ಟ್ರಾಫಿಕ್‌ ಪೊಲೀಸ್ ಆದ ಸಚಿವ ಖಾದರ್‌!: ಪೊಲೀಸರ ಜತೆಗೂಡಿ ಟ್ರಾಫಿಕ್‌ ಕ್ಲಿಯರ್‌!

Published : Jan 13, 2019, 08:39 AM IST
ಟ್ರಾಫಿಕ್‌ ಪೊಲೀಸ್ ಆದ ಸಚಿವ ಖಾದರ್‌!: ಪೊಲೀಸರ ಜತೆಗೂಡಿ ಟ್ರಾಫಿಕ್‌ ಕ್ಲಿಯರ್‌!

ಸಾರಾಂಶ

ಪೊಲೀಸರ ಜತೆಗೂಡಿ ಟ್ರಾಫಿಕ್‌ ಕ್ಲಿಯರ್‌ ಮಾಡಿದ ಸಚಿವ| ಸಾರ್ವಜನಿಕರಿಂದ ಸಚಿವರ ಸರಳತೆಗೆ ಪ್ರಶಂಸೆ

 

ಮಂಗಳೂರು[ಜ.13]: ಸಚಿವ ಯು.ಟಿ.ಖಾದರ್‌ ಸ್ವತಃ ಸಂಚಾರ ಪೊಲೀಸರಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಟ್ರಾಫಿಕ್‌ ಪೊಲೀಸರಿಗೆ ಸಹಕರಿಸಿದ ಪ್ರಸಂಗ ಶನಿವಾರ ನಗರದ ಪಂಪ್‌ವೆಲ್‌ ಬಳಿ ನಡೆಯಿತು.

ಮೇಲ್ಸೇತುವೆ ಕಾಮಗಾರಿಗಾಗಿ ಇಲ್ಲಿನ ಪಂಪ್‌ವೆಲ್‌ ಬಳಿ ಹೆದ್ದಾರಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು. ಖಾದರ್‌ ಅವರು ಮಧ್ಯಾಹ್ನ 12.30ರ ವೇಳೆಗೆ ಮಂಗಳೂರಿನಿಂದ ಕೊಲ್ಯದೆಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಒದ್ದಾಡುತ್ತಿರುವುದನ್ನು ಗಮನಿಸಿದ ಸಚಿವರು ಸಂಚಾರ ಪೊಲೀಸರೊಂದಿಗೆ ಸ್ವತಃ ರಸ್ತೆಗಿಳಿದು, 20 ನಿಮಿಷಗಳ ಕಾಲ ಟ್ರಾಫಿಕ್‌ ಕ್ಲಿಯರ್‌ ಮಾಡಿದರು.

ಸಂಚಾರ ದಟ್ಟಣೆ ತಹಬಂದಿಗೆ ಬಂದ ನಂತರವೇ ಸಚಿವರು ಅಲ್ಲಿಂದ ತೆರಳಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ
ಸಿದ್ದರಾಮಯ್ಯ ಸಂಪುಟದಲ್ಲಿ ಕೂಡಿ ಬಂದ ಕಾಲ: ಶತಮಾನದ ಶ್ರೇಷ್ಠ ವ್ಯಕ್ತಿತ್ವದ ರಾಜಕಾರಣಿ ಶಿವಶಂಕರಪ್ಪ