ಸಚಿವ ನಿರಾಣಿಯಿಂದಲೂ ಕಬ್ಬಿನ ಹಣ ಬಾಕಿ

By Kannadaprabha NewsFirst Published Oct 2, 2021, 7:40 AM IST
Highlights
  •  ನಾಲ್ಕು ಸಕ್ಕರೆ ಕಾರ್ಖಾನೆಗಳು ರೈತರ ಕೋಟ್ಯಂತರ ರು. ಕಬ್ಬಿನ ಹಣ ಬಾಕಿ ಉಳಿಸಿಕೊಂಡಿವೆ.
  • ಸರ್ಕಾರದ ಬೃಹತ್‌ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಸಮೂಹದ ಎರಡು ಸಕ್ಕರೆ ಕಾರ್ಖಾನೆ 

ಬೆಂಗಳೂರು (ಅ.02):  ರಾಜ್ಯ ಸರ್ಕಾರದ ಬೃಹತ್‌ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ (Murgesh Nirani) ಸಮೂಹದ ಎರಡು ಸಕ್ಕರೆ ಕಾರ್ಖಾನೆ ಸೇರಿದಂತೆ ರಾಜಕಾರಣಿಗಳ (Politics) ಸುಪರ್ದಿಯಲ್ಲಿರುವ ನಾಲ್ಕು ಸಕ್ಕರೆ ಕಾರ್ಖಾನೆಗಳು ರೈತರ ಕೋಟ್ಯಂತರ ರು. ಕಬ್ಬಿನ ಹಣ ಬಾಕಿ ಉಳಿಸಿಕೊಂಡಿವೆ.

ನಿರಾಣಿ ಸಮೂಹದ ಎರಡು ಸಕ್ಕರೆ ಕಾರ್ಖಾನೆ ಹಾಗೂ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ಎಂ.ಬಿ. ಪಾಟೀಲ್‌ (MB Patil) ಮಾಲೀಕತ್ವದ ಒಂದು ಕಾರ್ಖಾನೆ ಹಾಗೂ ಕಾಂಗ್ರೆಸ್‌ ಶಾಸಕ ಆನಂದ್‌ ಸಿದ್ದು ನ್ಯಾಮಗೌಡ ಅಧ್ಯಕ್ಷತೆಯ ಒಂದು ಕಾರ್ಖಾನೆ ರೈತರ ಹಣ ಬಾಕಿ ಉಳಿಸಿಕೊಂಡಿವೆ.

ಮಂಡ್ಯ ಮೈಶುಗರ್ ಕಾರ್ಖಾನೆಗೆ ಬಿಡ್ ಮಾಡಲ್ಲ, ತಮ್ಮ ಮೇಲಿನ ಆರೋಪಕ್ಕೆ ನಿರಾಣಿ ಭಾವುಕ

ಈ ಸಂಬಂಧ ಸಕ್ಕರೆ ಸಚಿವ ಶಂಕರ್‌ ಮುನೇನಕೊಪ್ಪ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ (Sugar Factory) ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದು, ರೈತರಿಗೆ (Farmers) ಹಣ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಎರಡು ದಿನದಲ್ಲಿ ಹಣ ಪಾವತಿಸಬೇಕು. ತಪ್ಪಿದರೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಬಸವೇಶ್ವರ ಶುಗರ್‌, ಕೋರ್‌ ಗ್ರೀನ್‌ ಶುಗ​ರ್‍ಸ್ ಕಾರ್ಖಾನೆಗಳಿಂದ ಬಾಕಿ ವಸೂಲಾತಿಗಾಗಿ ಜಿಲ್ಲಾಧಿಕಾರಿಗಳ ಮೂಲಕ ನೋಟಿಸ್‌ ನೀಡಲಾಗಿದೆ. ಕೂಡಲೇ ಪಾವತಿ ಮಾಡದಿದ್ದರೆ ಉಳಿದ ಕಾರ್ಖಾನೆಗಳಿಗೂ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು ಎಂದು ತಿಳಿದು ಬಂದಿದೆ.

ಯಾರಿಂದ ಎಷ್ಟುಬಾಕಿ?

ನಿರಾಣಿ ಶುಗ​ರ್ಸ್ ಲಿಮಿಟೆಡ್‌ (ಮುಧೋಳ, ಬಾಗಲಕೋಟೆ) 5.67 ಕೋಟಿ ರು.

ನಿರಾಣಿ ಸಮೂಹದ ಸಾಯಿಪ್ರಿಯಾ ಶುಗ​ರ್‍ಸ್ (ಹಿಪ್ಪರಗಿ, ಬಾಗಲಕೋಟೆ) 4.15 ಕೋಟಿ ರು.

ಕಾಂಗ್ರೆಸ್‌ ಶಾಸಕ ಆನಂದ ಸಿದ್ದು ನ್ಯಾಮಗೌಡರ ಜಮಖಂಡಿ ಶುಗ​ರ್‍ಸ್ 1.05 ಕೋಟಿ ರು.

ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್‌ರ ಬಸವೇಶ್ವರ ಶುಗ​ರ್‍ಸ್ (ಕಾರಜೋಳ, ವಿಜಯಪುರ) 22.11 ಕೋಟಿ ರು.

ಸೋಮೇಶ್ವರ ಎಸ್‌ಎಸ್‌ಕೆ ಲಿಮಿಟೆಡ್‌ 69 ಲಕ್ಷ ರು.

ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ 2.09 ಕೋಟಿ ರು.

ಕೋರ್‌ ಗ್ರೀನ್‌ ಶುಗರ್‌ ಅಂಡ್‌ ಫä್ಯಯೆಲ್ಸ್‌ ಕಾರ್ಖಾನೆ 6.41 ಕೋಟಿ ರು.

click me!