ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ

By Suvarna News  |  First Published Aug 31, 2021, 10:13 PM IST

* ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ  ಕಾರ್ಯಾಗಾರ 
* ಎಪಿಎಫ್ ವತಿಯಿಂದ ಉಚಿತ ತರಬೇತಿ
* ಮುಖ್ಯೋಪಾಧ್ಯರು ಹಾಗೂ ಪ್ರಾಂಶುಪಾಲರಿಗೆ ತರಬೇತಿ
* ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ಟ್ರೈನಿಂಗ್ 


ಬೆಂಗಳೂರು, (ಆ.31): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್  ಇದರ ಸಂಯುಕ್ತ ಆಶ್ರಯದಲ್ಲಿ ಇಲಾಖೆಯ ವಸತಿ ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಆನ್ ಲೈನ್ ಮೂಲಕ ವಿವಿಧ ರೀತಿಯ ಉಚಿತ ತರಬೇತಿ ಕಾರ್ಯಾಗಾರ ನಡೆಯುತ್ತಿದ್ದು, ಯಶಸ್ವಿಯಾಗಿ ಸಾಗುತ್ತಿದೆ. 

 ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯರು ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ನಾಯಕತ್ವ ಗುಣ ವೃದ್ಧಿ, ತಂಡ ನಿರ್ವಹಣೆ ವಿಚಾರಗಳ ಕುರಿತು ತರಬೇತಿ ನೀಡಲಾಗುತ್ತಿದೆ. 

Tap to resize

Latest Videos

ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ: ಗಮನ ಸೆಳೆದ ಮಂಗಳೂರು ಶಿಕ್ಷಕಿ
 
ಶಿಕ್ಷಕರಲ್ಲಿ ಇಂಗ್ಲಿಷ್ ಭಾಷೆ ವೃದ್ಧಿ ಹಾಗೂ ಸಂವಹನ ಗುಣಮಟ್ಟ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು ಮಾಡುವ ಪಾಠದಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಸುಲಲಿತವಾಗಿ ಅರ್ಥವಾಗಬೇಕು ಹಾಗೂ ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. 
 
*ಆಂಗ್ಲ ಭಾಷಾ ಶಿಕ್ಷಕರಿಂದ ವಿವಿಧ ಶಿಕ್ಷಕರಿಗೆ ತರಬೇತಿ:
 ಇಂಗ್ಲಿಷ್ ಶಿಕ್ಷಕರಿಗೆ ಉತ್ತಮ ‘ಸ್ಪೋಕನ್ ಇಂಗ್ಲಿಷ್ ತರಬೇತಿ’ ಪೂರ್ಣಗೊಂಡ ಬಳಿಕ ಅವರು ಇನ್ನುಳಿದ ವಿವಿಧ ಭಾಷಾ ಹಾಗೂ ವಿಷಯಗಳ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ. ಇಂಗ್ಲಿಷ್ ಭಾಷಾ ಗುಣಮಟ್ಟ ವೃದ್ಧಿಯಾಗಿ ಉತ್ತಮ ಕಲಿಕಾ ವಾತವರಣ ಸೃಷ್ಟಿಯಾಗಬೇಕು ಎಂಬುವುದು ಇದರ ಉದ್ದೇಶವಾಗಿದೆ.

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಾಂಗ ಅಥವಾ ಉದ್ಯೋಗಕ್ಕೆ ಹೋಗುವಾಗ ಅವರಲ್ಲಿ ಇಂಗ್ಲಿಷ್ ಸಂವಹನ ಗುಣಮಟ್ಟ ಉತ್ತಮವಾಗಿ ಬೆಳೆಯಲು ಈ ತರಬೇತಿ ನೀಡಲಾಗುತ್ತಿದೆ.

click me!