ಸದನಕ್ಕೆ ಆಗಮಿಸದ ಸಚಿವರು: ಸ್ಪೀಕರ್‌ ಖಾದರ್ ಗರಂ

Published : Jul 18, 2023, 06:36 AM IST
ಸದನಕ್ಕೆ ಆಗಮಿಸದ ಸಚಿವರು: ಸ್ಪೀಕರ್‌ ಖಾದರ್ ಗರಂ

ಸಾರಾಂಶ

ಸದನ ಸಮಾವೇಶಗೊಂಡರೂ ಸದನಕ್ಕೆ ಕೆಲವು ಸಚಿವರು ಆಗಮಿಸದಿರುವುದಕ್ಕೆ ಗರಂ ಆದ ಸಭಾಧ್ಯಕ್ಷ ಯು.ಟಿ.ಖಾದರ್‌, ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸೂಚಿಸಿದರು.

ಬೆಂಗಳೂರು (ಜು.18) :  ಸದನ ಸಮಾವೇಶಗೊಂಡರೂ ಸದನಕ್ಕೆ ಕೆಲವು ಸಚಿವರು ಆಗಮಿಸದಿರುವುದಕ್ಕೆ ಗರಂ ಆದ ಸಭಾಧ್ಯಕ್ಷ ಯು.ಟಿ.ಖಾದರ್‌, ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸೂಚಿಸಿದರು.

ಸೋಮವಾರ ಸದನ ಆರಂಭಗೊಂಡಾಗ ಸಚಿವರ ಹಾಜರಾತಿ ಇರಲಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಸಭಾಧ್ಯಕ್ಷರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಪ್ರತಿದಿನವೂ ತಡ ಮಾಡುವುದು ಸರಿಯಲ್ಲ. ಸಚಿವರು ಸದನಕ್ಕೆ ಸರಿಯಾದ ಸಮಯಕ್ಕೆ ಬರುವಂತೆ ಗಮನಹರಿಸಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ಸೂಚಿಸಿದರು. ಸಚಿವರು ಸಮಯ ಪಾಲನೆ ಮಾಡಬೇಕು. ಸಮಯ ಸದ್ಬಳಕೆಯಾಗಬೇಕು ಎಂದರು.

ರಾಜ್ಯ ಸಚಿವರ ಜತೆ ಇಂದಿನ ರಾಹುಲ್‌ ಸಭೆ ಮತ್ತೆ ಮುಂದೂಡಿಕೆ!

ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಆರ್‌.ಅಶೋಕ್‌ ಮಾತನಾಡಿ, ಇಂಧನ ಸಚಿವ ಕೆ.ಜೆ.ಜಾಜ್‌ರ್‍ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರೂ ಇಲ್ಲ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಸಚಿವರು ಇಲ್ಲದಿದ್ದರೆ ಕಲಾಪ ನಡೆಯುವುದಾದರೂ ಹೇಗೆ? ಸರ್ಕಾರಕ್ಕೆ ಸಡಿಲ ಕೊಡಬೇಡಿ ಎಂದರು.

ಸರ್ಕಾರ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ವಿಧಾನಸಭೆಯ ಘನತೆಗೆ ತಕ್ಕದ್ದಲ್ಲ. ಈ ರೀತಿಯಾದರೆ ಸದನ ಘನತೆ, ಗೌರವ ಏನಾಗುತ್ತದೆ ಎಂದರು.

ದಲಿತರ ಜಮೀನು ಕಾಪಾಡಲು ಕಾಯ್ದೆ ಶೀಘ್ರ ತಿದ್ದುಪಡಿ: ಸಿದ್ದರಾಮಯ್ಯ

ಆಶೋಕ್‌ ಮಾತನಾಡಿ, ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿದ್ದ ವೇಳೆ ಸರ್ಕಾರದ ಇಂತಹ ಅಸಡ್ಡೆಗೆ ತಕ್ಕ ಶಾಸ್ತಿ ಮಾಡುತ್ತಿದ್ದರು. ಒಂದು ದಿನ ಸಭಾಧ್ಯಕ್ಷರು ಹೊರನಡೆದರು. ಅವರ ಮನವೊಲಿಸಲು ಆಗ ಎರಡು ಗಂಟೆ ಬೇಕಾಯಿತು ಎಂದು ನೆನಪು ಮಾಡಿಕೊಂಡರು. ಅಷ್ಟರಲ್ಲಿ ಹಲವು ಸಚಿವರು ಸದನಕ್ಕೆ ಆಗಮಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ, ಸದನಕ್ಕೆ ಸರಿಯಾದ ಸಮಯಕ್ಕೆ ಬಂದವರಿಗೆ ಬಹುಮಾನ ನೀಡುತ್ತೀರಾ? ರೋಲೆಕ್ಸ್‌ ವಾಚ್‌ ಕೊಡುತ್ತೀರಾ? ಎಂದು ಸಭಾಧ್ಯಕ್ಷರನ್ನು ಕೆಣಕಿದರು. ಆಗ ಷಡಕ್ಷರಿ, ಮೊದಲ ಬಹುಮಾನ ಚಿನ್ನದ ನಾಣ್ಯ, ಎರಡನೇ ಬಹುಮಾನ ಬೆಳ್ಳಿ ಮತ್ತು ಮೂರನೇ ಬಹುಮಾನ ಕಬ್ಬಿಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಇದನ್ನು ನಾವು ಕೊಡುವುದಿಲ್ಲ, ಷಡಕ್ಷರಿ ಕೊಡುತ್ತಾರೆ ಎಂದು ಹೇಳಿ ಮುಂದಿನ ಕಲಾಪ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ