ದಲ್ಲಾಳಿಗಳ ಹಾವಳಿ: ನಾಡಕಚೇರಿ ಉಪತಹಸೀಲ್ದಾರ್‌ಗೆ ಶಾಸಕ ಮಂಜು ತರಾಟೆ

Published : Jul 26, 2023, 12:07 AM IST
ದಲ್ಲಾಳಿಗಳ ಹಾವಳಿ: ನಾಡಕಚೇರಿ ಉಪತಹಸೀಲ್ದಾರ್‌ಗೆ ಶಾಸಕ ಮಂಜು ತರಾಟೆ

ಸಾರಾಂಶ

ತಾಲೂಕಿನ ರಾಮನಾಥಪುರ ಹೋಬಳಿಯ ನಾಡ ಕಚೇರಿಗೆ ಶಾಸಕ ಎ. ಮಂಜು ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಉಪತಹಸೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಅರಕಲಗೂಡು (ಜು.25):  ತಾಲೂಕಿನ ರಾಮನಾಥಪುರ ಹೋಬಳಿಯ ನಾಡ ಕಚೇರಿಗೆ ಶಾಸಕ ಎ. ಮಂಜು ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಉಪತಹಸೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮ ಲೆಕ್ಕಿಗರ ವರದಿಯನ್ನು ಕೇಳದೆ ವೃದ್ಧಾಪ್ಯ ವೇತನ ಮಾಡಿ ಕೊಟ್ಟಿದ್ದೀರಿ. ನೀವು ಮಾಡಿಕೊಡಲ್ಲ. ಬದಲಾಗಿ ದಲ್ಲಾಳಿ ತಂದು ಕೊಡುತ್ತಾನೆ. ಆಗ ನೀವು ಮಾಡುತ್ತೀರಿ. ಫಲಾನುಭವಿಯ ಬಗ್ಗೆ ಮಾಹಿತಿಯನ್ನು ಗ್ರಾಮ ಲೆಕ್ಕಿಗರಿಂದ ಪಡೆಯುವುದಿಲ್ಲ. ಅ ವ್ಯಕ್ತಿ ಗ್ರಾಮದಲ್ಲಿ ಹೋಗಿ ಹಣ ನೀಡಿ ಮಾಡಿಸಿಕೊಂಡು ಬಂದೆ ಎಂದು ಹೇಳುತ್ತಾನೆ. ಆಗ ವಿಎ ಗೌರವ ಏನಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಉರುಳಿಸಲು ಎಚ್‌ಡಿಕೆ ಅಪ್ಪನಿಂದಲೂ ಸಾಧ್ಯವಿಲ್ಲ’ ಕುಮಾರಸ್ವಾಮಿ ವಿರುದ್ಧ ಮೊಯ್ಲಿ ಕಿಡಿ

ಈ ವೇಳೆ ಸಾರ್ವಜನಿಕರು ನಮ್ಮ ಗ್ರಾಮದಲ್ಲಿ ಕೆಲವರಿಗೆ ಇನ್ನು 50 ವರ್ಷವೇ ಆಗಿಲ್ಲ. ಅವರಿಗೆಲ್ಲ ವೃದ್ಧಾಪ್ಯ ವೇತನ ಮಾಡಿಕೊಟ್ಟಿದ್ದಾರೆ ಎಂದಾಗ, ಉಪತಹಸೀಲ್ದಾರ್‌ ಅವರು, ಈ ಕುರಿತು ಪರಿಶೀಲಿಸುತ್ತೇನೆ. ನಾನು ಹಾಗೆ ಮಾಡಿಲ್ಲ ಎಂದಾಗ, ತಲೆಹರಟೆ ಮಾಡಬೇಡ. 50 ವರ್ಷ ಒಳಪಟ್ಟವರ ಮಾಹಿತಿಯನ್ನು ತಹಸೀಲ್ದಾರ್‌ ಅವರಿಗೆ ನೀಡಲಾ ಎಂದು ಸಿಟ್ಟಾದರು.

ಇದಕ್ಕೆ ಉಪತಹಸೀಲ್ದಾರ್‌ ಪ್ರತಿಕ್ರಿಯಿಸಿ, ಡಾಕ್ಟರ್‌ ಸರ್ಟಿಫಿಕೇಟ್‌ ಇಲ್ಲದೆ ಮಾಡಿಲ್ಲ ಎಂದರು. ಆಗ ಶಾಸಕರು, ಸಹಿ ಡಾಕ್ಟರ್‌ ಅವರದೇ ಎಂದು ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದ ಅವರು, ವಿಎ ಅವರಿಗೆ ಹೇಳಿ ಪರಿಶೀಲಿಸಬೇಕು. ಅವರು ಇರುವುದೇ ಪರಿಶೀಲಿಸಲು ಎಂದು ಹೇಳಿದರು.

ಸಾರ್ವಜನಿಕರು ಕಚೇರಿಗೆ ಬಂದಾಗ ಗೌರವದಿಂದ ಮಾತನಾಡಿಸಬೇಕು. ಕಾನೂನಿನ ಬಗ್ಗೆ ತಿಳಿಸಬೇಕು. 15 ದಿನದೊಳಗೆ ವಿಎ ಮತ್ತು ಉಪತಹಸೀಲ್ದಾರ್‌ ಅವರು ತಪ್ಪನ್ನು ಸರಿಪಡಿಸಿಕೊಂಡು ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು. ಈ ವೇಳೆ ತಹಸೀಲ್ದಾರ್‌ ಬಸವರೆಡ್ಡಪ್ಪ ರೋಣದ್‌ ಇದ್ದರು.

ಹಾಸನ: ಆಲೂರು ಬಳಿ ಇನ್ನೋವಾ ಕಾರು-ಟಿಪ್ಪರ್ ಮಧ್ಯೆ ಅಪಘಾತ, ನಾಲ್ವರ ದುರ್ಮರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!