ದಕ್ಕೆ ಕ್ರಮ ಕೈಗೊಳ್ಳಲಿ ಎಂದು ಮಾತನಾಡಿದ್ದ ಡಿಕೆಶಿ, ಹರಿಪ್ರಸಾದ್‌ ಮೇಲೆ ಕ್ರಮಕೈಗೊಳ್ಳಲಿ ನೋಡೋಣ ಎಂದು ಸವಾಲು ಹಾಕಿದರು. 

click me!