'ಕಾಂಗ್ರೆಸ್‌ಗೆ ಮಾನ ಮಾರ್ಯಾದೆ ಇದ್ಯಾ?' ಜನಾಂದೋಲ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಎಡವಟ್ಟು!

By Ravi Janekal  |  First Published Aug 4, 2024, 2:53 PM IST

ಬಿಜೆಪಿ-ಜೆಡಿಎಸ್ ಟೀಕಿಸುವ ಭರದಲ್ಲಿ 'ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಇದ್ರೆ, ತಾಕತ್ತು ಇದ್ರೆ ನಾವು ಕೇಳುವ ಪ್ರಶ್ನೆಗೆ ಉತ್ತರ ಕೊಡಿ' ಎಂದ ಶಾಸಕ ಶಿವಲಿಂಗೇಗೌಡ. ನಂತರ ತಪ್ಪಿನ ಅರಿವಾಗಿ 'ಕ್ಷಮಿಸಿ ಜೆಡಿಎಸ್ - ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಅಂತಾ ಕೇಳಿದ ಶಾಸಕ ಶಿವಲಿಂಗೇಗೌಡ.


ಚನ್ನಪಟ್ಟಣ (ಆ.4): ಜೆಡಿಎಸ್-ಬಿಜೆಪಿ ಪಕ್ಷದವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ಜನಾಂದೋಲನ ಸಮಾವೇಶ ಮಾಡ್ತಿದೆ. ಪಾದಯಾತ್ರೆ ಮೂಲಕ ಜನರಿಗೆ ಸುಳ್ಳು ಹೇಳೋಕೆ ಹೊರಟಿದ್ದಾರೆ. ಜೆಡಿಎಸ್- ಬಿಜೆಪಿ ಅವರರು ಅಪವಿತ್ರ ಮೈತ್ರಿ ಮಾಡಿಕೊಂಡು ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ಜೆಡಿಎಸ್ ಪಕ್ಷದ ಸಿದ್ದಾಂತಗಳನ್ನು ಮರೆತು  ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಪಾದದಡಿಯಲ್ಲಿ ಜೆಡಿಎಸ್ ನವರು ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಕಳಂಕ ತರಬೇಕು ಅಂತಾ ಪಾದಯಾತ್ರೆ ಮಾಡ್ತಿದ್ದಾರೆ. ರಾಜಕೀಯದಲ್ಲಿ ಸ್ವಚ್ಚತೆ, ಪ್ರಾಮಾಣಿಕತೆ ಇಟ್ಟುಕೊಂಡು ಇಷ್ಟು ವರ್ಷ ಸಿದ್ದರಾಮಯ್ಯ(Siddaramaiah) ರಾಜಕೀಯ ಮಾಡಿದ್ದಾರೆ. ಮೈಸೂರಿಗೆ ಹೋಗುವವರೆಗೂ ಇದೇ ರೀತಿ ಸಮಾವೇಶ ಮಾಡ್ತೇವೆ ಎಂದರು.

Tap to resize

Latest Videos

ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ

ಬಾಯ್ತಪ್ಪಿ ಶಿವಲಿಂಗೇಗೌಡ ಎಡವಟ್ಟು:

ಬಿಜೆಪಿ-ಜೆಡಿಎಸ್ ಟೀಕಿಸುವ ಭರದಲ್ಲಿ 'ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಇದ್ರೆ, ತಾಕತ್ತು ಇದ್ರೆ ನಾವು ಕೇಳುವ ಪ್ರಶ್ನೆಗೆ ಉತ್ತರ ಕೊಡಿ' ಎಂದ ಶಾಸಕ ಶಿವಲಿಂಗೇಗೌಡ. ನಂತರ ತಪ್ಪಿನ ಅರಿವಾಗಿ 'ಕ್ಷಮಿಸಿ ಜೆಡಿಎಸ್ - ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಅಂತಾ ಕೇಳಿದ ಶಾಸಕ ಶಿವಲಿಂಗೇಗೌಡ. 

ಸಿಎಂ ಸಿದ್ದರಾಮಯ್ಯರ ಮೇಲೆ ಒಂದೇ ಒಂದು ಅಪಾದನೆ ಇದ್‌ರೆ ಅದನ್ನು ನೀವು ಪ್ರೂವ್ ಮಾಡಿ ಎಂದು ವೇದಿಕೆ ಮೇಲೆ ಬಹಿರಂಗ ಸವಾಲು ಹಾಕಿದರು. ಟಿಜೆ ಅಬ್ರಹಾಂ ಬಹಿರಂಗ ಚರ್ಚೆಗೆ ಬರಲಿ. ಜೆಡಿಎಸ್-ಬಿಜೆಪಿ ಶಾಸಕರಿಗೆ ನಾಯಕರಿಗೆ ನಾನು ಕರೆ ಕೊಡ್ತೇನೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಅಂದ್ರೆ ಸಾಕ್ಷಿ ಕೊಡಿ. ನೀವು ಹೇಳಿದ ಶಿಕ್ಷೆಯನ್ನು ನಾನು ಅನುಭವಿಸುತ್ತೇನೆ. ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಬರಲು ನೀವು ಪಾದಯಾತ್ರೆ ಮಾಡುತ್ತಿದ್ದೀರಿ. ನಿಮ್ಮ ಬೊಮ್ಮಾಯಿ ಅವರ 4 ವರ್ಷದ ಆಡಳಿತದಲ್ಲಿ 18 ಪ್ರಕರಣಗಳಲ್ಲಿ ನಿಮ್ಮ ಮೇಲೆ ಆಪಾದನೆ ಇದೆ. ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡೋಕೆ ಕಾದ್ರೂ ನೀವು ಸಮಯ ಕೊಡಲಿಲ್ಲ.
ಮಾನ್ಯ ವಿಜಯೇಂದ್ರ ಚೆಕ್ ಮುಖಾಂತರ ಲಂಚ ಪಡೆದುಕೊಂಡು ಕಿಕ್ ಬ್ಯಾಕ್ ಪಡೆದುಕೊಂಡಿದ್ದೀರಿ. ನೀವು ಭ್ರಷ್ಟಾಚಾರದ ಬಗ್ಗೆ ಮಾತಾಡ್ತೀರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಖಂಡಿಸಿ ಡಿ.13ರಂದು ಬೃಹತ್ ಪ್ರತಿಭಟನೆ: ಬಿ.ವೈ.ವಿಜಯೇಂದ್ರ

ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯ? ಬೇನಾಮಿ ಕಂಪನಿಗಳಲ್ಲಿ ಭ್ರಷ್ಟಾಚಾರದಿಂದ ಪಡೆದ ಹಣ ಹೂಡಿಕೆ ಮಾಡಿದ್ದೀರಿ. ಅಂದಿನ ಬಿಜೆಪಿ ಸರ್ಕಾರದಲ್ಲಿ ಆಗಿದ್ದ ಹಗರಣಗಳ ಬಗ್ಗೆ ನಿಮಗೆ ಗೊತ್ತಿಲ್ಲ. ಬಿಜೆಪಿ ಕಾಲದ ಎಲ್ಲ ಹಗರಣಗಳ ತನಿಖೆ ಮಾಡ್ತೇವೆ. ಭ್ರಷ್ಟರು, ನೀಚರು, ಎಲ್ಲರೂ ಬಿಜೆಪಿಯವರೇ. ಏಯ್ ಅಬ್ರಾಹಂ ನೀನು ಜೋಕರ್ ಕೆಲಸ, ಮಾನಗೆಟ್ಟ ಕೆಲಸ ಮಾಡಬೇಡ. ಮರ್ಯಾದಸ್ಥರನ್ನು ಬೀದಿಗೆ ಎಳೆಯೋ ಕೆಲಸ ಮಾಡಬೇಡ. ನೀನು ತಲೆಹಿಡಿಯೋ ಕೆಲಸ ಮಾಡಬೇಡ. ಬಾ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹರಿಹಾಯ್ದರು.

click me!