ಒಳ್ಳೆಯ ದಿನ ಬರುತ್ತೆಂದು ಬೊಮ್ಮಾಯಿ ಹೇಳಿದ್ದಾರೆ, ಅದಕ್ಕೆ ಕಾಯುವೆ: ರೇಣು

By Kannadaprabha NewsFirst Published Oct 2, 2021, 7:22 AM IST
Highlights
  • ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ
  • ಕಸ ಗುಡಿಸಬೇಕು ಎಂದರೂ ಅದನ್ನು ಕೂಡ ನಿರ್ವಹಿಸುತ್ತೇನೆ.

ಬೆಂಗಳೂರು (ಅ.02): ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ. ಒಂದು ವೇಳೆ ಕಸ ಗುಡಿಸಬೇಕು ಎಂದರೂ ಅದನ್ನು ಕೂಡ ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಅವರು ಒಳ್ಳೆಯ ದಿನ ಬರುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಂಚಲಚನ ಮೂಡಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ

ಅದಕ್ಕಾಗಿ ಕಾಯುತ್ತೇನೆ ಎಂದು ಮುಖ್ಯಮಂತ್ರಿಗಳ ನೂತನ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ಪೂಜೆ ಸಲ್ಲಿಸಿ ಅವರು ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಅಶೋಖ್‌ ಖೇಣಿ ಮತ್ತಿತರರು ರೇಣುಕಾಚಾರ್ಯ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು.

 ಹಿಂದೆ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಅವರೂ ಆಶೀರ್ವಾದ ಮಾಡಿದ್ದರು. ಈಗ ಬೊಮ್ಮಾಯಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದೇನೆ. ಅದೇ ರೇಣುಕಾಚಾರ್ಯ, ಅದೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ. ನಾನು ಯಾವತ್ತೂ ಬದಲಾಗುವುದಿಲ್ಲ. ಪಕ್ಷ ಹಾಗೂ ಸಂಘಟನೆ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಂಪರ್ ಹುದ್ದೆ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಆಪ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. 

ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಮತ್ತು ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ

ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಸ್ಥಾನಮಾನಗಳನ್ನು ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‌ಮರಳಿ ನೀಡಿದ್ದಾರೆ.  ಹೊನ್ನಾಳಿ ಶಾಸಕರಾಗಿರುವ ಎಂ ಪಿ ರೇಣುಕಾಚಾರ್ಯ. ಶೃಂಗೇರಿ ಮಾಜಿ ಶಾಸಕರಾಗಿರುವ ಡಿ ಎನ್ ಜೀವರಾಜ್ ಮಹತ್ವದ ಹುದ್ದೆಗಳು ದೊರೆತಿವೆ.

ಹಿಂದಿನ ಸರ್ಕಾರದ ಅವಧಿಯಲ್ಲಿಯು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರಿಗೆ ರೇಣುಕಾಚಾರ್ಯ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಅಧಿಕೃತ ಆದೇಶ ನೀಡಲಾಗಿದೆ.

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಪಡೆಯಲು ರೇಣುಕಾಚಾರ್ಯ ಯತ್ನಿಸಿದ್ದು ಅನೇಕ ಹೊಸಬರಿಗೆ ಮಣೆ ಹಾಕಲಾಗಿದ್ದು,  ರಾಜಕೀಯ ಕಾರ್ಯದರ್ಶಿ ಸ್ಥಾನ ಇದೀಗ ಮತ್ತೊಮ್ಮೆ ರೇಣುಕಾಚಾರ್ಯ ಅವರ ಪಾಲಿಗೆ ಒಲಿದಿದೆ. 

ಯಡಿಯೂರಪ್ಪ ಅವರ ಸೂಚನೆಯಂತೆ ಸಿಎಂ ಬೊಮ್ಮಾಯಿ ಅಧಿಕಾರ ನಡೆಸುತ್ತಿದ್ದಾರೆ ಎನ್ನುವ ಅನೇಕ ರೀತಿಯ ಆರೋಪಗಳ ನಡುವೆಯೂ ಇದೀಗ ಅವರ ಆಪ್ತರಿಗೆ ಸ್ಥಾನ ದೊರೆತಿದೆ. 

click me!