ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯಾ? ಇಲ್ಲಿವೆ ಕೇಂದ್ರದ ಹೊಸ ರೂಲ್ಸ್

By Suvarna NewsFirst Published Jul 28, 2020, 12:10 PM IST
Highlights

ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಇವುಗಳನ್ನು ಪಾಲಿಸುವುದು ಕಡ್ಡಾಯ. ಏನೇನು ರೂಲ್ಸ್..? ಇಲ್ಲಿ ಓದಿ

ಬೆಂಗಳೂರು(ಜು.28): ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಇವುಗಳನ್ನು ಪಾಲಿಸುವುದು ಕಡ್ಡಾಯ.

ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯಾ? ದ್ವಿಚಕ್ರ ವಾಹನ ಸವಾರರು ಓದಲೇಬೇಕಾದ ಸುದ್ದಿ ಇದು. ನಿಮ್ಮ ಬಳಿ ಟೂ ವಿಲ್ಹರ್ ಇದ್ದರೆ ಕೇಂದ್ರ ಜಾರಿ ಮಾಡಿರುವ ಈ ಹೊಸ ನಿಯಮಗಳನ್ನು ಜನರು ಅರಿತಿರಲೇ ಬೇಕಾಗಿದೆ.

7ನೇ ತರಗತಿ ಪುಸ್ತಕದಿಂದ ಟಿಪ್ಪು ಪಠ್ಯ ಕ್ಯಾನ್ಸಲ್..!

ಟೂ ವಿಲ್ಹರ್ ಗಳಿಗಾಗಿಯೇ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಇನ್ಮುಂದೆ ಬೈಕ್‌ಗಳಿಗೆ ಹ್ಯಾಂಡ್‌ಹೋಲ್ಡ್‌ ಇರುವುದು ಕಡ್ಡಾಯವಾಗಿದ್ದು, ಕೇಂದ್ರ ದ್ವಿಚಕ್ರ ವಾಹನಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಹಿಂಬದಿ ಸವಾರರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಹ್ಯಾಂಡ್‌ಹೋಲ್ಡ್‌ ಕಡ್ಡಾಯವಾಗಿದ್ದು, ಸೀರೆ ಗಾರ್ಡ್‌ ಜತೆಗೆ ಹ್ಯಾಂಡ್‌ಹೋಲ್ಡ್‌, ಫುಟ್‌ರೆಸ್ಟ್‌ ಕಡ್ಡಾಯ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ನಿಯಮ ಜಾರಿ ಮಾಡಿದೆ.

ಅತಿವೃಷ್ಟಿ: ಚಿಕ್ಕಮಗಳೂರು ಜಿಲ್ಲೆಗೆ 267 ಕೋಟಿ ಪರಿಹಾರಧನ

ಕೇಂದ್ರ ಮೋಟಾರು ವಾಹನ ನಿಯಮಕ್ಕೆ ಕೆಲ ಮಾರ್ಪಾಡು ಮಾಡಲಾಗಿದ್ದು, ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲಾಗಿದೆ. ದ್ವಿಚಕ್ರ ವಾಹನದ ಹೊಸ ಮಾರ್ಗಸೂಚಿ ಹೀಗಿವೆ:

  • ಬೈಕ್ ನ ಹಿಂಬದಿ ಹ್ಯಾಂಡ್ ಹೋಲ್ಡ್ ಕಡ್ಡಾಯ
  • ಎರಡೂ ಬದಿಗಳಲ್ಲಿ ಪಿಲಿಯನ್ ಸವಾರರಿಗೆ ಫುಟ್‌ರೆಸ್ಟ್‌ ಇರಬೇಕು
  • ಹಿಂಬದಿ ಸವಾರರ ಬಟ್ಟೆ ಸಿಕ್ಕಿಹಾಕಿಕೊಳ್ಳದಂತೆ ಅಗತ್ಯ ಕ್ರಮ ವಹಿಸಬೇಕು
click me!