ರಾಜ್ಯ ಸರ್ಕಾರದಿಂದ 57 ಸಾವಿರ ರೈತರ ಕೃಷಿ ಸಾಲ ಮನ್ನಾ

By Kannadaprabha NewsFirst Published Feb 3, 2021, 2:01 PM IST
Highlights

ರಾಜ್ಯದ ರೈತರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್.. ಒಟ್ಟು 57 ಸಾವಿರ ರೈತರ ಸಾಲ ಮನ್ನಾ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಸಚಿವರಿಂದಲೇ ಸ್ವತಃ ಮಾಹಿತಿ ಹೊರಬಿದ್ದಿದೆ. 

ವಿಧಾನ ಪರಿಷತ್‌ (ಫೆ.03):  ರೈತರ ಸಾಲ ಮನ್ನಾ ಯೋಜನೆಯಡಿ ಈವರೆಗೆ ಬಾಕಿ ಉಳಿದಿರುವ 57 ಸಾವಿರ ಅರ್ಜಿಗಳ ಸಂಬಂಧ 295 ಕೋಟಿ ರು.ಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಕಾಂಗ್ರೆಸ್‌ನ ಆರ್‌. ಧರ್ಮಸೇನಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಲ ಮನ್ನಾ ಯೋಜನೆಯಡಿ ಬಂದ ಅರ್ಜಿಗಳನ್ನು ಇತ್ಯರ್ಥ ಮಾಡಲಾಗುತ್ತಿದೆ. ಪ್ರಸ್ತುತ 3 ಲಕ್ಷ ರು.ವರೆಗೆ ಇರುವ ಶೂನ್ಯ ಬಡ್ಡಿ ದರದ ಸಾಲದ ಮಿತಿಯನ್ನು ಹೆಚ್ಚಿಸಲು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಇನ್ನೂ ನಿವಾರಣೆಯಾಗದ ರೈತರ ಸಾಲಮನ್ನಾ ಗೊಂದಲ..! ...

ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾಲ ಮನ್ನಾ ಸಂಬಂಧ ಬಂದ 73,308 ಅರ್ಜಿಗಳ ಪೈಕಿ 3113 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಕೆಲವು ರೈತರ ಆದಾಯ ಮಿತಿ ಹೆಚ್ಚಿರುವ ಕಾರಣ ಅರ್ಜಿ ತಿರಸ್ಕರಿಸಲಾಗಿದೆ ಎಂದರು.

ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಮಾತನಾಡಿ, ರಾಜ್ಯಾದ್ಯಂತ ತಾವು ಎಲ್ಲಿಗೆ ಹೋದರೂ ಸಾಲ ಮನ್ನಾ ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

click me!