ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್ ತೂಕದಲ್ಲಿ ವ್ಯತ್ಯಾಸ, ಶೇ. 25 ಸಿಲಿಂಡರ್‌ಗಳಲ್ಲಿ ಗ್ಯಾಸ್ ಕಡಿತ ಪತ್ತೆ!

Published : Sep 28, 2026, 06:20 PM IST
LPG

ಸಾರಾಂಶ

'ಮಿಷನ್ ನಿಖಾರಾ' ಅಭಿಯಾನದಡಿ ರಾಜ್ಯಾದ್ಯಂತ ಎಲ್‌ಪಿಜಿ ಘಟಕಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಸಿಲಿಂಡರ್‌ಗಳ ತೂಕದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳು ಕಂಡುಬಂದಿದ್ದು, ಇಲಾಖೆಯು ದಂಡ ವಿಧಿಸಿದೆ. ಗ್ರಾಹಕರು ಸಿಲಿಂಡರ್ ಪಡೆಯುವಾಗ ಕಡ್ಡಾಯವಾಗಿ ತೂಕ ಪರಿಶೀಲಿಸುವಂತೆ ಸಚಿವರು ಸಲಹೆ ನೀಡಿದ್ದಾರೆ.

ಬೆಂಗಳೂರು: ಗ್ರಾಹಕರ ಹಿತಾಸಕ್ತಿ ರಕ್ಷಣೆ ಹಾಗೂ ಪ್ರತಿಯೊಬ್ಬ ಗ್ರಾಹಕನಿಗೂ ನಿಖರವಾದ ಪ್ರಮಾಣದ ಅಡುಗೆ ಅನಿಲ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇತ್ತೀಚೆಗೆ 'ಮಿಷನ್ ನಿಖಾರಾ' ಅಭಿಯಾನದಡಿ ರಾಜ್ಯಾದ್ಯಂತ ಎಲ್‌ಪಿಜಿ ಘಟಕಗಳ ಮೇಲೆ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದರು. ಈ ವೇಳೆ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 24ರಂದು ನಡೆದ ಕಾರ್ಯಾಚರಣೆಯ ವೇಳೆ, ಪರಿಶೀಲಿಸಲಾದ ಸಿಲಿಂಡರ್‌ಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳು ಕಂಡುಬಂದಿದ್ದು, ಇಲಾಖೆಯು ಪ್ರಕರಣ ದಾಖಲಿಸಿ ದಂಡ ವಿಧಿಸಿದೆ.

ಕಾನೂನು ಮಾಪನಶಾಸ್ತ್ರ ಇಲಾಖೆಯು ಕರ್ನಾಟಕದಾದ್ಯಂತ ಕಾರ್ಯಾಚರಣೆಯಲ್ಲಿದ್ದ ಒಟ್ಟು 17 ಎಲ್‌ಪಿಜಿ ಬಾಟ್ಲಿಂಗ್ ಘಟಕಗಳನ್ನು ಪರಿಶೀಲನೆಗೆ ಒಳಪಡಿಸಿತು. ಈ ಪೈಕಿ ಬಿಪಿಸಿಎಲ್ (BPCL), ಎಚ್‌ಪಿಸಿಎಲ್ (HPCL) ಮತ್ತು ಐಒಸಿಎಲ್ (IOCL) ಕಂಪನಿಗಳ ತಲಾ 4, ಟೋಟಲ್ ಎನರ್ಜೀಸ್‌ನ 2 ಹಾಗೂ 3 ಖಾಸಗಿ ಬಾಟ್ಲಿಂಗ್ ಘಟಕಗಳು ಸೇರಿದ್ದವು.

ವ್ಯತ್ಯಾಸ ಕಂಡು ಬಂದ ಸಿಲಿಂಡರ್!

ತಪಾಸಣೆಯ ವೇಳೆ ಒಟ್ಟು 1,530 ತುಂಬಿದ ಸಿಲಿಂಡರ್‌ಗಳನ್ನು ತೂಕ ಮಾಡಲಾಗಿದ್ದು, ಕಡಿಮೆ ಅನಿಲ ಹೊಂದಿದ್ದ ಸಿಲಿಂಡರ್‌ಗಳು (25%) ಕಂಡುಬಂದಿದೆ. ತಪಾಸಣೆಗೊಳಪಟ್ಟ 382 ಸಿಲಿಂಡರ್‌ಗಳಲ್ಲಿ (ಶೇ. 25) ಘೋಷಿತ ಪ್ರಮಾಣಕ್ಕಿಂತ ಕಡಿಮೆ ಅನಿಲ ಪತ್ತೆಯಾಗಿದೆ. ಆದರೆ, ಇವು ನಿಯಮಾವಳಿಯ ಅನುಮತಿಸಬಹುದಾದ ದೋಷದ ಮಿತಿಯೊಳಗೆ ಇವೆ. ಇನ್ನು ಸರಿಯಾದ ಪ್ರಮಾಣ ಹೊಂದಿದ್ದ ಸಿಲಿಂಡರ್‌ಗಳು (13.4%) ಆಗಿದ್ದು, 205 ಸಿಲಿಂಡರ್‌ಗಳಲ್ಲಿ ನಿಖರವಾದ ಪ್ರಮಾಣದ ಅನಿಲವಿತ್ತು. ಇನ್ನು ಹೆಚ್ಚಿನ ಅನಿಲ ಹೊಂದಿದ್ದ ಸಿಲಿಂಡರ್‌ಗಳು (61.6%) ಆಗಿವೆ. ಒಟ್ಟು 943 ಸಿಲಿಂಡರ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕೊಂಚ ಹೆಚ್ಚಿನ ಅನಿಲ ಪತ್ತೆಯಾಗಿದೆ. ಈ ಕಾರ್ಯಾಚರಣೆಯ ವೇಳೆ ನಿಯಮ ಉಲ್ಲಂಘನೆಗಾಗಿ 3 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ₹79,000 ದಂಡ ವಸೂಲಿ ಮಾಡಲಾಗಿದೆ.

ಗ್ರಾಹಕರ ಹಕ್ಕು, ಸಿಲಿಂಡರ್ ತೂಕ ಮಾಡಿಸಿ ಪಡೆಯಲು ಸಚಿವರ ಸಲಹೆ

ಗೃಹಬಳಕೆಯ ಸಿಲಿಂಡರ್ ತೂಕ 14.2 ಕೆಜಿ ಯಿಂದ 15.8 ಕೆಜಿ ಇರುತ್ತದೆ. ಗ್ಯಾಸ್ ತುಂಬಿದ ನಂತರ ಅದರ ತೂಕ 29.5 ಕೆಜಿಯಿಂದ to 30 ಕೆಜಿ ಗೆ ಇರಬೇಕು ಎನ್ನುವುದು ನಿಯಮ. ಒಂದು ವೇಳೆ ಅದಕ್ಕಿಂತ ಕಡಿಮೆ ಇದ್ದರೆ. ಗ್ಯಾಸ್ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ ಎನ್ನುವುದು ಸ್ಪಷ್ಟ.

"ಗ್ರಾಹಕರು ತಾವು ಪಾವತಿಸುವ ಹಣಕ್ಕೆ ತಕ್ಕಂತೆ ನಿಗದಿತ ಪ್ರಮಾಣದ ಎಲ್‌ಪಿಜಿ ಪಡೆಯುವುದು ಅವರ ಹಕ್ಕು. ಸಿಲಿಂಡರ್ ವಿತರಣೆ ಮಾಡುವ ಸಮಯದಲ್ಲಿ ಗ್ರಾಹಕರು ಕಡ್ಡಾಯವಾಗಿ ತೂಕ ಪರಿಶೀಲಿಸಿ ಪಡೆಯಬೇಕು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಸರ್ಕಾರದ ನಿಯಮಾವಳಿಗಳ ಪ್ರಕಾರ, ಎಲ್‌ಪಿಜಿ ಮಾರ್ಕೆಟಿಂಗ್ ಕಂಪನಿಗಳು ಹಾಗೂ ಸ್ಥಳೀಯ ವಿತರಕರು (Distributors) ತಮ್ಮ ವಿತರಣಾ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ತೂಕದ ಉಪಕರಣಗಳನ್ನು (Weighing machines) ಒದಗಿಸುವುದು ಕಡ್ಡಾಯವಾಗಿದೆ.

ಗ್ರಾಹಕರು ಸಿಲಿಂಡರ್ ಪಡೆಯುವ ಮುನ್ನ ತೂಕ ಮಾಡಲು ಏಜೆನ್ಸಿ ಸಿಬ್ಬಂದಿಯನ್ನು ಕೋರಬಹುದು. ಒಂದು ವೇಳೆ ಅಳತೆಯಲ್ಲಿ ವ್ಯತ್ಯಾಸ ಅಥವಾ ಉಲ್ಲಂಘನೆ ಕಂಡುಬಂದಲ್ಲಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1800 599 1100 ಗೆ ಕರೆ ಮಾಡಿ ದೂರು ನೀಡಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧನ್ಯವಾದ ಕನ್ನಡಿಗರೇ, ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ ವೆಬ್‌ಸೈಟ್ ಈಗ ನಂಬರ್ 1!
ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವ ಮುನ್ನ ಎಚ್ಚರಿಕೆ; ಸೈಬರ್ ವಂಚನೆ ಬಗ್ಗೆ ಪೊಲೀಸ್ ಅಲರ್ಟ್, ಅ.20 ಲಾಸ್ಟ್ ಡೇಟ್!