ವೈದ್ಯ ದಂಪತಿ ವಿರುದ್ಧ ಮಾಜಿ ಶಾಸಕರ ಪತ್ನಿ ದೂರು..!

By Kannadaprabha News  |  First Published Nov 2, 2019, 10:45 AM IST

ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ವೈದ್ಯ ದಂಪತಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಕಲಾಸಿಪಾಳ್ಯ ಠಾಣೆಯಲ್ಲಿ ನೀಡಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ಬೆಂಗಳೂರು(ನ.02): ವೈಯಕ್ತಿಕ ಸಮಸ್ಯೆ ನೆಪದಲ್ಲಿ ವೈದ್ಯ ದಂಪತಿ 80 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಸವನಗುಡಿಯ ದಂತ ವೈದ್ಯೆ ಡಾ. ಶ್ರೀದೇವಿ ದಂಪತಿ ವಿರುದ್ಧ ಆರೋಪ ಕೇಳಿ ಬಂದಿದೆ. ದೂರಿನನ್ವಯ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Tap to resize

Latest Videos

ಮಿಂಟೋ ವೈದ್ಯರ ಮೇಲೆ ಕರವೇ ಕಾರ್ಯಕರ್ತೆ ಹಲ್ಲೆ..?.

ಹಲವು ವರ್ಷಗಳಿಂದ ಮಮತಾ ಮತ್ತು ವೈದ್ಯೆ ಡಾ.ಶ್ರೀದೇವಿ ಪರಿಚಯಸ್ಥರು. ಈ ಸ್ನೇಹದ ಹಿನ್ನೆಲೆಯಲ್ಲಿ ಶ್ರೀದೇವಿ ಅವರು, ತಮ್ಮ ಮಗಳ ಮದುವೆ ಸೇರಿದಂತೆ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಮಮತಾ ಅವರಿಂದ ಆರ್ಥಿಕ ನೆರವು ಕೋರಿದ್ದರು. ಈ ಮನವಿಗೆ ಸ್ಪಂದಿಸಿದ ಅವರು, ವೈದ್ಯೆಗೆ ₹80 ಲಕ್ಷ ಹಣವನ್ನು ಕಂತು ರೂಪದಲ್ಲಿ ಕೊಟ್ಟಿದ್ದರು.

ನನ್ನನ್ನೇ ಮುಖ್ಯಮಂತ್ರಿ ಮಾಡಿ : ರಾಜ್ಯಪಾಲರಿಗೆ ರೈತನ ಪತ್ರ.

ಆದರೆ, ಹಣ ಪಡೆದ ಬಳಿಕ ವೈದ್ಯೆ, ನಿಗದಿತ ಸಮಯಕ್ಕೆ ಮರು ಪಾವತಿಸಿಲ್ಲ. ಇದರಿಂದ ಇಬ್ಬರ ಮಧ್ಯೆ ಮನಸ್ತಾಪವಾಯಿತು. ಹಣ ಕೇಳಿದರೆ ಏನಾದರೂ ಸಬೂಬು ಹೇಳಿ ವೈದ್ಯೆ ತಪ್ಪಿಸಿಕೊಳ್ಳುತ್ತಿದ್ದರು. ಅಲ್ಲದೆ, ಮುಂಗಡವಾಗಿ ಆಕೆ ನೀಡಿದ್ದ ಚೆಕ್‌ಗಳು ಸಹ ಬೌನ್ಸ್ ಆಗಿದ್ದವು. ಕೊನೆಗೆ ಬೇಸತ್ತ ಮಮತಾ ಅವರು, ವೈದ್ಯೆ ವಿರುದ್ಧ ದೂರು ನೀಡಿದ್ದಾರೆ. ಇನ್ನು ಹಲವರಿಗೂ ವಂಚನೆ ಮಾಡಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!