ವಾಲ್ಮೀಕಿ ದಿನಾಚರಣೆ: ವಿವಿಧ ಕ್ಷೇತ್ರಗಳ 6 ಸಾಧಕರಿಗೆ ಪ್ರಶಸ್ತಿ, ಶ್ರೀರಾಮುಲು ಘೋಷಣೆ

Published : Oct 19, 2021, 04:44 PM IST
ವಾಲ್ಮೀಕಿ ದಿನಾಚರಣೆ: ವಿವಿಧ ಕ್ಷೇತ್ರಗಳ 6  ಸಾಧಕರಿಗೆ ಪ್ರಶಸ್ತಿ, ಶ್ರೀರಾಮುಲು ಘೋಷಣೆ

ಸಾರಾಂಶ

* ವಾಲ್ಮೀಕಿ ದಿನಾಚರಣೆ ಹಿನ್ನೆಲೆ 6 ಮಂದಿಗೆ ಪ್ರಶಸ್ತಿ ಘೋಷಣೆ * ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರನ್ನ ಪ್ರಶಸ್ತಿಗೆ ಆಯ್ಕೆ * ಅಧಿಕೃತವಾಗಿ ಪ್ರಕಟಿಸಿದ ಸಚಿವ ಶ್ರೀರಾಮುಲು

ಬೆಂಗಳೂರು, (ಅ.19): ವಾಲ್ಮೀಕಿ ದಿನಾಚರಣೆ ಅಂಗವಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಸಾಧಕರನ್ನ ಗುರುತಿಸಿ ಒಟ್ಟು 6 ಮಂದಿಯನ್ನು ಪ್ರಶಸ್ತಿಗೆ (Award) ಆಯ್ಕೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಇಂದು (ಅ.19) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮುಲು, ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanthi) ಅಂಗವಾಗಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದೇವೆ. 6 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ನಾಳೆ (ಅಕ್ಟೋಬರ್ 20) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ 5 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಪ್ರದಾನ ಮಾಡುತ್ತಿದ್ದೇವೆ ಎಂದು ರಾಮುಲು ಮಾಹಿತಿ ನೀಡಿದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

* ಕೆ ಸಿ ನಾಗರಾಜ್ - ಸಾಮಾಜಿಕ ಕ್ಷೇತ್ರ - ತುಮಕೂರು
* ಲಕ್ಷ್ಮೀ ಗಣಪತಿ ಸಿದ್ಧಿ - ನಾಟಿ ವೈದ್ಯ ಸೇವೆ..ಉತ್ತರಕನ್ನಡ
* ಎಸ್ ಆರ್ ನಿರಂಜನ - ವಿಜ್ಞಾನ ಕ್ಷೇತ್ರ  ಮೈಸೂರು
* ಭಟ್ಟಲಿ ಗೂಳೆಪ್ಪ - ಪರಿಸರ ಕ್ಷೇತ್ರ - ಬಳ್ಳಾರಿ.
* ಟಿ ಅಶ್ವಥ್ ರಾಮಯ್ಯ - ಶಿಕ್ಷಣ ಸೇವೆ ಬೆಂಗಳೂರು
* ಜಂಬಯ್ಯ ನಾಯಕ  - ಪರಿಶಿಷ್ಟರ ಕಲ್ಯಾಣದ ಹೋರಾಟ ಹೊಸಪೇಟೆ

ಇದೇ ವೇಳೆ ವಾಲ್ಮೀಕಿ ಸಮುದಾಯದ ಮೀಸಲಾತಿ (Reservation) ಹೆಚ್ಚಳಕ್ಕೆ ಹೋರಾಟ ವಿಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮುಲು, ವಾಲ್ಮೀಕಿ ಸಮುದಾಯಕ್ಕೆ (Valmiki Community)  ಪ್ರತ್ಯೇಕ ಸಚಿವಾಲಯ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ. ಮೀಸಲಾತಿ ಹೋರಾಟದಿಂದ ನಾನೂ ಬಂದವನು. ನಮ್ಮ ಸರ್ಕಾರದ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ. ಆದರೆ, ಉನ್ನತ ಮಟ್ಟದ ಸಮಿತಿ ವರದಿ ಬರಬೇಕಿದೆ. ನಮ್ಮ ಸರ್ಕಾರ ಇರುವಾಗಲೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿದೆ ಎಂದು ಕೆಎಸ್‌ಆರ್‌ಟಿಸಿ ಡ್ರೈವರ್  ಸ್ಟೇಟಸ್ ಹಾಕಿರುವ ವಿಚಾರಕ್ಕೆ  ಶ್ರೀರಾಮುಲು ಮಾತನಾಡಿ, ಸಾರಿಗೆ ನೌಕರರಿಗೆ ವೇತನ ಸಮಸ್ಯೆ ಆಗ್ತಿಲ್ಲ.  ಮೊನ್ನೆ ಸರ್ಕಾರದಿಂದ 171 ಕೋಟಿ ವೇತನ ಬಿಡುಗಡೆ ಆಗಿದೆ.. ನಾನು ಇಲಾಖೆ ಹೊಣೆ ತಗೊಂಡ ನಂತರ ಮುಷ್ಕರದ ವೇಳೆಯಲ್ಲಾದ ಅಂತರ ನಿಗಮದ ವರ್ಗಾವಣೆ,  ಅಮಾನತು ರದ್ದುಪಡಿಸಿದ್ದೇನೆ. ಸ್ಟೇಟಸ್ ಹಾಕಿರುವ ಚಾಲಕನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾದ ಡಿಪೋ ಮ್ಯಾನೇಜರ್ ಗೆ ನೊಟೀಸ್ ಕೊಡಲಾಗಿದೆ. ಸ್ಪಷ್ಟೀಕರಣ ಬಂದ ನಂತರ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು